ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ ರೋಗಿಗಳು ಹೆಚ್ಚಾಗಿದ್ದು ಅದರ ಬಗ್ಗೆ ನಿಯಮಿತ ತಪಾಸಣೆ ಜೊತೆಗೆ ಜಾಗೃತಿ ಕೂಡ ಅವಶ್ಯ ಎಂದು ಕೆಬಿಎನ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ಅಭಿಪ್ರಾಯಪಟ್ಟರು.
ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗ ಹಾಗೂ ಭಾರತ-ಕಲ್ಬುರ್ಗಿ ಶಸ್ತ್ರಚಿಕಿತ್ಸಕರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡ ‘ಸ್ತನ ಕಾಯಿಲೆಯ ಅಪ್ಡೇಟ್ 2024’ ವಿಷಯ ಕುರಿತು ಮುಂದುವರಿದ ಮೆಡಿಕಲ್ ಶಿಕ್ಷಣ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಡಯಬಿಟಿಸ, ಬಿಪಿ, ಹೈಪರ ಟೆನ್ಶನ್ ಅಂತಹ ಕಾಯಿಲೆಗಳು ಜೀವನ ಶೈಲಿ ರೋಗಗಲೆಂದು ಗುರಿತಿಸಲ್ಪಡುತ್ತವೆ. ಈಗ ಸ್ತನ ಕ್ಯಾನ್ಸರ್ ಕೂಡ ಜೀವನ ಶೈಲಿ ರೋಗವಾಗಿದ್ದುˌ ಅಲ್ಲದೇ ಇದು ಅರ್ಬನ್ ಸ್ಥಳಗಳಲ್ಲಿ ಕಂಡು ಬರುತ್ತದೆ. ನಿಯಮಿತ ಸ್ತನ ತಪಾಸಣೆ ಒಳ್ಳೆಯದು. ಅದರ ಜೊತೆಗೆ ಜಾಗೃತಿ ಮೂಡಿಸಿದಲ್ಲಿ ಮುನ್ನಚ್ಚರಿಕೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ಉತ್ತಮ
ಆಹಾರ, ವಿಚಾರ, ವ್ಯಾಯಾಮ ಮತ್ತು ಜೀವನ ಶೈಲಿ ರೂಢಿಸಿಕೊಂಡಲ್ಲಿ ಆರೋಗ್ಯಮಯ ಜೀವನ ನಮ್ಮದಾಗಿಸಿಕೊಳ್ಳಬೇಕು. ಕೆಬಿಎನ್ ವಿವಿಯು ಸಂಶೋಧನೆಗೆ ಆದ್ಯತೆ ನಿಡುತ್ತದೆ. ಕ್ಲಿನಿಕಲ್ ಕಾರ್ಯದ ಜೊತೆಗೆ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಸ್ತ್ರ ಚಿಕಿತ್ಸಾ ವಿಭಾಗದ ಕಾರ್ಯವನ್ನು ಶ್ಲಾಘಸಿ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ 310 ಕ್ಕೂ ಹೆಚ್ಚು ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.
ಹಿರಿಯ ಶಸ್ತ್ರಚಿಕಿತ್ಸಕರಾದ ಡಾ. ಎಸ್.ಆರ್. ಹರವಾಳ,
ಡಾ. ಕಿಶೋರ್ ಮಾಣಿಕರ್ˌ ಡಾ. ಆಸ್ಲಮ ಸಯೀದರವರನ್ನು ಸನ್ಮಾನಿಸಲಾಯಿತು.
ಡಾ. ನಬೀಲ ಪ್ರಾರ್ಥಿಸಿದರು. ಸಂಘಟನಾ ಅಧ್ಯಕ್ಷ ಡಾ ಮೈನುದ್ದಿನ ಸ್ವಾಗತಿಸಿ ಪ್ರಸ್ತವಿಕವಾಗಿ ಮಾತನಾಡಿದರು. ಡಾ. ಅರಿಫಾ ಮತ್ತು ಡಾ. ಆಯಿಶಾ ನಿರೂಪಿಸಿದರು. ಡಾ. ನಂದಕಿಶೋರ ವಂದಿಸಿದರು.
ಡಾ.ಸಚಿನ, ಡಾ. ಅರುಣ್ ಬರದ, ಡಾ. ಜೀನತ್ ಬೇಗಂಡಾ. ಶರಣಬಸಪ್ಪ ಹಟ್ಟಿ, ಡಾ. ಗುರುರಾಜ್ ದೇಶಪಾಂಡೆ, ಡಾ. ಮೊಯಿನುದ್ದೀನ್ ಪ್ರಸ್ತುತ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.
ಡಾ. ಎಂಎ ಬಸೀರ್ ಮತ್ತು ಡಾ. ಶರಣಬಸಪ್ಪ ಹಟ್ಟಿ, ಡಾ. ನಂದಕಿಶೋರ್ ಶಿಂಧೆ ಪ್ಯಾನಲ್ ಚರ್ಚೆ ಮತ್ತು ಕೇಸ್ ಪ್ರಸ್ತುತಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಮೆಡಿಕಲ್ ಡೀನ್ ಡಾ. ಸಿದ್ದೇಶ್, ರಿಸರ್ಚ್ ಡೀನ್ ಡಾ. ರಾಜಶ್ರೀ ಪಾಲದಿ, ಡಾ. ಗುರುಪ್ರಸಾದ, ಡಾ. ದೇವನಿ, ಡಾ. ಅಬ್ದುಲ್ ಬಸೀರ್, ಮೆಡಿಕಲ್ ಸುಪರಿಟೆಂಡೆಂಟ್ ಡಾ. ಸಿದ್ಧಲಿಂಗ ಚೆಂಗ್ಟಿ, ನಾಡೋಜ ಡಾ. ಪಿ ಎಸ್ ಶಂಕರ, ಡಾ. ಸುರೇಶ್ ಪಾಟೀಲ್, ಡಾ. ಪ್ರದೀಪಕುಮಾರ್, ಡಾ. ಶಿವಕುಮಾರ್, ಡಾ. ಬಸವಂತ ಪಾಟೀಲ, ಡಾ. ಜಮಾ ಮೂಸ್ವಿ, ಡಾ. ಅಲಿ ಪಟೇಲ್, ಡಾ. ವಿಕ್ವಾರ್, ಡಾ. ಜೂಹಿ ಶಬನಮ್, ಡಾ. ಎಂ ಎಫ್ ವಿಕ್ವಾಸ್, ಡಾ. ಖಾಜಾ, ಡಾ. ಅನೂಪ್ ದೇಸಾಯಿ, ಡಾ. ಅಹ್ಮದ್ ಖಾನ್, ಡಾ. ವಜ್ರಶ್ವರಿ, ಡಾ. ಶರೀನ್, ಡಾ. ಗುತ್ತೇದಾರ, ಡಾ. ಆಸ್ಮಾ, ಡಾ. ಚೇತನಾ ಮುಂತಾದವರು ಹಾಜರಿದ್ದರು.