ರಾಜ್ಯ Archives - Page 2 of 231 - ಇ ಮೀಡಿಯಾ ಲೈನ್

ರಾಜ್ಯ

ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಸ್ವಾತಂತ್ರ್ಯದಿನ ಆಚರಣೆ

ಮೈಸೂರು: ಇಂದು ನಗರದ ಕೋರ್ಟ್ ಮುಂಬಾಗದಲ್ಲಿರುವ ಗಾಂಧಿ ಪ್ರತಿಮೆಗೆ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಮೈಸೂರು ವತಿಯಿಂದ ಪುಷ್ಪಾರ್ಚನೆ, ಮಾಲಾರ್ಪಣೆ ಮಾಡುವುದರ ಮೂಲಕ ಸಿಹಿ ಹಂಚಿ ಅಮೃತಮಹೋತ್ಸವ ಸ್ವಾತಂತ್ರ್ಯ ದಿನದ ಆಚರಣೆಯನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ ನಮ್ಮೊಂದಿಗೆ ಉರಿಲಿಂಗಪೆದ್ದಿ ಮಠದ ಪೂಜ್ಯ ಜ್ಞಾನ ಪ್ರಕಾಶ್ ಸ್ವಾಮೀಜಿ, ಪ್ರೊ.ಕೆ.ಎಸ್.ಭಗವಾನ್,...

ಶಿಲ್ಪ ಕಲಾವಿದರು ಅಂದಿನ ಜಕಣಾಚಾರಿ ವಂಶಸ್ಥರು: ಸಂಸದ ದೇವೇಂದ್ರಪ್ಪ.

ಹಂಪಿ,ವಿದ್ಯಾರಣ್ಯ: ಸುಂದರವಾಗಿ ಕೆತ್ತನೆಯ ಮೂಲಕ ಶಿಲ್ಪಕಲೆಗೆ ಜೀವ ನೀಡುತ್ತಿರುವ ಇಂದಿನ ಕಲಾವಿದರು ಜಕಣಾಚಾರಿ ವಂಶಸ್ಥರು ಎಂದು ಬಳ್ಳಾರಿ ಸಂಸದರಾದ ದೇವೇಂದ್ರಪ್ಪ ಅವರು ಹೇಳಿದರು. ಹಂಪಿಯ ಕನ್ನ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಆಡಳಿತ ಬಳ್ಳಾರಿ ಸಂಯುಕ್ತಾಶ್ರಯದಲ್ಲಿ ಹಂಪಿಇ ಉತ್ಸವ 2020 ಅಂಗವಾಗಿ ಆಯೋಜಿಸಿದ ಶಿಲ್ಪಕಲಾ...

ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮುಂದೂಡಲು ಕ್ಯಾಂಪಸ್ ಫ್ರಂಟ್ ಆಗ್ರಹ

ಕೊಪ್ಪಳ : ರಾಜ್ಯದಲ್ಲಿ ಜೂನ್ 25 ರಂದು ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮುಂದೂಡಬೇಕೆಂದು  ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಘಟಕ ಆಗ್ರಹಿಸಿದೆ. ಜಿಲ್ಲಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಚಾಂದ್...

ಮಾಸಿಕ ಶರಣ ಸಂಗಮ ಮತ್ತು ಎರಡು ಕೃತಿಗಳ ಲೋಕಾರ್ಪಣೆ

ಭಾಲ್ಕಿ: ಶರಣರ ವಿಚಾರಧಾರೆಗಳಿಂದ ಮಾನವ ಒತ್ತಡದ ಬದುಕುನೀಗಿ ನಿಶ್ಚಿಂತ ನೆಲೆಯಡೆಗೆ ಸಾಗಬಹುದಾಗಿದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಸತತ ಅಧ್ಯಯನ ಮತ್ತು ಆಚರಣೆ ನಿತ್ಯ ಬದುಕಿನಲ್ಲಿ ಇರಬೇಕು ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು. ಪಟ್ಟಣದ ಚನ್ನಬಸವಾಶ್ರಮದಲ್ಲಿ ಆಯೋಜಿಸಲಾದ ೨೬೩ನೆಯ ಮಾಸಿಕ ಶರಣ ಸಂಗಮ ಮತ್ತು ಮಾಯಾದೇವಿ ಗೋಖಲೆ ವಿರಚಿತ...

ಗ್ರಾಮೀಣ ಪ್ರದೇಶದ 20 ಯುವತಿಯರಿಗೆ ಉಚಿತವಾಗಿ ಐಎಎಸ್‌ ಕೋಚಿಂಗ್‌

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದ 20 ಯುವತಿಯರಿಗೆ ಉಚಿತವಾಗಿ ಐಎಎಸ್‌ ಕೋಚಿಂಗ್‌ ನೀಡುವ ದ ಐಎಎಸ್‌ ಹಬ್‌ ನ ನೂತನ ಯೋಜನೆಗೆ ಇಂದು ಚಾಲನೆ ನೀಡಲಾಯಿತು. ದೇಶದಲ್ಲೇ ಸಿವಿಲ್‌ ಸರ್ವೀಸ್‌ ಪರೀಕ್ಷೆಗಳಿಗೆ ಅತ್ಯುತ್ತಮ ಗುಣಮಟ್ಟದ ತರಬೇತಿಯನ್ನು ನೀಡಲಾಗುವ ದ ಐಎಎಸ್‌ ಹಬ್‌ ನ ಬೆಂಗಳೂರು ಶಾಖೆಗೆ ಇಂದು ಪಶು...

ಐವರು ಲೆಕ್ಕಪರಿಶೋಧಕರಿಗೆ ಹೈಕೋರ್ಟ್‍ನ ಹಿರಿಯ ವಕೀಲರ ಗರಿಮೆ

ಬೆಂಗಳೂರು: ಕರ್ನಾಟಕ ಹೈಕೋರ್ಟ್‍ಗೆ ಹಿರಿಯ ವಕೀಲರಾಗಿ ಐದು ಮಂದಿ ಭಾರತೀಯ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಲಾಗಿದ್ದು, ಇವರನ್ನು ಶನಿವಾರ ನಗರದಲ್ಲಿ ಅಭಿನಂದಿಸಲಾಯಿತು. ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐಸಿಎಐ)ಯಿಂದ ಎಸ್.ಎಸ್. ನಾಗನಂದ್ (2001), ಎ. ಶಂಕರ್ (2018) ಕೆ.ಎಸ್. ರವಿಶಂಕರ್, ವಿ. ರಘುರಾಮನ್, ಕೆ.ಕೆ. ಚೈತನ್ಯ (ಮೂವರು 2021ರಲ್ಲಿ)...

ನಾಡೋಜ ಡಾ. ಮಹೇಶ್ ಜೋಶಿಗೆ ಅರಸು ಪ್ರತಿಮೆ ಪ್ರತಿಷ್ಠಾಪ ಸಮಿತಿಯಿಂದ ಸನ್ಮಾನ

ಮೈಸೂರಿ: ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ರಾಜ್ಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರಿಗೆ ದೇವರಾಜ್ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ.ವೈ.ಡಿ. ರಾಜಣ್ಣ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ ಚಂದ್ರಶೇಖರ್...

ಬಡ ಕುಟುಂಬಗಳಿಗೆ ಪುರಸಭೆ ವತಿಯಿಂದ ಉಚಿತ ಹಾಲು ಪೂರೈಕೆ

ನಾಗಮಂಗಲ: ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ಬಡವರಿಗೆ, ನಿರಾಶ್ರಿತರಿಗೆ, ನಿರ್ಗತಿಕರಿಗೆ, ನಾಗಮಂಗಲ ಪುರಸಭೆ ವತಿಯಿಂದ ಏಪ್ರಿಲ್ 14 ವರೆಗೂ ಬೆಳಗಿನ ವೇಳೆಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಬರುವ ಬಡ ಕುಟುಂಬದ ಜನರು ನಂದಿನಿ ಹಾಲಿನ ಪ್ಯಾಕೆಟ್ ಅನ್ನು ಮಂಡ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಮನೆಗಳಿಗೆ...

ಪುರುಷೋತ್ತಮ ಗಲಗಲಿ ನಿಧನ

ವಿಜಯಪುರ: ಇಂಡಿ ತಾಲ್ಲೂಕಿನ ಹಲಸಂಗಿ ಗ್ರಾಮದ ಜಾನಪದ ಸಾಹಿತ್ಯ ಲೋಕದ ದಿಗ್ಗಜ ದಿ. ಮಧುರಚೆನ್ನರ ಹಿರಿಯ ಮಗ ಪುರುಷೋತ್ತಮ ಗಲಗಲಿ (91) ನಿಧನರಾಗಿದ್ದಾರೆ. ಮಧುರಚೆನ್ನರ ಅವರಿಗೆ ಮೂರು ಜನ ಪುತ್ರರು, ಮೂರು ಜನ ಪುತ್ರಿಯರು ಇದ್ದಾರೆ. ಜೂ.19 ರಂದು 10 ಗಂಟೆಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ...

ಬಸವ ತತ್ವ ಹಾಗೂ ಕೇಶವ ಕೃಪಾದ ನಡುವೆ ನಡೆಯುತ್ತಿರು ಚುನಾವಣೆ: ಸಿಎಂ ಇಬ್ರಾಹಿಂ

ಕಲಬುರಗಿ: ಯಡಿಯೂರಪ್ಪ ಬಿಜೆಪಿಯಲ್ಲಿ ಅನುಭವಿಸುತ್ತಿರುವ ಯಾತನೆಯನ್ನು ವಿವರಿಸಿ, ಈ‌ ಚುನಾವಣೆ ಬಸವ ತತ್ವ ಹಾಗೂ ಕೇಶವ ಕೃಪಾ ನಡುವೆ ನಡೆಯುತ್ತಿರುವ ಚುನಾವಣೆ ಎಂದು ಮಾಜಿ ಕೇಂದ್ರ ಸಚಿವ  ಸಿಎಂ ಇಬ್ರಾಹಿಂ ಹೇಳಿದ್ದಾರೆ. ಅವರು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣೆ ಪ್ರಚಾರದಲ್ಲಿ ಮಾತನಾಡಿ, ಈ‌ ಚುನಾವಣೆ...
- Advertisement -

LATEST NEWS

MUST READ