ಭಾವಕ್ಯದ ಬೆಳಕು ಪಸರಿಸಿದ ಮಹಾಸಂತ ಶರೀಫ

0
73

ಕಲಬುರಗಿ: ಕುರಾನ-ಪುರಾಣ ಒಂದೇ ಎಂದು ಹೇಳಿ ನಾಮಾಜು-ನಮನಗಳು ಒಂದು ಮಾಡಿ, ಮಸೀದಿ-ಮಂದಿರ ಬೆರಸಿ ತೋರಿಸಿ, ಭಾವಕ್ಯದ ಬೆಳಕು ಪಸರಿದ ಮಹಾ ಸಂತ ಶರೀಫ ಎಂದು ಜನಪ್ರಿಯ ಸಾಂಸ್ಕøತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಬೆಂಗಳೂರು ಇವರುಗಳ ಸಹಯೋಗದಲ್ಲಿ ನಗರದ ಶಿವಶಕ್ತಿ ನಗರದ ದೇವಿ ಉದ್ಯಾನವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕಾರ್ತಿಕ ರಂಗೋತ್ಸವ’ ಸಾಂಸ್ಕøತಿಕ ಕಾರ್ಯಕ್ರಮವನ್ನು ಪ್ರೊ. ಬಿ.ಪಿ ಹೂಗಾರ ಉದ್ಘಾಟಿಸಿ ಅಭಿಪ್ರಾಯಪಟ್ಟರು.

ಇವತ್ತಿನ ಈ ಕಾರ್ಯಕ್ರಮದಲ್ಲಿ ಅಂತಹ ಮಹಾನ್ ಪುರುಷನ ನಾಟಕ ಪ್ರದರ್ಶನವಾಗುತ್ತಿರುವದು ಹೆಮ್ಮೆಯ ವಿಷಯ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಅಧಯಕ್ಷತೆ ವಹಿಸಿದ ಜನಪ್ರಿಯ ಸಂಘದ ಅಧ್ಯಕ್ಷ ಶಾಂತಲಿಂಗಯ್ಯ ಮಠಪತಿ ಮಾತನಾಡಿ ಕೇವಲ ಧನಸಹಾಯ ಹಾಗೂ ಪ್ರಾಯೋಜನೆಗಳಿಗಾಗಿ ಕಾರ್ಯಕ್ರಮಗಳನ್ನು ಮಾಡದೇ ಜನರಿಗೋಸ್ಕರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಮ್ಮ ಸಂಸ್ಥೆಯು ಸುಮಾರು ಎಂಟು ವರ್ಷಗಳಿಂದ ಪ್ರಾಮಾಣಿಕವಾಗಿ ಇಂಥಹ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ರವೀಂದ್ರ ವಿಭೂತಿ, ಬಾಬು ಕಾಂಬ್ಳೆ ಉಪಸ್ಥಿತರಿದ್ದರು. ಇದೇ ಸಂದಂರ್ಭದಲ್ಲಿ ರಂಗಕರ್ಮಿ ರಾಜುಕುಮಾರ ಎಸ್ ಕೆ ಅವರಿಗೆ ‘ಜನಪ್ರಿಯ ರಂಗಯೋಗಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಮೊದಲಿಗೆ ಕು. ಪ್ರಾರ್ಥನಾ ಅವರಿಂದ ಭರತನಾಟ್ಯ ಪ್ರಧರ್ಶನಗೊಂಡಿತು. ನಾಗೇಶ್ ತತ್ವಪದ ರೇಣುಕಾ ಭಜಂತ್ರಿ ಜನಪದ ಗಾಯನ, ಶ್ರೀಧರ ಹೊಸಮನಿ ಸುಗಮ ಸಂಗೀತ ಹಾಡಿದರು.

ಭವಾನಿ ಹಾಗೂ ಸಂಗಡಿಗರಿಂದ ಜನಪದ ನೃತ್ಯ ಹಾಗೂ ರಾಜುಕುಮಾರ ಎಸ್ ಕೆ ತಂಡದವರಿಂದ ಭಾವಕ್ಯದ ಬೆಳಕು ಎಂಬ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಬಡಾವಣೆಯ ಅಪಾರ ಜನರು ಈ ಕಾರ್ಯಕ್ರಮವನ್ನು ವಿಕ್ಷೀಸಿ ಸಂತೋಷಪಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here