ಕಡುಬಡ ಕುಟುಂಬಗಳಿಗೆ ನೀರು ಒದಗಿಸಲು ದೇವಿಂದ್ರ ದೇಸಾಯಿ ಕಲ್ಲೂರ್ ಮನವಿ

0
13

ಕಲಬುರಗಿ: ಮಹಾನಗರ ಪಾಲಿಕೆಯ 55 ವಾಡ್ರ್ಗಳಿಗೆ ಒಂದು ವಾರದಿಂದ ಕುಡಿಯಲು ನೀರು ಪೂರೈಕೆ ಆಗುವುದಿಲ್ಲ, ಹಾಗಾದರೆ ಜನಸಾಮಾನ್ಯರ ಗತಿಯೇನು? ಕಡುಬಡ ಕುಟುಂಬಗಳು ನಿತ್ಯ ಬಳಕೆಗೆ ಎಲ್ಲಿಂದ ನೀರು ತರಬೇಕು ಎಂಬುದು ದಿಕ್ಕು ತೋಚದಂತಾಗಿದೆ ಎಂದು ಜಿಲ್ಲಾ ವಿಶ್ವಕರ್ಮ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಜನಪರ ಹೋರಾಟಗಾರ ದೇವಿಂದ್ರ ದೇಸಾಯಿ ಕಲ್ಲೂರ್ ಅವರು ಪಾಲಿಕೆ ಆಯುಕ್ತರಿಗೆ ಪ್ರಶ್ನಿಸಿದ್ದಾರೆ.

ಮಳೆಗಾಲ ಆರಂಭವಾಗಿದ್ದಾದರೂ ಇನ್ನು ಅಂತರ್ಜಲ ಮಟ್ಟ ವೃದ್ಧಿಯಾಗಿಲ್ಲ, ನಗರದಲ್ಲಿ ಎಲ್ಲೆಲ್ಲಿ ಸಾರ್ವಜನಿಕ ಕೊಳವೆಬಾವಿಗಳಿವೆ ಎಂಬುದನ್ನು ಗುರುತಿಸಿ ದುರಸ್ತಿಗೊಳಿಸಬೇಕು. ಇದರಿಂದ ಸಾರ್ವಜನಿಕರಿಗೆ ಕೊಳವೆಬಾವಿಗಳ ಮೂಲಕ ನೀರು ವ್ಯವಸ್ಥೆ ಮಾಡಿದಂತಾಗಲಿದೆ. ಆದರೆ ಎಲ್ ???ಂಡ್ ಟಿ ಕಂಪನಿಗೆ ವಾರದ ಏಳು ದಿನ ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುತ್ತಿಲ್ಲ. ಟೆಂಡರ್ ಮಾರ್ಗಸೂಚಿ ಪ್ರಕಾರ ಗುಣಮಟ್ಟದ ಪೈಪ್ ಬಳಸುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿವೆ. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಗುಣಮಟ್ಟ ನಿಯಂತ್ರಣಕ್ಕೆ ತಂಡ ರಚಿಸಿ, ಗುಟ್ಟಮಟ್ಟ ಕಾಮಗಾರಿ ಕೈಗೆತ್ತಿಕೊಳ್ಳಲು ಮೇಲುಸ್ತುವಾರಿವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

Contact Your\'s Advertisement; 9902492681

ಕೂಡಲೇ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ, ಅಹವಾಲುಗಳಿಗೆ ಸ್ಪಂದಿಸಿ, ಸಮಾರೋಪಾದಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿ  ಚುರುಕಿನಿಂದ ಕೆಲಸ ನಿರ್ವಹಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here