ಕವಡಿಮಟ್ಟಿ: ಕೃಷಿಕರಿಗೆ ತಾಂತ್ರಿಕ ಕೌಶಲ್ಯ ಜಾಗೃತಿ

0
10

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಇಂಜಿನಿಯರಿಂಗ ವಿದ್ಯಾರ್ಥಿಗಳಿಂದ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಎಐಸಿಟಿಇ) ಅಡಿಯಲ್ಲಿ ಕೃಷಿಕರಿಗೆ ತಾಂತ್ರಿಕ ಕೌಶಲ್ಯ ಜಾಗೃತಿ ಚಟುವಟಿಕೆ ಕಾರ್ಯಕ್ರಮ ನೆರವೇರಿತು. ಮಹಾವಿದ್ಯಾಲಯದ ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿಯವರ ಮಾರ್ಗದರ್ಶನದಲ್ಲಿ ಈ ಚಟುವಟಿಕೆ ಕಾರ್ಯಕ್ರಮ ಏರ್ಪಡಿಸಲಾಯಿತು.

ಕಾರ್ಯಕ್ರಮವು ಡಾ.ಜಯಪ್ರಕಾಶ ನಾರಾಯಣ ಹಿರಿಯ ವಿಜ್ಞಾನಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ (ಸುರಪುರ) ಮುಖ್ಯಸ್ಥರ ನಿರ್ದೇಶನಲ್ಲಿ ನೆರವೇರಿತು. ಇದೆ ಸಂದರ್ಭದಲ್ಲಿ ಡಾ. ಜಯಪ್ರಕಾಶ ನಾರಾಯಣ ಹಿರಿಯ ವಿಜ್ಞಾನಿಗಳು ಮಾತನಾಡುತ್ತ ಕೃಷಿ ವಿಜ್ಞಾನ ಕೇಂದ್ರಗಳು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ಜಿಲ್ಲಾ ಮಟ್ಟದಲ್ಲಿ ಅದರ ಅಂಗಸಂಸ್ಥೆಗಳಿಂದ ರಚಿಸಲಾದ ಕೃಷಿ ವಿಸ್ತರಣೆಗಳ ಕೇಂದ್ರಗಳಾಗಿವೆ. ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆಯ (ಎನ್‍ಎಆರ್‍ಎಸ್) ಅವಿಭಾಜ್ಯ ಅಂಗವಾಗಿದೆ ಮತ್ತು ಎನ್‍ಎಆರ್‍ಎಸ್ ಮತ್ತು ರೈತರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ.

Contact Your\'s Advertisement; 9902492681

ಕೆವಿಕೆ ಕೇಂದ್ರವು ಕೃಷಿ ಕ್ಷೇತ್ರಕ್ಕೆ ವಿವಿಧ ರೀತಿಯ ಕೃಷಿ ಬೆಂಬಲವನ್ನು ಒದಗಿಸುತ್ತದೆ ಮತ್ತು ಸುಧಾರಿತ ಕೃಷಿ ತಂತ್ರಜ್ಞಾನಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಸಸ್ಯ ಅಭಿವೃದ್ಧಿ ವಿಧಾನಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಅಭ್ಯಾಸ ನಡೆಸಿ ಕಲಿತರು. ಇದರಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ನರ್ಸರಿಗಳನ್ನು ಅಭಿವೃದ್ಧಿಪಡಿಸಿ ಸಸ್ಯ ಅಭಿವೃದ್ಧಿ ಮಾಡಿ ರೈತರಿಗೆ ವಿತರಿಸುವ ಮೂಲಕ ತೋಟಗಾರಿಕಾ ಬೆಳೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸ್ವಾವಲಂಬನೆ ಬದುಕನ್ನು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.

ಈ ಸಂದರ್ಭದಲ್ಲಿ ವೀರಪ್ಪ ನಿಷ್ಠಿ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಚಾರ್ಯರು ಡಾ. ಶರಣಬಸಪ್ಪ ಸಾಲಿಯವರ ಇಂಜಿನಿಯರಿಂಗ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವದರ ಜೊತೆಗೆ ಕೃಷಿಯ ಬಗ್ಗೆ ಮತ್ತು ಕೃಷಿ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಇನ್ನು ಹೆಚ್ಚು ತಿಳಿದುಕೊಂಡು ಹೊಸಹೋಸ ವಿನ್ಯಾಸ ಹಾಗೂ ಆವಿಷ್ಕಾರಗಳನ್ನು ತರುವದರಲ್ಲಿ ಇಂಜಿನಿಯರಿಂಗ ಪಾತ್ರ ಬಹಳ ದೊಡ್ಡದು ಎಂದು ಹೇಳುತ್ತಾ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಕಲಿಕೆಯ ಚಟುವಟಿಕೆ ನಡಿಸಿಕೊಟ್ಟ ಕೃಷಿ ವಿಜ್ಯಾನ ಕೇಂದ್ರದ ತಂಡದವರಿಗೆ ನಮ್ಮ ಮಹಾವಿದ್ಯಾಲಯದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಈ ಚಟುವಟಿಕೆ ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಶೃತಿಶ್ರೀಯವರು ಮತ್ತು ಇತರ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here