ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರು ಶ್ರೇಷ್ಠ

0
74

ಚಿತ್ತಾಪುರ; ಕನ್ನಡಿಗರು ಸ್ವಾಭಿಮಾನಿಗಳಾಗಿ ಜೀವನ ನಡೆಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ನಾಡಿನ ನಾಯಕರ ಪಾತ್ರ ಶ್ರೇಷ್ಠವಾಗಿದೆ ಎಂದು ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯುನ್ಮಾನ ಮತ್ತು ಉಪಕರಣ ವಿಭಾಗ ಮುಖ್ಯಸ್ಥ ಪೆÇ್ರ. ಸಂಜಯ ಮಾಕಲ್ ಹೇಳಿದರು.

ಪಟ್ಟಣದ ಶ್ರೀಮತಿ ಮಹಾದೇವಮ್ಮ ಬಿ ಪಾಟೀಲ್ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕವತಿಯಿಂದ ಶನಿವಾರ ಹಮ್ಮಿಕೊಂಡಿರುವ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಕಸಾಪ ಅಜೀವ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಕನ್ನಡ ನಾಡಿನ ಅನೇಕ ಹೋರಾಟಗಾರರು ಬ್ರಿಟಿಷ್‍ರ ವಿರುದ್ದ ಹೋರಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಕೊಟ್ಟಿದ್ದಾರೆ ಎಂದರು.

Contact Your\'s Advertisement; 9902492681

ಸಂಗೋಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪುಸುಲ್ತಾನ್, ರಾಜಾ ವೆಂಕಟಪ್ಪ ನಾಯಕ, ಮೈಲಾರ ಮಹಾದೇವಪ್ಪನಂತಹ ದೇಶ ಪ್ರೇಮ ಮೆಚ್ಚುವಂತಹದ್ದು. ಕೆಲವರು ಸೋತರು ಶರಣಾಗಲಿಲ್ಲ. ಮಹಾದೇವಪ್ಪ ರಾಂಪುರೆ, ಕಮಲಾದೇವಿ, ಹರ್ಡೇಕರ್ ಮಂಜಪ್ಪ ಇವರು ಕರ್ನಾಟಕದ ಗಾಂಧಿಗಳು ಎಂದು ಬಣ್ಣಿಸಿದರು.

ಕನ್ನಡಿಗರು ನಿರಾಭಿಮಾನಿಗಳಾಗದೇ ಸ್ವಾಭಿಮಾನಿಗಳಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರನ್ನು ಬಡಿದೆಬ್ಬಿಸುವ ಎಚ್ಚರಿಸುವ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬ ಕನ್ನಡಿಗರು ಕನ್ನಡ ನಾಡಿನ ಇತಿಹಾಸವನ್ನು ತಿಳಿದುಕೊಳ್ಳಬೇಕು. ಕನ್ನಡದ ಪುಸ್ತಕಗಳು ಹೆಚ್ಚು ಹೆಚ್ಚು ಓದಬೇಕು. ಜನರ ಮಧ್ಯದಲ್ಲಿ ಕನ್ನಡ ಬಿತ್ತುವ ಕೆಲಸ ಕಸಾಪ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ವಿಶ್ವ ಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿ, ತಾಲೂಕು ಮಟ್ಟಕ್ಕೆ ಸೀಮಿತ ವಾಗದೇ ಗ್ರಾಮೀಣ ಮಟ್ಟದಲ್ಲಿ ಸಾಹಿತ್ಯ ಚಟುವಟಿಕೆಗಳು ನಡೆಯಬೇಕು. ಗ್ರಾಮೀಣ ಮಟ್ಟದಲ್ಲಿ ಸಾಹಿತ್ಯ ಪ್ರತಿಭೆಗಳು ಹೆಚ್ಚು ಇವೆ. ಅಂತಹವರ ಪ್ರತಿಭೆಗಳು ಹೊರತರಲು ಪ್ರಯತ್ನಿಸಬೇಕೆಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ, ತಾಲೂಕು ಕಸಾಪ ಗೌರವ ಸಲಹೆಗಾರ ನಾಗರಾಜ ಭಂಕಲಗಿ ಮಾತನಾಡಿದರು.
ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ ಅಧ್ಯಕ್ಷತೆವಹಿಸಿ ಮಾತನಾಡಿದರು.

ಪ್ರಾಚಾರ್ಯ ಸೋಮಶೇಖರ ಕಲಶೆಟ್ಟಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ವಿನೋದಕುಮಾರ ಜನೆವರಿ, ರಾಜೇಂದ್ರ ಮಾಡಬೂಳ, ಸಿದ್ದಲಿಂಗ ಬಾಳಿ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜಗದೇವ ದಿಗ್ಗಾಂವಕರ್, ವೆಂಕಟೇಶ ಬಳಿಚಕ್ರ, ರಮೇಶ ಬಟಗೇರಿ, ಸ್ವರ್ಣಲತಾರೆಡ್ಡಿ ದುಗನೂರ, ಮಹ್ಮದ್ ಇಬ್ರಾಹಿಮ, ಚಂದ್ರಶೇಖರ ಊಟಗೂರ, ಬಸಪ್ಪ ಯಂಬತ್ತನಾಳ, ನರಸಿಂಹ ಆಲಮೇಲಕರ್, ಶಾಂತಕುಮಾರ ಮಳಖೇಡ, ಆನಂದ ಪಾಟೀಲ್ ನರಬೋಳ್, ಲಿಂಗಪ್ಪ ಮಲ್ಕನ್, ನಿಂಗಪ್ಪ ಗೋಡೆಕರ್, ಸಿದ್ದಲಿಂಗಯ್ಯಸ್ವಾಮಿ ಕೋಡಗಿಮಠ, ಅಂಬರೀಷ್ ಸುಲೇಗಾಂವ, ವಿನೋದ ಬನಸೋಡೆ ಸೇರಿದಂತೆ ಇನ್ನಿತರಿದ್ದರು.

ಕಸಾಪ ತಾಲೂಕು ಮಹಿಳಾ ಪ್ರತಿನಿಧಿ ಪೂಜಾ ಭಂಕಲಗಿ ಪ್ರಾಸ್ತಾವಿಕ ಮಾತನಾಡಿದರು. ಪದವಿ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಶಾಂತಿಪ್ರೀಯಾ ಸ್ವಾಗತಿಸಿದರು.

ಪಾವನಿ, ಮರಿಯಂ ನಿರೂಪಣೆ ಮಾಡಿದರು. ಅಂಬರೀಶ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here