ಸೇಡಂನಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಸಂಸದ ಜಾಧವ್ ಮನವಿ

0
28

ಕಲಬುರಗಿ: ಹೈದರಾಬಾದ ಬೆಂಗಳೂರು ವಂದೇ ಭಾರತ್ ರೈಲುನ್ನು ಜಿಲ್ಲೆಯ ವಾಣಿಜ್ಯ ಪಟ್ಟಣವೆಂದೆ ಕರೆಯಲ್ಪಡುವ ಸೇಡಂನಲ್ಲಿ ನಿಲುಗಡೆ ಮಾಡಬೇಕೆಂದು ಸಂಸದ ಡಾ.ಉಮೇಶ ಜಾಧವ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಮನವಿ ಮಾಡಿದರು.

ಸೋಮವಾರ ನವದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಸಂಸದರು, ಸೇಡಂ ರೈಲು ನಿಲ್ದಾಣವು ಕಲಬುರಗಿ ಜಿಲ್ಲೆಯ ಆಯಕಟ್ಟಿನ ಸ್ಥಳದಿಂದಾಗಿ ನಿರ್ಧಿಷ್ಟ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ವಲಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಮನವಿಯಲ್ಲಿ ಹೇಳಿದ್ದಾರೆ.

Contact Your\'s Advertisement; 9902492681

ಸೇಡಂ ನಿಲ್ದಾಣದಲ್ಲಿ ಹೈದರಾಬಾದ ಬೆಂಗಳೂರು “ವಂದೆ ಭಾರತ” ರೈಲು ನಿಲಗಡೆಯ ಪರಿಚಯವು ನಮ್ಮ ಜಿಲ್ಲೆಯ ನಾಗರಿಕರಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹಲವಾರು ಪ್ರಯೋಜನ ನೀಡುತ್ತದೆ. ಈ ಸೌಲಭ್ಯವು ನಮ್ಮ ಮತದಾರ ಪ್ರಯಾಣದ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ಹೈದರಾಬಾದ ಮತ್ತು ಬೆಂಗಳೂರು ನಡುವೆ ಪ್ರಯಾಣಿಸುವವರಿಗೆ ಸುಗಮ, ಹೆಚ್ಚು ಪರಿಣಾಮಕಾರಿ ಪ್ರಯಾಣವನ್ನು ಸೃಷ್ಟಿಸುತ್ತದೆ ಎಂದು ಸಂಸದರು ರೈಲ್ವೆ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಜನರು ಆರ್ಥಿಕ ಮತ್ತು ಸಾಮಾಜಿಕ ಹಿತಾಸಕ್ತಿಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಜನಸಂಖ್ಯೆಯುಳ್ಳದಾಗಿದೆ.

ಶಿಕ್ಷಣ, ವ್ಯಾಪಾರ, ವ್ಯೆದ್ಯಕೀಯ ಸೇವೆಗಳಿಗಾಗಿ ಮತ್ತು ವಿವಿಧ ಉದ್ದೇಶಗಳಿಗಾಗಿಯೂ ಬೆಂಗಳೂರಿಗೆ ಪ್ರಯಾಣಿಸುತ್ತಾರೆ, ಆ ಕಾರಣಕ್ಕಾಗಿ ಈಗಿರುವ ಸೌಲಭ್ಯಗಳಿಂದ ತಡವಾಗಿ ಮುಟ್ಟುತ್ತಿರುವುದರಿಂದ ಹೈದರಾಬಾದ ಬೆಂಗಳೂರು “ವಂದೆ ಭಾರತ” ರೈಲು ಸೇಡಂನಲ್ಲಿ ನಿಲುಗಡೆ ಅವಕಾಶ ನೀಡಬೇಕೆಂದು ಸಂಸದ ಡಾ.ಉಮೇಶ ಜಾಧವ್ ಅವರು ಸಚಿವರಿಗೆ ಮನವಿ ಮಾಡಿದ್ದಾರೆ. ಸಂಸದ ಮನವಿಗೆ ಸ್ಪಂಧಿಸಿದ ಸಚಿವ ಆಶ್ವಿನ್ ವೈಷ್ಣವ್ ಅವರು ಅಗತ್ಯ ಕ್ರಮದ ಭರವಸೆ ನೀಡಿದ್ದಾರೆಂದು ಸಂಸದರು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here