NSP ವಿದ್ಯಾರ್ಥಿ ವೇತನ ಪಡೆಯಲು ಅ.28ರೊಳಗೆ ಬಯೋ ಮೇಟ್ರಿಕ್ ಅಥೆಂಟಿಕೇಶನ್ ಮಾಡಿಸಿಕೊಳ್ಳಲು ಸೂಚನೆ

10
1787

ಕಲಬುರಗಿ: 2022-23ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿದ ವಿದ್ಯಾರ್ಥಿಗಳು ಅಗಸ್ಟ್ 27 ಮತ್ತು 28ರೊಳಗಾಗಿ ಬಯೋ ಮೇಟ್ರಿಕ್ ಅಥೆಂಟಿಕೇಶನ್ ಕಡ್ಡಾಯವಾಗಿ ಮಾಡಿಸಿಕೊಳ್ಳಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಜಾವೀದ್ ಕರಣಗಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಫಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವದ 9 ಮತ್ತು 10ನೇ ತರಗತಿ ಹಾಗೂ ವೃತ್ತಿಪರ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಯೋ ಮೇಟ್ರಿಕ್ ಅಥೆಂಟಿಕೇಶನ್ ಕಡ್ಡಾಯವಾಗಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.

Contact Your\'s Advertisement; 9902492681

ರಾಷ್ಟ್ರೀಯ ವಿದ್ಯಾರ್ಥಿ ವೇತನವನ್ನು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮಂಜೂರು ಮಾಡಲು ಈಗಾಗಲೇ ಎನ್.ಎಸ್.ಪಿ ಹಗೂ ನಿರ್ದೇಶನಾಲಯದಿಂದ ಒದಗಿಸಲಾದ ಪಟ್ಟಿಯಲ್ಲಿನ ಕಲಬುರಿಗ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರ, ನೋಡಲ್ ಅಧಿಕಾರಿಗಳ ಬಯೋ ಮೇಟ್ರಿಕ್ ಅಥೆಂಟಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಿದಂತಹ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು ನೋಡಲ್ ಅಧಿಕಾರಿಗಳು ತಮ್ಮ ವಿದ್ಯಾರ್ಥಿಗಳನ್ನು ಈ ಕೆಳಕಂಡ ಬಯೋ ಮೇಟ್ರಿಕ್ ಕೇಂದ್ರಗಳಿಗೆ ಅಗಸ್ಟ್ 27 ಮತ್ತು 28 ರೊಳಗಾಗಿ ಸಂಪರ್ಕಿ ಪೂರ್ಣಗೊಳ್ಳಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಬಯೋ ಮೇಟ್ರಿಕ್ ಅಥೆಂಟಿಕೇಶನ್ ಕೇಂದ್ರಗಳ ಪಟ್ಟಿ