ಸುರಪುರ: ವಿವಿಧ ಪಕ್ಷಗಳ ಅನೇಕರು ಜೆಡಿಎಸ್ ಸೇರ್ಪಡೆ

0
6

ಸುರಪುರ: ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿವಿಧ ಪಕ್ಷಗಳ ಅನೇಕರು ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಲಾಯಿತು.

ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಶ್ರವಣಕುಮಾರ ನಾಯಕ ಡೊಣ್ಣಿಗೇರ ಪಕ್ಷದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಜೆಡಿಎಸ್ ಸೇರ್ಪಡೆಗೊಂಡ ಶ್ರವಣಕುಮಾರ ನಾಯಕ ಮಾತನಾಡಿ ಹೆಚ್.ಡಿ ಕುಮಾರಣ್ಣನವರ ವ್ಯಕ್ತಿತ್ವಕ್ಕೆ ಮನಸೋತು ಇಂದು ಸಗರ ನಾಡಿನ ಆರಾಧ್ಯ ದೈವವಾಗಿರುವ ಶ್ರೀ ವೇಣುಗೋಪಾಲಸ್ವಾಮಿ ದೇವರ ಆಶೀರ್ವಾದ ಪಡೆದು ಇಂದು ಜೆಡಿಎಸ್ ಸೇರ್ಪಡೆಗೊಂಡಿದ್ದೇನೆ,ವೇದಿಕೆ ಮೇಲಿರುವ ಎಲ್ಲ ಹಿರಿಯರ ಆಶೀರ್ವಾದದೊಂದಿಗೆ 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಗತ್ತು ಏನೆಂದು ತೋರಿಸುತ್ತೇವೆ ಎಂದು ನುಡಿದರು.

Contact Your\'s Advertisement; 9902492681

ಇಂದು ನನ್ನ ಮೇಲೆ ನಂಬಿಕೆಯಿಟ್ಟು ಇಷ್ಟೊಂದು ಜನರು ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದೀರಿ ನಿಮ್ಮೆಲ್ಲರ ಈ ಬೆಂಬಲಕ್ಕೆ ನಾನು ಋಣಿಯಾಗಿರುವೆ,ಇನ್ನೂ ಎರಡು ತಿಂಗಳು ಕಾಲಾವಕಾಶವಿದೆ ಇಡೀ ಕ್ಷೇತ್ರದಲ್ಲಿ ನಿರಂತರ ಓಡಾಡಿ ಪಕ್ಷವನ್ನು ಕಟ್ಟಿ ಶಕ್ತಿ ತೋರಿಸೋಣ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಮಾತನಾಡಿ,ಯಾವುದೇ ಒಂದು ಪಕ್ಷ ಆರಂಭದಲ್ಲಿಯೇ ಬೆಳೆದು ನಿಲ್ಲುವುದಿಲ್ಲ ನಮ್ಮ ನಾಯಕರಾದ ಹೆಚ್.ಡಿ ದೇವೆಗೌಡ ಅವರು ಶ್ರಮಪಟ್ಟು ಓಡಾಡಿ ಪಕ್ಷ ಕಟ್ಟಿ ಬೆಳೆಸಿದ್ದಾರೆ,ಇದರಿಂದಲೇ ಅವರು ರಾಷ್ಟ್ರದ ಪ್ರಧಾನಿಯಾದರು,ಹೆಚ್.ಡಿ ಕುಮಾರಣ್ಣನವರು ಒಬ್ಬ ಉತ್ತಮ ನಾಯಕರಾಗಿದ್ದು ಅವರ ಮಾರ್ಗದರ್ಶನದಲ್ಲಿ ಈಬಾರಿಯ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ,ಇಲ್ಲಿಯೂ ತಾವೆಲ್ಲ ಯುವಕರು ಉತ್ಸಹ ದಿಂದ ಪಕ್ಷ ಸಂಘಟೆನೆಯಲ್ಲಿ ತೊಡಗಿಕೊಳ್ಳಿ,ನಿಮ್ಮೊಂದಿಗೆ ಕುಮಾರಣ್ಣ ಜಿಲ್ಲೆಯಲ್ಲಿ ನಾವೆಲ್ಲರು ಇದ್ದು ನಿಮಗೆ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದರು.

ಹಿರಿಯ ಮುಖಂಡ ವೆಂಕೋಬ ದೊರೆ ಮಾತನಾಡಿ,ಬಿಜೆಪಿ ಸರಕಾರ ಯಾವುದೇ ಅಭಿವೃಧ್ಧಿ ಮಾಡಿಲ್ಲ,ನಮ್ಮ ಕ್ಷೇತ್ರದಲ್ಲಿ ಯಾವುದೇ ಗ್ರಾಮದಲ್ಲಿ ಸಂಪೂರ್ಣ ಅಭೀವೃಧ್ಧಿಯಾಗಿಲ್ಲ,ಯಾವುದೇ ಗ್ರಾಮದಲ್ಲಿ ಸಂಪೂರ್ಣ ಅಭಿವೃಧ್ಧಿ ಮಾಡಿದ್ದರೆ ತೋರಿಸಿದಲ್ಲಿ ನಾನು ರಾಜಕೀಯ ಮತ್ತು ಹೋರಾಟ ದಿಂದ ನಿವೃತ್ತಿ ಹೊಂದುವುದಾಗಿ ತಿಳಿಸಿದರು.ಅಲ್ಲದೆ ಮುಂದಿನ ದಿನಗಳಲ್ಲಿ ನಾವೆಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಿ ಜೆಡಿಎಸ್ ಗೆಲ್ಲಿಸೋಣ ಎಂದರು.

ಇದೇ ಸಂದರ್ಭದಲ್ಲಿ ಮುಖಂಡರಾದ ವಿಶ್ವನಾಥ ಶಿರವಾರ,ಜೆಡಿಎಸ್ ತಾಲೂಕು ಅಧ್ಯಕ್ಷ ಸಂಗಣ್ಣ ಬಾಕ್ಲಿ ಮಾತನಾಡಿದರು.ಇದಕ್ಕೂ ಮುನ್ನ ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ವರೆಗೆ ಬೈಕ್ ರ್ಯಾಲಿ ನಡೆಸಲಾಯಿತು.ಕಾರ್ಯಕ್ರಮದ ವೇದಿಕೆ ಮೇಲೆ ಮುಖಂಡರಾದ ಶರಣಪ್ಪ,ಪಕ್ಷದ ವಿದ್ಯಾರ್ಥಿ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವರಾಜ ಕಲಕೇರಿ,ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಶೌಕತ್ ಅಲಿ,ಬಸವರಾಜ ಅಂಗಡಿ,ಶಿವಪ್ಪ ಸದಬ,ಸಿದ್ದು ಅತ್ತೊತ್ತಿ,ದೇವಿಂದ್ರಪ್ಪ ಬಳಿಚಕ್ರ,ಮೆ.ಜಿ ಕೊಣ್ಣೂರ,ಶರಣಪ್ಪ ಗುಳಗಿ, ತಿಪ್ಪಣ್ಣ ಪಾಟೀಲ್, ಶಾಂತು ತಳವಾರಗೇರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.ಮುಖಂಡ ಶರಣು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here