ಕನ್ನಡ ಸಾಹಿತ್ಯಕ್ಕೆ ಕಮಲ ಹಂಪನಾ ಕೊಡುಗೆ ಅಪಾರ: ಹಣಮಂತ್ರಾಯ ಕಾಳನೂರ

0
24

ಯಾದಗಿರಿ : ಆಧುನಿಕ ಸಾಹಿತ್ಯದ ಪ್ರಕಾರಗಳಾದ ನವ್ಯ,ನವೋದಯ,ಪ್ರಗತಿಶೀಲ,ದಲಿತ ಬಂಡಾಯದ ಕಾವ್ಯ,ಕಥೆ,ಕಾದಂಬರಿ ಹಾಗೂ ನಾಟಕ ಮುಂತಾದ ಪ್ರಕಾರಗಳಲ್ಲಿ ಸ್ತ್ರೀ ಸಂವೇದನೆಗೆ ವಿಶೇಷವಾದ ಒತ್ತನ್ನು ನೀಡಿದ ಕೀರ್ತಿ ನಾಡೋಜ ಕಮಲ ಹಂಪನಾ ಅವರಿಗೆ ಸಲ್ಲುತ್ತದೆ ಎಂದು ಯಾದಗಿರಿ ಕೆಎಸ್ಒಯುನ ಪ್ರಾದೇಶಿಕ ನಿರ್ದೇಶಕರಾದ ಹಣಮಂತ್ರಾಯ ಕಾಳನೂರ ಹೇಳಿದರು.

ನಗರದ ಜವಾಹರ ಶಿಕ್ಷಣ ಸಂಸ್ಥೆಯಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ, ಇತ್ತೀಚಿಗೆ ಅಗಲಿದ ಸಾಹಿತಿ ಕಮಲ ಹಂಪನಾ ಅವರ “ನುಡಿ ನಮನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,ಸ್ತ್ರೀಯರ ಮೇಲೆ ಸಾವಿರಾರು ವರ್ಷಗಳಿಂದ ಸಾಮಾಜಿಕ,ಧಾರ್ಮಿಕ,ರಾಜಕೀಯ, ಆರ್ಥಿಕ ಹಾಗೂ ಇತರೆ ಸಂಸ್ಕೃತಿಯ ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಶೋಷಣೆಗಳ ವಿರುದ್ಧ ಅರಿವು ಮೂಡಿಸುವಂಥ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರಾದ ಮಾಳಪ್ಪ ಕೋರಿ ಮಾತನಾಡಿ ಕನ್ನಡ ಸಾಹಿತ್ಯದ ದೀರ್ಘವಾದ ಇತಿಹಾಸದಲ್ಲಿ ಸ್ತ್ರೀಪರ ಕಾಳಜಿ ಆಲೋಚನೆಗಳ,ಮೂಲಕ ಸಮಾಜದ ಕಣ್ಣುತೆರೆಸಿದ ಮಹಿಳಾ ಲೇಖಕಿಯಾರ ಪೈಕಿ ಕಮಲ ಹಂಪನಾ ಅವರು ಪ್ರಮುಖರು ಎಂದು ನುಡಿದರು.

ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತನಾಡಿ,ಕಮಲ ಹಂಪನಾ ಅವರ ಸಾಹಿತ್ಯ ವಿಮರ್ಶೆ ಹಾಗೂ ವೈಚಾರಿಕತೆಯ ಪ್ರಬಂಧಗಳು,ಪ್ರತಿಯೊಬ್ಬರನ್ನು ಸೆಳೆಯುತ್ತವೆ,ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದದ್ದು ಇತ್ತೀಚಿಗೆ ಅವರನ್ನು ಕಳೆದುಕೊಂಡಿದ್ದರಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದಂತ ನಷ್ಟ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಇಕ್ಬಾಲ್ ಕಾಸಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ
ಸಮಾರಂಭದ ವೇದಿಕೆಯ ಮೇಲೆ ಉಪನ್ಯಾಸಕರಾದ ಅಂಬರೀಶ್, ಜ್ಯೋತಿ,ಮಹಾದೇವಿ ಹಾಗೂ ಇತರರು ಉಪಸ್ಥಿತರಿದ್ದರು, ಪ್ರಾರಂಭದಲ್ಲಿ ಎಲ್ಲರೂ ಎದ್ದು ನಿಂತು ಕಮಲ ಹಂಪನಾ ಅವರಿಗೆ ಒಂದು ನಿಮಿಷಗಳ ಕಾಲ ಮೌನಚರಣೆ ಸಲ್ಲಿಸಲಾಯಿತು. ಆನಂದ್ ಸ್ವಾಗತಿಸಿದರು,ನಿಂಗಾರೆಡ್ಡಿ ನಿರೂಪಿಸಿದರು,ಮಾರುತಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here