ಜೇವರ್ಗಿ: ಜೆಡಿಎಸ್ ಸೇರ್ತಾರಾ ಮಾಜಿ ಶಾಸಕ ದೊಡ್ಡಪ್ಪಗೌಡ?

0
372
  • ಡಾ.ಅಶೋಕ ದೊಡ್ಮನಿ ಜೇವರ್ಗಿ

ಜೇವರ್ಗಿ: ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಜೇವರ್ಗಿ ಪಟ್ಟಣದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳರವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ರಾಜಕೀಯ ನಿಂತ ನೀರಲ್ಲ. ಇಲ್ಲಿ ಯಾರೂ ಶತ್ರುಗಳಲ್ಲ ಹಾಗೆ ಮಿತ್ರರೂ ಕೂಡ ಅಲ್ಲ. ಅದರಂತೆ ಮಾಜಿ ಶಾಸಕರು ತಮ್ಮ ಬೆಂಬಲಿಗರ ಸಭೆಯನ್ನು ಬುಧುವಾರ ಬೆಳಿಗ್ಗೆ 11.30ಕ್ಕೆ ಕರೆದಿದ್ದಾರೆ.

Contact Your\'s Advertisement; 9902492681

ನಿಜವಾಗಲೂ ಈ ಚುನಾವಣೆ ಅವರ ಕುಟುಂಬದ ಅಸ್ತಿತ್ವದ ಪ್ರಶ್ನೆಯಾಗಿದೆ. ಬಿಜೆಪಿಗೆ ಪಾಠ ಕಲಿಸಲು ಇದು ಸಕಾಲ. ಹಾಗೆ ನೋಡಿದರೆ ಬಿಜೆಪಿ ಈ ಕುಟುಂಬಕ್ಕೆ ಬಹಳಷ್ಟು ಅನ್ಯಾಯ ಮಾಡಿದೆ. ಮಾಜಿ ಸಿಎಂ ಧರ್ಮಸಿಂಗ್ ಅವರಿಗೆ ಸೋಲಿಸಿ ವಿಧಾನಸಭೆ ಪ್ರವೇಶಿಸಿದರೆ ಮಂತ್ರಿ ಸ್ಥಾನ ಕೊಡಬೇಕಿತ್ತು. ಯಾವುದು ಕೊಡಲಿಲ್ಲ.

ನಂತರ ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾಗಿ ಇಡೀ ಜಿಲ್ಲೆಯನ್ನು ಸುತ್ತಿ ಚಿತ್ತಾಪುರದಲ್ಲಿ ದಿ.ವಾಲ್ಮೀಕಿ ನಾಯಕˌ ಶಾಸಕ ಬಸವರಾಜ ಮತ್ತಿಮೂಡ ಸೇರಿದಂತೆ ಹಲವು ಶಾಸಕರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಆಗಲೂ ಇವರ ಶ್ರಮಕ್ಕೆ ಬಿಜೆಪಿ ಸರ್ಕಾರ ಯಾವುದೇ ಫಲ ಕೊಡಲಿಲ್ಲ.

ಈಗ ಬಿಜೆಪಿ ಟಿಕೆಟ್ ತಪ್ಪಿಸುವುದರ ಮೂಲಕ ಮತ್ತೊಮ್ಮೆ ಈ ಕುಟುಂಬಕ್ಕೆ ಅನ್ಯಾಯ ಮಾಡಲಾಗಿದೆ.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಟಿಕೆಟ್ ತಪ್ಪಿದ್ದಕ್ಕಾಗಿ ಶ್ರೀಮತಿ ಅರುಣಾ ಸಿ ಪಾಟೀಲ ರೇವೂರ ಜೆಡಿಎಸ್ ಗೆ ಹೋಗಿ ಗೆದ್ದು ತೋರಿಸಿದ್ದರು. ಬಹುಶ ದೊಡ್ಡಪ್ಪಗೌಡರಿಗೂ ಸಹ ಇದು ಸಕಾಲ.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳಿ ಓಕೆ ಎಂದರೆ ಜೆಡಿಎಸ್ ಟಿಕೆಟ್ ಕೊಡಲು ಮಾಜಿ ಸಿಎಂ ಕುಮಾರಸ್ವಾಮಿ ತುದಿಗಾಲಲ್ಲಿ ನಿಂತಿದ್ದಾರೆ. ಹೆಚ್ಚು ಕಡಿಮೆ ಕುಮಾರಸ್ವಾಮಿ ಮಾತು ಕೂಡ ಆಡಿರ್ತಾರೆ.

ದೊಡ್ಡಪ್ಪಗೌಡ ಪಾಟೀಲ ಜೆಡಿಎಸ್ ಸೇರಿದ್ರೆ ಜೇವರ್ಗಿ ಮತಕ್ಷೇತ್ರದ ಅಸಲಿ ಆಟ ಆಗ ಶುರುವಾಗುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here