ವಾಡಿ: ಕಾಯಕ ಶರಣರ ಜಯಂತಿ ಆಚರಣೆ

0
34

ವಾಡಿ: ಮಾದರ ದೊಳ್ಳಯ್ಯ ಡೋಹರ ಕಕ್ಕಯ್ಯ, ಮಾದರ ಚೆನ್ನಯ್ಯ, ಸಮಗಾರ ಹರಳ್ಳಯ್ಯ, ಉರಿಲಿಂಗ ಪೆದ್ದಿ ಸಮುದಾಯದ ಕಾಯಕ ಶರಣರ ಜಯಂತಿಯನ್ನು ಬಿಜೆಪಿ ಕಛೇರಿಯಲ್ಲಿ ಆಚರಿಸಲಾಯಿತು.

ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ
ಶರಣರು ಹನ್ನೆರಡನೇ ಶತಮಾನದಲ್ಲಿ ನೀಡಿದ ಸಂದೇಶಗಳು ಈ ಭೂಮಿಯ ಮೇಲೆ ಮನುಷ್ಯರು ಇರುವರೆಗೆ ಪ್ರಸ್ತುತವಾಗಿರುವವು,
ಈ ಮಣ್ಣಿನ ಸಂಸ್ಕೃತಿ ಉಳಿವಿಗೆ ಅನೇಕ ಮಹನೀಯರ ಶ್ರಮ ಕಾರಣವಾಗಿದೆ.ಅವರು ಅಳವಡಿಸಿಕೊಂಡಿದ್ದ ಜೀವನಯ ಮೌಲ್ಯಗಳು ದೇಶದ ಹಿರಿಮೆಯನ್ನು ಹೆಚ್ಚಿಸಿವೆ. ಆದ್ದರಿಂದ ಈ ಮಣ್ಣಿನ ಮಹನೀಯರ ಮೌಲ್ಯ ಎಂದು ಮರೆಯಲಾರದಂತದ್ದು
ಎಂದರು.

Contact Your\'s Advertisement; 9902492681

12ನೇ ಶತಮಾನವು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ಕಾಲ ಇಂತಹ ಸಂದರ್ಭದಲ್ಲಿ ಜೀವಿಸಿದ ಎಲ್ಲಾ ಶರಣರು ತಮ್ಮ ಜೀವನವನ್ನೇ ಸಮಾಜದ ಏಳಿಗೆಗಾಗಿ ಮುಡುಪಾಗಿಟ್ಟಿದ್ದರು. ಈ ಕಾಯಕ ಶರಣರ ಸಾಮಾಜಿಕ ಕ್ರಾಂತಿಯ ಆದರ್ಶಮಯ ಜೀವನ ಮತ್ತು ತತ್ವಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವಂತಹ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮುಖಂಡರಾದ ರಾಮಚಂದ್ರ ರಡ್ಡಿ, ಸಿದ್ದಣ್ಣ ಕಲ್ಲಶೆಟ್ಟಿ, ಭೀಮರಾವ ದೊರೆ, ಶರಣಗೌಡ ಚಾಮನೂರ, ಶಿವಶಂಕರ ಕಾಶೆಟ್ಟಿ,ಪ್ರಕಾಶ ಪುಜಾರಿ,ಸತೀಶ ಸಾವಳಗಿ, ಅಯ್ಯಣ್ಣದಂಡೋತಿ, ಬಸವರಾಜ ಪಗಡಿಕರ, ದೇವೇಂದ್ರ ಪಂಚಾಳ, ಯಂಕಮ್ಮ ಗೌಡಗಾಂವ, ಅನುಸುಭಾಯಿ ಪವಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here