ಡಾ. ರಾಜಕುಮಾರ್ ಜನ್ಮ ದಿನಾಚರಣೆ

0
11

ಸುರಪುರ:ನಗರದ ರಂಗಂಪೇಟೆಯ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಖಾಸ್ಗತೇಶ್ವರ ನೃತ್ಯ ಕಲಾ ತರಬೇತಿ ಸಂಸ್ಥೆಯ ವತಿಯಿಂದ ವರನಟ ಡಾ:ರಾಜಕುಮಾರ್ ಅವರ 95ನೇ ಜನ್ಮ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ನೃತ್ಯ ತರಬೇತಿದಾರ ಅನೀಲ ಕುಮಾರ ಮಾತನಾಡಿ,ಕನ್ನಡ ಚಿತ್ರರಂಗದಲ್ಲಿ ಡಾ:ರಾಜಕುಮಾರ್ ಎಂದರೆ ಅವರೊಬ್ಬರ ಧೀಮಂತ ನಟ,ಕನ್ನಡದಲ್ಲಿ ಎರಡು ನೂರ ಹತ್ತು ಸಿನೆಮಾಗಳಲ್ಲಿ ನಟಿಸಿ ನಾಡಿನ ಎಲ್ಲರ ಮನ ಗೆದ್ದ ನಟರಾಗಿದ್ದರು,ಅವರು ಕೇವಲ ನಟ ಮಾತ್ರವಲ್ಲದೆ ಗಾಯಕರು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಗೋಕಾಕ ಚಳವಳಿಯಲ್ಲಿ ಭಾಗವಹಿಸಿ ನಾಡಿನ ಜನರ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡ ಮೇರು ನಟರು.ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು,ಅಲ್ಲದೆ ಕರ್ನಾಟಕ ರತ್ನ,ದಾದಾ ಸಾಹೇಬ್ ಪಾಲ್ಕೆ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.

Contact Your\'s Advertisement; 9902492681

ಅಂತಹ ಕನ್ನಡ ಕಣ್ಮಣಿ ನಟರ ಜನ್ಮ ದಿನವನ್ನು ಇಂದು ನಮ್ಮ ಸಂಸ್ಥೆಯಿಂದ ಆಚರಿಸುತ್ತಿರುವುದು ತುಂಬಾ ಖುಷಿಯ ಸಂಗತಿಯಾಗಿದೆ ಎಂದರು.ಅಲ್ಲದೆ ನಮ್ಮ ಸಂಸ್ಥೆಯು ಇಂತಹ ಅನೇಕ ಮಹನಿಯರ ಜನ್ಮ ದಿನವನ್ನು ಆಚರಿಸುವ ಜೊತೆಗೆ ನಮ್ಮಲ್ಲಿ ನೃತ್ಯ ಕಲಿಯುವ ಎಲ್ಲ ಮಕ್ಕಳಲ್ಲಿ ನೃತ್ಯ ಕಲಿಸುವ ಜೊತೆಗೆ ನಾಡು ನುಡಿಯ ಕುರಿತು ಕಲೆ,ಭರತನಾಟ್ಯದಂತ ಕಲೆಗಳ ಕುರಿತು ಅಭಿಮಾನ ಮೂಡಿಸುವ ಸಾಂಸ್ಕøತಿಕ ಹವ್ಯಾಸ ಬೆಳೆಸುವ ಮುಖ್ಯ ಉದ್ದೇಶವನ್ನು ಹೊಂದಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ಡಾ:ರಾಜಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ,ಕೇಕ್ ಕತ್ತರಿಸಿ ಎಲ್ಲ ಮಕ್ಕಳಿಗೆ ಸಿಹಿ ಹಂಚಿ ಗೌರವ ವಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ನೃತ್ಯ ತರಬೇತಿದಾರರಾದ ಲಕ್ಷ್ಮೀ ಎಸ್.ಕುಂಬಾರ,ಮಲ್ಲಿಕಾರ್ಜುನ ಕಟ್ಟಿಮನಿ ಸೇರಿದಂತೆ ನೃತ್ಯ ಕಲಿಕೆಯ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here