ಲಕ್ಷ್ಮೀಪುರ ಗ್ರಾಮದ ದಲಿತರ ಮೇಲಿನ ಕೇಸ್ ರದ್ದುಗೊಳಿಸಲು ದಲಿತ ಸೇನೆ ಮನವಿ

0
18

ಸುರಪುರ: ತಾಲೂಕಿನ ಲಕ್ಷ್ಮೀಪುರ ಗ್ರಾಮದ ಬಳಿಯ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯಲ್ಲಿನ ಜನೆವರಿ 10 ರಂದು ರಾತ್ರಿ ನಡೆದ ಪುರಾಣ ಕಾರ್ಯಕ್ರಮದ ಸಂದರ್ಭದಲ್ಲಿ ದಲಿತ ಸಮುದಾಯದ ಮಾದಿಗ ಜನಾಂಗದ ಅನೇಕರ ಮೇಲೆ ಹಲ್ಲೆ ನಡೆಸಲಾಗಿದೆ.

ಮಾದಿಗ ಜನಾಂಗದ ಅನೇಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ.ಆದರೆ 12ನೇ ತಾರೀಖು ಹಲ್ಲೆಗೊಳಗಾದವರು ದೂರು ನೀಡಿದ್ದ ದೂರಿಗೆ ಪ್ರತಿಯಾಗಿ ಅದೇ 12ನೇ ತಾರೀಖು ಹಲ್ಲೆಗೊಳಗಾದವರ ಮೇಲೆಯೇ ದೂರು ದಾಖಲಿಸಿದ್ದು,ಇದು ಸುಳ್ಳು ದೂರಾಗಿದೆ.ಆದ್ದರಿಂದ ಮಾದಿಗ ಜನಾಂಗದವರ ಮೇಲೆ ದಾಖಲಿಸಿರುವ ಸುಳ್ಳು ದೂರು ಬಿ ರಿಪೋರ್ಟ್ ಮಾಡಬೇಕು ಮತ್ತು ಹಲ್ಲೆಗೊಳಗಾದವರ ಮನೆಗೆ ಠಾಣೆಯ ಪಿ.ಎಸ್.ಐ ಒಬ್ಬರು ಹೋಗಿ ಅವರಿಗೆ ಅವಾಜ್ ಹಾಕಿ ಬಂದಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಒಂದು ವೇಳೆ ನಮ್ಮ ಮನವಿಯನ್ನು ನಿರ್ಲಕ್ಷಿಸಿದಲ್ಲಿ ನ್ಯಾಯ ಸಿಗುವವೆಗೂ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಡಿವೈಎಸ್ಪಿಯವರಿಗೆ ಬರೆದ ಮನವಿಯನ್ನು ಪೊಲೀಸ್ ಇನ್ಸ್ಪೇಕ್ಟರ್ ಆನಂದ ವಾಗ್ಮೋಡೆ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಗೋನಾಲ,ತಾಲೂಕು ಅಧ್ಯಕ್ಷ ಹುಲಗಪ್ಪ ದೇವತ್ಕಲ್,ಕಾನೂನು ಸಲಹೆಗಾರ ಮಲ್ಲಿಕಾರ್ಜುನ ತಳ್ಳಳ್ಳಿ,ಮುಖಂಡರಾದ ಮರಿಲಿಂಗ ಗುಡಿಮನಿ,ಚಂದ್ರು ಆಲ್ಹಾಳ,ನಾಗರಾಜ ಓಕಳಿ,ದಾನಪ್ಪ ಕಡಿಮನಿ,ಶಿವಣ್ಣ ನಾಗರಾಳ,ಧರ್ಮಣ್ಣ ಚಿಂಚೋಳಿ,ಗೋಪಾಲ ಗೋಗಿಕೇರಾ,ಸಂತೋಷ ಜೈನಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here