ವಚನಗಳ ಮೂಲಕ ಸಮಾಜ ತಿದ್ದಿದ ಮಹಾನ್ ಪುರುಷ ಸರ್ವಜ್ಞ-ಸುಬ್ಬಣ್ಣ

0
7

ಸುರಪುರ:ತಾಲೂಕು ಆಡಳಿತದ ವತಿಯಿಂದ ನಗರದ ತಹಸೀಲ್ದಾರ್ ಕಚೇರಿಯಲ್ಲಿ ತ್ರಿಪದಿಯ ವಚನಕಾರ ಸರ್ವಜ್ಞನ ಜಯಂತಿ ಆಚರಿಸಲಾಯಿತು.ಮೊದಲಿಗೆ ಸರ್ವಜ್ಞನ ಬಾವಚಿತ್ರಕ್ಕೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಬ್ಬಣ್ಣ ಜಮಖಂಡಿ,ಸರ್ವಜ್ಞನ ವಚನಗಳು ಮೂರು ಸಾಲಿನಲ್ಲಿದ್ದರು ಮೂರು ಸಾಲಿನ ವಚನಗಳಿಂದ ಮಾನವ ಸಮಾಜವನ್ನು ತಿದ್ದಿದ ಮಹಾನ್ ಪುರುಷರಾಗಿದ್ದಾರೆ.ವಿದ್ಯೆ ಕಲಿಸದ ತಂದೆ ಬುದ್ಧಿ ಹೇಳದ ಗುರು ಬಿದ್ದಿರಲು ಬಂದು ನೋಡದಾ ತಾಯಿ ಶುದ್ಧ ವೈರಿಗಳು ಸರ್ವಜ್ಞ ಎನ್ನುವ ಸಾಲುಗಳು ಅಗಾಧವಾದ ಅರ್ಥವನ್ನು ಹೊಂದಿವೆ.ಇಂತಹ ಅಸಂಖ್ಯಾತ ವಚನಗಳನ್ನು ಬರೆದವರು ಎಂದರು.

Contact Your\'s Advertisement; 9902492681

ಅಂತಹ ಸರ್ವಜ್ಞ ಕುಂಬಾರ ಜನಾಂಗದವರು ಎಂದು ತಿಳಿದಿರಲಿಲ್ಲ ಕುಂಬಾರ ಸಮಾಜ ಸ್ವಾಭಿಮಾನಿ ಸಮಾಜ ತಮ್ಮ ದುಡಿಮೆಯನ್ನೆ ನಂಬಿ ಬದುಕುವ ಸಮಾಜವಾಗಿದೆ,ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಕುಂಬಾರಿಕೆ ಸಂಕಷ್ಟಕ್ಕೆ ಸಿಲುಕಿದೆ,ಕುಂಬಾರ ಸಮಾಜದವರು ಕುಲ ಕಸುಬಿನ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸುವಂತೆ ಸಲಹೆ ನೀಡಿದರು.

ತಾಲೂಕು ಕುಂಬಾರ ಸಂಘದ ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ತಮ್ಮ ತ್ರಿಪದಿಗಳ ಮೂಲಕ ಜಗತ್ತಿಗೆ ಚಿರಪರಿಚಿತರಾಗಿರುವ ಕುಲ ತಿಲಕ ಸರ್ವಜ್ಞರ ಜಯಂತಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ.ಮುಂಬರುವ ದಿನಗಳಲ್ಲಿ ಅದ್ಧೂರಿಯಾಗಿ ಜಯಂತಿ ಆಚರಣೆಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೂಗುರೇಶ ವಾರದ,ತಾಲೂಕು ಕುಂಬಾರ ಸಂಘದ ಪದಾಧಿಕಾರಿಗಳಾದ ದೊಡ್ಡ ಈರಣ್ಣ ಕುಂಬಾರ, ಸಾಹೇಬಗೌಡ ಕುಂಬಾರ,ಭೀಮರಾಯ ಕುಂಬಾರಪೇಟೆ,ಅಮರೇಶ ಕುಂಬಾರ,ವೀರಭದ್ರಪ್ಪ ಕುಂಬಾರ,ನಿಂಗಣ್ಣ ವಡಗೇರಿ,ಆದಪ್ಪ ಕುಂಬಾರ,ದೊಡ್ಡ ಆದಪ್ಪ ಕುಂಬಾರ,ಅಂಬ್ರೇಶ ಕುಂಬಾರ,ಶಿವುಪುತ್ರ ಕುಂಬಾರ,ರವಿಕುಮಾರ ಕುಂಬಾರಪೇಟೆ,ಈರಪ್ಪ ಮಲ್ಲಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here