ಹಾಲಿ ಮಾಜಿ ಶಾಸಕರ ಬೆಂಬಲ: ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿಕೆ

0
10

ಸುರಪುರ: ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಶನಿವಾರ ನಗರದಲ್ಲಿ ನಡೆಸಲಾಯಿತು.

ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್ ಬಳಿಯಿಂದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪಾದಯಾತ್ರೆಗೆ ಬೆಂಬಲಿಸಿ ಮಹಾತ್ಮ ಗಾಂಧಿ ವೃತ್ತದವರೆಗೆ ಪಾದಯಾತ್ರೆ ನಡೆಸಿದರು.ನಂತರ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾತನಾಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ,ವಿಶ್ವಕವರ್i ಸಮಾಜದೊಂದಿಗೆ ನಾನು ಹಿಂದಿನಿಂದಲೂ ಜೊತೆಯಿರುವೆ,ಮುಂದೆಯೂ ಯಾವತ್ತೂ ತಮ್ಮೊಂದಿಗಿರುವುದಾಗಿ ತಿಳಿಸಿದರು.

Contact Your\'s Advertisement; 9902492681

ಅಲ್ಲದೆ ತಮ್ಮ ನ್ಯಾಯಯುತ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ,ನಾನು ಕೂಡ ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.ಅಲ್ಲದೆ ವಿಶ್ವಕಮ್ ಸಮಾಜಕ್ಕೆ ಹಿಂದೆ ನಗರಸಭೆ ಸದಸ್ಯ ಸ್ಥಾನವನ್ನು ಒದಗಿಸಿದ್ದೇನೆ,ಅಲ್ಲದೆ ದೇವಸ್ಥಾನದ ವಿವಾದವಿದ್ದಾಗಲೂ ಜೊತೆಗೆ ನಿಂತಿರುವೆ,ಮುಂದೆಯೂ ಎಲ್ಲಾ ಸಂದರ್ಭದಲ್ಲಿ ಜೊತೆಯಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದ ಸ್ವಾಮಿಜಿಯವರು ಮಾತನಾಡಿ,ಸುರಪುರ ಮತಕ್ಷೇತ್ರದಲ್ಲಿ ನಮ್ಮ ವಿಶ್ವಕರ್ಮ ಸಮಾಜದವರಿಗೆ ತಾಲೂಕು ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಟಿಕೇಟ್ ನೀಡಿ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಮುಖಂಡ ಆನಂದ ಲಕ್ಷ್ಮೀಪುರ ಮಾತನಾಡಿದರು.

ನಂತರ ಪಾದಯಾತ್ರೆ ರಂಗಂಪೇಟೆ ಮಾರ್ಗವಾಗಿ ಶಹಾಪುರದತ್ತ ಹೊರಟಿತು, ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದ ಬಳಿಯಲ್ಲಿ ಪಾದಯಾತ್ರೆಯಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಭಾಗವಹಿಸಿದರು.ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಮಾತನಾಡಿ,ವಿಶ್ವಕರ್ಮ ಸಮುದಾಯ ಎಂದಿಗೂ ನನ್ನೊಂದಿಗೆ ನಾನುಕೂಡ ಸದಾಕಾಲ ನಿಮ್ಮೊಂದಿಗಿರುವುದಾಗಿ ತಿಳಿಸಿದರು.

ಅಲ್ಲದೆ ತಾವು ಇಂದು ಎಸ್ಟಿಗೆ ಸೇರಿಸುವಂತೆ ಬೇಡಿಕೆಯನ್ನಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿರುವಿರಿ ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ಆದರೆ ಈ ಹೋರಾಟ ಆರು ತಿಂಗಳ ಹಿಂದೆ ಮಾಡಿದ್ದರೆ ಅಧಿವೇಶನದಲ್ಲಿ ಈ ವಿಷಯವನ್ನು ಧ್ವನಿ ಎತ್ತುತ್ತಿದ್ದೆ,ಈಗ ಚುನಾವಣೆ ಹತ್ತಿರವಿರುವಾದ ಹೋರಾಟ ಮಾಡುತ್ತಿರುವಿರಿ ಆದರೂ ನಾನೂ ನಿಮ್ಮ ಬೇಡಿಕೆ ಈಡೇರಿಸುವಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ಅಲ್ಲದೆ ನಾನು ವಿಶ್ವಕರ್ಮ ಸಮಾಜಕ್ಕೆ ಏನು ಕೆಲಸ ಮಾಡಿದ್ದೇನೆ ಎಂದು ಹೇಳುವುದಕ್ಕೆ ಹೋಗುವುದಿಲ್ಲ ತಾವು ತಿಂಥಣಿಗೆ ಹೋದರೆ ಎಲ್ಲವೂ ನಿಮ್ಮ ಕಣ್ಮುಂದೆಯೇ ಕಾಣಲಿದೆ ಎಂದರು.ಅಲ್ಲದೆ ಮುಂದೆಯೂ ಸದಕಾಲ ನಿಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಸ್ವಾಮೀಜಿ,ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಬಸನಗೌಡ ಯಡಿಯಾಪೂರ,ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರ,ಮಹಾಸಭಾದ ಜಿಲ್ಲಾಧ್ಯಕ್ಷ ಆನಂದ ಲಕ್ಷ್ಮೀಪುರ,ತಾಲೂಕು ಅಧ್ಯಕ್ಷ ಪ್ರಭು ಚನ್ನಪಟ್ಟಣ,ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ಮಹೇಶ ಶಾರದಳ್ಳಿ,ತಾಲೂಕು ಯುವ ಘಟಕದ ಅಧ್ಯಕ್ಷ ದೇವಿಂದ್ರ ತಳವಾರಗೇರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here