ಸೊಲ್ಲಾಪುರ: ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ

0
301

ಸೊಲ್ಲಾಪುರ: ಶಾಲೆಗಳಲ್ಲಿ ಕಲಿತ ಪಾಠವು ಮರುಕಳಿಹಿಸುತ್ತವೆ. ತಮ್ಮದೇ ಆದ ಭಾಷೆಯಲ್ಲಿ ಕಥೆಗಳು, ಕವನಗಳು, ಸಂಭಾಷಣೆಗಳು ರೂಪುಗೊಳ್ಳುತ್ತವೆ. ಅದೇ ಮಕ್ಕಳಿಂದ ರೂಪಗೊಂಡ ಸಾಹಿತ್ಯ, ಮಕ್ಕಳ ಸಾಹಿತ್ಯವೆಂದು ಬಾಲಸಾಹಿತಿ ಭಾಗ್ಯಶ್ರೀ ಘಿರಡೆ ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟç ಇವುಗಳ ಸಹಯೋಗದಲ್ಲಿ ಜತ್ತ ತಾಲ್ಲೂಕಿನ ಸಂಖ ಗ್ರಾಮದ ಜಿಲ್ಲಾ ಪಂ. ಪ್ರಾಥಮಿಕ ಕನ್ನಡ ಶಾಲೆಯಲ್ಲಿ  ಆಯೋಜಿಸಿದ ‘ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಈ ಸಾಹಿತ್ಯವು ಲಿಪಿರೂಪ ಪಡೆದು ಹೊರಬಂದದ್ದು ವಿರಳ. ಅಲ್ಲೊಬ್ಬರು, ಇಲ್ಲೊಬ್ಬರು ಒಂದೆರಡು ಕಥೆ-ಕವನಗಳನ್ನು ಬರೆದದ್ದುಂಟು. ಅವುಗಳನೆಲ್ಲ ಏಕತ್ರೀಕರಿಸಿ ಪುಸ್ತಕ ರೂಪದಲ್ಲಿ ಹೊರ ತರುವ ಕಾರ್ಯವನ್ನು ಮಾಡಿದರೆ ಮಕ್ಕಳಿಗೂ, ಮಕ್ಕಳ ಸಾಹಿತ್ಯಕ್ಕೂ ಪ್ರೋತ್ಸಾಹ ಸಿಗುತ್ತದೆ. ಬಾಲ್ಯಾವಸ್ಥೆಯಲ್ಲಿ ಮಗು-ಶ್ರವಣ, ಮಾತನಾಡುವುದರ ಜೊತೆಗೆ ಸ್ವಲ್ಪ ಮಟ್ಟಿಗೆ ಓದು ಬರಹವನ್ನು ಬಲ್ಲವನಾಗಿರುವುದರಿಂದ ಅವನಿಗೆ ಓದಲು ಅನುಕೂಲವಾಗುವಂಥ ಪದ-ಪುಂಜಗಳುಳ್ಳ ಸಾಹಿತ್ಯ ಅವಶ್ಯಕವಾಗಿದೆ ಎಂದು ಬಾಲಸಾಹಿತಿ ಕು. ಭಾಗ್ಯಶ್ರೀ ಘಿರಡೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಶಾಸಕ ವಿಲಾಸರಾವ ಜಗತಾಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆಗಳು ಬೇರೆ ಬೇರೆಯಾಗಿದ್ದರೂ ಭಾವನೆ ಮಾತ್ರ ಒಂದೆಯಾಗಿದೆ. ತಮ್ಮ ಮಾತೃ ಭಾಷೆಯ ಜೊತೆಗೆ ಅನ್ಯ ಭಾಷೆಗಳನ್ನು ಕೂಡ ನಾವೇಲ್ಲರೂ ಪ್ರೀತಿಸಬೇಕು. ಗಡಿ ಭಾಗದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಹಿತ್ಯದ ಜ್ಯಾನ ಬಹಳ ಮಹತ್ವದ್ದಾಗಿದೆ ಎಂದ ಅವರು, ಇಂತಹ ಮಕ್ಕಳ ಸಾಹಿತ್ಯ ಕಾರ್ಯಕ್ರಮಗಳನ್ನು ಗಡಿ ಭಾಗದಲ್ಲಿ ಆಯೋಜಿಸಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇಲ್ಲಿನ ಆದರ್ಶ ಕನ್ನಡ ಬಳಗಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಧಾರವಾಡದ ಬಸು ಬೆವಿನಗಿಡದ ಅವರು ಮಾತನಾಡಿ, ಕುಮಾರ ಅವಸ್ಥೆಯಲ್ಲಿ ಮಕ್ಕಳು ಚಿಂತನಪರರು, ವಿಚಾರವಾದಿಗಳು ಆಗಿರುವುದರಿಂದ ಇವರಿಗೆ ಒಳ್ಳೆಯ ಸಾಹಿತ್ಯ ಅವಶ್ಯವಿದೆ. ನೆರೆ, ಹೊರೆ, ನಾಡು-ದೇಶಗಳಲ್ಲಿ ಪ್ರೀತಿಯನ್ನು ಹುಟ್ಟಿಸುವ, ಶೀಲ ಸಂವರ್ಧನೆಗೊಳಿಸುವ, ನೀತಿಯನ್ನು ನೆಲೆಗೊಳಿಸುವ, ಪ್ರಾಮಾಣಿಕತೆಯನ್ನು ಬೆಳೆಯಿಸುವ, ಒಟ್ಟಿನಲ್ಲಿ ಅವರು ಒಳ್ಳೆಯ ಮಾನವರಾಗಿ ಬಾಳಿ-ಬೆಳೆಯಲು ಸಾಹಾಯಕವಾಗುವ ಸಾಹಿತ್ಯ ರಚನೆಯಾಗಬೇಕು. ಅಲ್ಲದೇ ಮೂಢನಂಬಿಕೆಯಿAದ ಹೊರಬಂದು ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು ಎಂದರು.

ಪರಮಪೂಜ್ಯ ಶ್ರೀ ಅಮೃತಾನಂದ ಸ್ವಾಮೀಜಿಯವರು ದಿವ್ಯ ಸಾನಿದ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಮಹೇಶದೇವರು ಮಹಾಸ್ವಾಮಿಗಳು, ಹಿರಿಯ ಕನ್ನಡ ಹೋರಾಟಗಾರ ಡಾ. ಆರ್.ಕೆ.ಪಾಟೀಲ ಮತ್ತು ಜಿಲ್ಲಾ ಪಂ.ಮಾಜಿ ಸಭಾಪತಿ ತಮ್ಮಣಗೌಡ ರವಿ ಪಾಟೀಲ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬೆಳಗ್ಗೆ ೯ ಗಂಟೆಗೆ ಗ್ರಾಮದ ಮುಖ್ಯ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳೊAದಿಗೆ ಭುವನೇಶ್ವರಿ ದೇವಿ ಹಾಗೂ ಸರ್ವಾಧ್ಯಕ್ಷತೆ ಬಾಲಸಾಹಿತಿ ಕು.ಭಾಗ್ಯಶ್ರೀ ಘಿರಡೆಯವರ ಮೇರವಣಿಗೆ ಅದ್ದೂರಿಯಾಗಿ ನೆರವೇರಿತು. ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಮಕ್ಕಳ ವೇಷ-ಭೂಷಣ ನೋಡುಗರ ಮನಸೆಳೆಯಿತು. ಸಂಖ ಗ್ರಾಮದ ಖ್ಯಾತ ಪ್ರವಚನಕಾರರು ಸಿದ್ರಾಮಯ್ಯಾ ಶಾಸ್ತಿçಗಳು ಸಾನಿಧ್ಯ ಮತ್ತು ಸಾಂಗಲಿ ಮಾಜಿ ಜಿಲ್ಲಾ ಪಂ. ಸದಸ್ಯೆ ಸೌ.ರೇಖಾ ಬಾಗೇಳಿ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಕ ವಿಸ್ತಾರ ಅಧಿಕಾರಿ ಮಹಾಂತೇಶ ಮಾಳಿಯವರು ಮೆರವಣಿಗೆಗೆ ಚಾಲನೆ ನೀಡಿದರು. ಧರೆಪ್ಪಾ ಕಟ್ಟಿಮನಿ, ಕವಿತಾ ಪಾಟೀಲ, ಅಣ್ಣಾಸಾಹೇಬ ಪಾಟೀಲ ಉಪಸ್ಥಿತರಿದ್ದರು.

ಬೆಳಿಗ್ಗೆ ೧೧ ಗಂಟೆಗೆ ಬಾಲಗಾಂವ ಗುರುದೇವಾಶ್ರಮದ ಪರಮ ಪೂಜ್ಯ ಶ್ರೀ ಡಾ. ಅಮೃತಾನಂದ ಸ್ವಾಮಿಜಿ ಮತ್ತು ಪೂಜ್ಯ ಶ್ರೀ ಮಹೇಶದೇವರು ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶಾಸಕ ವಿಕ್ರಮ ಸಾವಂತ ಅವರು ಭುವನೇಶ್ವರಿ ದೇವಿ ಹಾಗೂ ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರತಿಮೆಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಮಹಾರಾಷ್ಟç ಘಟಕದ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ, ಎನ್.ಸಿ.ಪಿ.ತಾಲ್ಲೂಕು ಅಧ್ಯಕ್ಷ ರಮೇಶ ಪಾಟೀಲ, ವಕೀಲರಾದ ಚೆನ್ನಪ್ಪಣ್ಣಾ ಹೋರ್ತಿಕರ್ ಹಾಗೂ ಯುವ ನಾಯಕ ಸಂಜೀವಕುಮಾರ ತೇಲಿ, ಎಸ್.ಆರ್.ಮಾಗಡೆ, ಶಿಕ್ಷಣ ವಿಸ್ತಾರ ಅಧಿಕಾರಿಗಳಾದ ಅನ್ಸಾರ್ ಶೇಖ, ಶಿವಾನಂಧ ಹಿರೇಮಠ, ಪ್ರಾಥಮಿಕ ಶಿಕ್ಷಕ ಬ್ಯಾಂಕ್ ಅಧ್ಯಕ್ಷ ವಿನಾಯಕ ಶಿಂಧೆ, ಸಂಚಾಲಕರಾದ ಅಮೋಲ ಶಿಂಧೆ, ಫತ್ತೂ ನಧಾಫ್, ಗಾಂಧಿ ಚೌಗುಲೆ, ಗ್ರಾಮವಿಕಾಸ ಅಧಿಕಾರಿ ಶ್ರೀಶೈಲ ಬಿರಾದಾರ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು.

ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ ಅವರು ಆಶಯ ನುಡಿಗಳಾಡಿದರು. ಬಾಲ ಸಾಹಿತ್ಯ ಕುರಿತು ಮಹಿಬೂಬ ಜಿಡ್ಡಿ ಉಪನ್ಯಾಸ ನೀಡಿದರು. ಗೋಷ್ಟಿ ಅಧ್ಯಕ್ಷತೆ ಶ್ರೀಶೈಲ್ ಅವಟಿ ವಹಿಸಿದ್ದರು. ತದನಂತರ ಮಧ್ಯಾಹ್ನ ೨.೩೦ ಗಂಟೆಗೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದವು. ಮಧ್ಯಾಹ್ನ ೪.೩೦ ಗಂಟೆಗೆ ಡಾ ನಿಂಗು ಸೋಲಗಿಯವರ ಅಧ್ಯಕ್ಷತೆಯಲ್ಲಿ  ಬಾಲಕವಿ ಗೋಷ್ಠಿ ಜರುಗಿತು. ಮಹಾನಾಡಿನ ಸುಮಾರು ೧೫ ಬಾಲಕವಿಗಳು ತಮ್ಮ ಕವನಗಳ ಪ್ರಸ್ತುತ ಪಡಿಸಿದರು.

ಸೊಲ್ಲಾಪುರದ ಹಿರಿಯ ಸಾಹಿತಿ ಡಾ. ಮಧುಮಾಲ ಲಿಗಾಡೆಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಬಾಲಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ೬ ಗಂಟೆಗೆ ಶ್ರೀಕಾಂತ ಪಾಟೀಲರ ಅಧ್ಯಕ್ಷತೆಯಲ್ಲಿ, ಶ್ರೀ ಕಿರಣ ಪಾಟೀಲರ ಚಾಲನೆಯಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಚಿಲಿಪಿಲಿ ಗಾನಸಂಭ್ರಮ ಕಾರ್ಯಕ್ರಮ ಸೇರಿದಂತೆ ನೃತ್ಯ, ನಾಟಕ ಹಾಗೂ ಮನರಂಜನೆ ಕಾರ್ಯಕ್ರಮಗಳು ನೋಡುಗರ ಮನಸೇಳೆದವು.

ಕಾರ್ಯಕ್ರಮದ ಯಶಸ್ವಿಗಾಗಿ  ಗುರುಬಸು ವಗ್ಗೋಲಿ, ರಾಜೇಂದ್ರ ಬಿರಾದಾರ, ಗೀತಾದೇವಿ ಪಾಟೀಲ, ರವೀಂದ್ರ ಸತಾರಿ, ಕೌದೀಶ್ ರೊಡಗೆ, ವಿರೇಶ ಹಿರೇಮಠ, ರಾಮಣ್ಣಾ ಕೋರೆ,  ಮಲ್ಲಿಕಾರ್ಜುನ ಬಿರಾದಾರ, ಉಮೇಶ ಕೋಟ್ಯಾಳ, ಗೌರೀಶ್ ನವರಾಜ, ಲಕ್ಷ್ಮೀ ದೊಡಮನಿ, ಮಹೇಶ ಮೇತ್ರಿ, ಮನೋಹರ ಪಾಟೀಲ, ಗುರುಬಸು ಬಿರಾದಾರ, ತಿಪ್ಪಣ್ಣಾ ಕೋಟ್ಯಾಳ, ಮಹಾದೇವ ಭೋಸಲೆ, ರಾಜೇಂದ್ರ ಜಿಗಜೇಣಿ, ಗುರುರಾಜ ಹಿಪ್ಪರಗಿ, ಸುಭಾಷ್ ಕೋಳಿ, ಸಿಂಧೂ ಹೋರ್ತಿ, ಪ್ರಶಾಂತ ದರ್ಗಾ ಸೇರಿದಂತೆ ಇನ್ನಿತರರು ಶ್ರಮಿಸಿದರು.

ಗುರುಬಸು ವಗ್ಗೋಲಿ ಸ್ವಾಗತಿಸಿದರು. ಅರವಿಂದ ಕರಡಿ, ಚಿದಾನಂದ ಮಠಪತಿ, ಶರಣಪ್ಪಾ ಪುಲಾರಿ, ಪ್ರಶಾಂತ ವಗ್ಗೋಲಿಯವರು ವಿವಿಧ ಗೋಷ್ಠಿಗಳನ್ನು ನಿರೂಪಿಸಿದರು. ಬಸವರಾಜ ಧನಶೆಟ್ಟಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here