18ನೇ ವರ್ಷದ ಶರಣಬಸವೇಶ್ವರರ ಪುರಾಣ | ಶರಣ ಶ್ರೀ ಪ್ರಶಸ್ತಿ ಪ್ರದಾನ

0
10

ಸುರಪುರ : ಅನ್ನಕ್ಕೆ ಪ್ರಸಾದದ ಸ್ವರೂಪ ಕೊಟ್ಟವರು ಕಲಬುರಗಿ ಮಹಾ ದಾಸೋಹಿ ಶರಣಬಸವರು. ಅವರ ಕಾಯಕ, ದಾಸೋಹ ಪರಿಕಲ್ಪನೆ ಅದ್ಭುತವಾಗಿತ್ತು. ಸಮಾಜಕ್ಕೆ ಅತ್ಯವಶ್ಯಕವಾಗಿರುವ ಅನ್ನ ದಾಸೋಹ ತತ್ವವನ್ನು ಅವರು ಇಡೀ ತಮ್ಮ ಬದುಕಿನುದ್ದಕ್ಕೂ ನೀಡಿ ದೇವರಾದರು ಎಂದು ದೇವಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ತಿಳಿಸಿದರು.

ಸಮೀಪದ ತಿಮ್ಮಾಪುರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ 18ನೇ ವರ್ಷದ ಶರಣಬಸವೇಶ್ವರ ಪುರಾಣ ಪ್ರವಚನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶರಣಬಸವರು ಹಸಿದ ಬಂದವರಿಗೆ ಅನ್ನಕೊಡಬೇಕು ಎಂದು ತಮ್ಮ ಬದುಕಿನಲ್ಲಿ ಪರೋಪಕಾರ ಮಾಡಿ ಜಗತ್ತಿಗೆ ದಾಸೋಹ ಪರಿಕಲ್ಪನೆ ಕೊಟ್ಟವರು. ಪಕ್ಷಿಗಳು ತಿಂದ ಮೇಲೆ ರಾಶಿ ಮಾಡಿ ದಾಸೋಹ ನಿಷ್ಠೆ ಅವರನ್ನು ಮಹಾದೈವಿ ಪುರಷರಾದರು. ಜಾತಿ, ವರ್ಗ, ವರ್ಣ ವ್ಯವಸ್ಥೆ ಮೀರಿದ ಮಹಾತ್ಮ. ಅವರಿಗೆ ಯಾವುದೇ ಸೀಮೆಗಳಲ್ಲಿ. ಯಾರಿಗೂ ಶರಬಸವರನ್ನು ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Contact Your\'s Advertisement; 9902492681

ಶರಣಬಸವರು ಯಾರನ್ನೂ ಕೈಬಿಟ್ಟಿಲ್ಲ, ಕಷ್ಟಗಳು ಅಂತ ಬಂದವರಿಗೆ ಬೆಣ್ಣೆಯಂತೆ ಕರುಗುವಂತೆ ಮಾಡುತ್ತಾರೆ. ಜೀವನದಲ್ಲಿ ನೊಂದು, ಬೆಂದು, ಧೃತಿಗೆಟ್ಟು, ಜಿಗುಪ್ಸೆಗೊಂಡವರ ಬಾಳಿಗೆ ಮಹಾದಾಸೋಹಿ ಶರಣಬಸವೇಶ್ವರರು ಬೆಳಕಾಗಿದ್ದಾರೆ. ಶರಣಬಸವರು ಅನೇಕರ ಬದುಕು ಉದ್ದಾರ ಮಾಡಿದ್ದಾರೆ ಎಂದ ಅವರು, ದೇವರ ನಾಮ , ಪುರಾಣ ಶ್ರವಣದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಸತತ 18 ವರ್ಷಗಳಿಂದ ಪುರಾಣ ಹಚ್ಚಿಕೊಂಡು ಬರುತ್ತಿರುವ ಗುಮ್ಮಾ ಮನೆತನದವರ ಸೇವೆ ಪ್ರಶಂಸನೀಯ ಎಂದರು.

ತದ್ದೇವಾಡಿ ಹಿರೇಮಠದ ಮಹಾಂತೇಶ ಸ್ವಾಮೀಜಿ ಸಂದೇಶ ನೀಡಿ, ಕಾಯಕ ಜೀವನ, ಪರ ಹಿತ ಬಯಸಿ ಬದುಕಿದವರೇ ಶರಣಬಸವರು. ಅವರನ್ನು ನೆನೆದರೆ ಸುಖ, ಶಾಂತಿ ಸಿಗುತ್ತದೆ ಎಂದರು. ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು ಮಾತನಾಡಿ, ಶರಣಬಸವರು ಅನೇಕರ ಜೀವನದಲ್ಲಿ ಕಷ್ಟಗಳನ್ನು ದೂರು ಮಾಡಿದ್ದಾರೆ. ತಮ್ಮಲ್ಲಿ ಬಂದವರು ಎಂದೂ ಕೈಬಿಟ್ಟವರಲ್ಲ. ಇಂದಿಗೂ ಎಲ್ಲರನ್ನು ಕಾಪಾಡುತ್ತಿದ್ದಾರೆ ಎಂದರು. ಖ್ಯಾತ ಗಾಯಕ ಶ್ರೀಹರಿ ಆದೋನಿ, ಪತ್ರಕರ್ತ ರಾಜೂ ಕುಂಬಾರ, ಕೃಷಿಕ ಶಂಕರ ಬಡಿಗೇರ, ಅರ್ಚಕ ಮಹೇಶ್ ತಂಬೂರಿ ಮಠ ಅವರಿಗೆ ಶರಣ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತೋಟೆಂದ್ರ ಶಾಸ್ತ್ರಿ ಪ್ರವಚನ ಹೇಳಿದರು.

ವೀರೇಶಕುಮಾರ ಕಟ್ಟಿಸಂಗಾವಿ, ರವಿಕುಮಾರ ಆಳಂದ ಅವರು ಸಂಗೀತ ಸಾಥ್ ನೀಡಿದರು. ಶರಣಪ್ಪ ಗುಮ್ಮಾ, ಅಮರೇಶ ಗೋಗಿ ಸೇರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here