ಕೊಚ್ಚಿ: 3 ವರ್ಷದ ಪುಟ್ಟ ಕಂದಮ್ಮನ್ನು ಮಾತು ಕೇಳಿಲ್ಲ ಎಂಬ ಕಾರಣಕ್ಕೆ ತಾಯಿ ನೀಡಿದ್ದ ಚಿತ್ರಹಿಂಸೆಗೆ ಮಗು ಕೋಮಾ ಸ್ಥಿತಿಗೆ ಹೋಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ.
ಜಾರ್ಖಂಡ್ ಮೂಲದ ಈ ಮಗು ತನ್ನ ಮಾತು ಕೇಳಿಲ್ಲ ಎಂದು ಕಾರಣಕ್ಕೆ ತಾಯಿ ಮನಬಂದಂತೆ ಥಳಿಸಿದ್ದಾಳೆ. ಪರಿಣಾಮ ಮೆದುಳಿಗೆ ಗಂಭೀರವಾಗಿ ಪೆಟ್ಟಾದ ಹಿನ್ನೆಲೆ 3 ವರ್ಷದ ಮಗು ಸಾವನ್ನಪ್ಪಿದೆ.
ಪ್ರಕರಣದ ಹಿನ್ನಲೆ: ಗಂಭೀರವಾಗಿ ಪೆಟ್ಟಾಗಿದ್ದ ಮಗುವನ್ನು ತಂದೆ ಬುಧವಾರ ರಾತ್ರಿ ಕೊಚ್ಚಿ ಬಳಿಯ ಅಳುವಾದ ಖಾಸಗಿ ಆಸ್ಪತ್ರೆಗೆ ಸೇರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಮಗುವಿನ ತಾಯಿಯನ್ನು ಬಂಧಿಸಲಾಗಿದ್ದು, ಆಕೆಯ ವಿರುದ್ಧ ಕೋಲೆ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಲಾಗುತ್ತಿದೆ.