ಬಾಲಕಾರ್ಮಿಕ ಅನಿಷ್ಠ ಪದ್ಧತಿ ಇದರ ನಿರ್ಮೂಲನೆ ಅಗತ್ಯ

0
9

ಸುರಪುರ: ನಗರದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ತಾಲೂಕು ಆಡಳಿತ ವತಿಯಿಂದ ಸೋಮವಾರ ಬಾಲ ಕಾರ್ಮಿಕ ಕಾನೂನು ಹಾಗೂ ಬಾಲ ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳು ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿಯವರು ಮಾತನಾಡಿ,ಬಾಲ ಕಾರ್ಮಿಕ ಪದ್ಧತಿ ಎನ್ನುವುದು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳಲ್ಲಿ ಇದುಕೂಡ ಒಂದು,ಪ್ರತಿಯೊಬ್ಬ ಮನುಷ್ಯನಿಗೆ ಶಿಕ್ಷಣ ಎನ್ನುವುದು ತುಂಬಾ ಮುಖ್ಯವಾಗಿದೆ.ಆದ್ದರಿಂದ ಬಾಲ ಕಾರ್ಮಿಕನ್ನು ದುಡಿಸಿಕೊಳ್ಳುವುದು ಮತ್ತು ಮಕ್ಕಳನ್ನು ಕೆಲಸಕ್ಕೆ ದೂಡುವುದು ಎರಡೂ ಅಪರಾಧವಾಗಲಿದೆ.ಪ್ರತಿ ಪೋಷಕರು ಮಕ್ಕಳಿಗೆ ಮೊದಲು ಶಿಕ್ಷಣ ಕೊಡಿಸಲು ಆದ್ಯತೆ ನೀಡಬೇಕು ಎಂದರು.

Contact Your\'s Advertisement; 9902492681

ನಂತರ ವಕೀಲರಾದ ಶ್ರೀದೇವಿ ಪಾಟೀಲ್ ಅವರು ಬಾಲ ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳು ಹಾಗೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಬಾಲ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ ಬಾಲ ಕಾರ್ಮಿಕ ಕಾನೂನು,ಬಾಲ ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳ ಕುರಿತು ಮಾತನಾಡಿದರು.ಇದೇ ಸಂದರ್ಭದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಕುರಿತಾದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಮಾರುತಿ ಕೆ,ಸಹಾಯಕ ಸರಕಾರಿ ಅಭಿಯೋಜಕ ಮರೇಪ್ಪ ಹೊಸಮನಿ,ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಮಾನಪ್ಪ ಕವಡಿಮಟ್ಟಿ,ಕಾರ್ಮಿಕ ನಿರೀಕ್ಷಕ ಗಂಗಾಧರ ಮಠಪತಿ,ಬಾಲ ಕಾರ್ಮಿಕ ಜಿಲ್ಲಾ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವೇದಿಕೆ ಮೇಲಿದ್ದರು.ವಕೀಲ ಸಂತೋಷ ಗಾರಂಪಳ್ಳಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here