“ಅಂತರಂಗ ಶುದ್ಧ ವಿಲ್ಲದವರ ಸಂಗವು ಸಿಂಗಿ ಕಾಲ ಕೂಟ ವಿಷವು ಕೂಡಲಸಂಗಯ್ಯ”

0
44

ಸಾರಸಜ್ಜನರ ಸಂಗವ ಮಾಡೋದು ದೂರ ದುರ್ಜನರ ಸಂಗ ಬೇಡವಯ್ಯ ಆವಾ ಹಾವಾದಡೆನು ವಿಷ ಒಂದೆ , ಅಂಥವರ ಸಂಗ ಬೇಡವಯ್ಯ ಅಂತರಂಗ ಶುದ್ಧ ವಿಲ್ಲದವರ ಸಂಗವು ಸಿಂಗಿ ಕಾಲ ಕೂಟ ವಿಷವು ಕೂಡಲಸಂಗಯ್ಯ

ಅಯ್ಯೋ! ಇತ್ತೀಚಿನ ದಿನಗಳಲ್ಲಿ ಈ ವಚನ ನನಗೆ ತುಂಬಾ ಧೈರ್ಯ ತುಂಬುತ್ತಿದೆ, ಯಾಕೆಂದರೆ ಅಂತಹ ಸನ್ನಿವೇಶಗಳನ್ನು ನಾನು ಮತ್ತೆ ಮತ್ತೆ ಎದುರು ನೋಡುತ್ತಿದ್ದೇನೆ.

Contact Your\'s Advertisement; 9902492681

ವಿಶ್ವಗುರು ಬಸವಣ್ಣನವರು ವಿಶ್ವದ ಬೆಳಕು, ಅವರ ತತ್ವ ಆದರ್ಶಗಳು ಎಲ್ಲಾ ರೀತಿಯ ಅಜ್ಞಾನ ಅಂಧಕಾರವನ್ನು ಹೊಡೆದೋಡಿಸುವ ಶಕ್ತಿ ಪಡೆದಿದೆ. ಅಂತಹ ಬೆಳಕನ್ನು ಪಡೆದರು ಇಂದು ನಾವೆಲ್ಲ ಕತ್ತಲೆಯ ಕಡೆಗೆ ಓಡುತ್ತಿದ್ದೇವೆ.

ಯಾಕೆಂದರೆ ಬಸವಣ್ಣನವರ ಆಚರಣೆ ಮಾಡುತ್ತಲೇ ಬಾಯಿಯಿಂದ ಹೊಲಸು ಮಾತುಗಳು, ಇನ್ನೊಬ್ಬರ ಬಗ್ಗೆ ದಯವಿಲ್ಲದ ಮನೋಭಾವನೆ, ಕಳಕಳಿ ಇಲ್ಲದ ಉತ್ಕೃಷ್ಟ ಯೋಚನೆ , ಇಂಥವರನ್ನು ನೋಡಿ ಮನನೊಂದಿದೆ.

ಸಜ್ಜನರ ಸಹವಾಸ ಮಾಡುವ ದುರ್ಜನರಿಂದ ದೂರವಿರುವ ಅಗತ್ಯ ಅಂದು ಮಾತ್ರವಲ್ಲ ಇಂದು ಹೆಚ್ಚಾಗಿದೆ, ಅಂತರಂಗ ಬಹಿರಂಗ ಶುದ್ಧ ವಿರುವ ಶರಣರು ಸಿಗುವುದು ತುಂಬಾ ವಿರಳ,

ಅಂತರಂಗವು ಶುದ್ಧ ವಿಲ್ಲ ಬಹಿರಂಗವು ಶುದ್ದ ವಿಲ್ಲ ಮೇಲೆ ಬಸಪ್ಪ ಒಳಗೆ ವಿಷಪ್ಪ ಎನ್ನುವ ಸ್ಥಿತಿ ಇಂದಿನದಾಗಿದೆ.

ಅಂದು ಬಸವಣ್ಣನವರು ಬಿಟ್ಟು ಹೋಗಿರುವ ತತ್ವಗಳನ್ನು ಮೊದಲು ಅಧ್ಯಯನ ಮಾಡಬೇಕು ಅಧ್ಯಯನ ಮಾಡಿದ್ದನ್ನು ಅರ್ಥ ಮಾಡಿಕೊಂಡು ಆಚರಣೆಯಲ್ಲಿ ತರುವ ಪ್ರಮಾಣಿಕ ಪ್ರಯತ್ನ ಮಾಡಬೇಕು, ಆದರೆ ಅದು ಯಾವುದು ಮಾಡದೆ

*ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ* ಅಂತ ಹೇಳುವಂಥವರೇ ದ್ವೇಷ ಅಸೂಹೆಗಳನ್ನ ತುಂಬಿಕೊಂಡು ದಯವನ್ನು ಮರೆತಿದ್ದಾರೆ.

ವಿಶ್ವಗುರು ಬಸವಣ್ಣನವರು ಮೇಲ್ಜಾತಿಯಲ್ಲಿ ಹುಟ್ಟಿದ್ದರು, ಮೇಲು ಎನ್ನುವ ಅಹಂಕಾರ ಅವರಿಗೆ ಯಾವತ್ತಿಗೂ ಇರಲಿಲ್ಲ,

ಜಾತಿಯ ನಿರಶನ ಮಾಡಿಕೊಂಡು ಎಲ್ಲರೂ ಜೊತೆ ಒಂದಾಗಿ ಬಾಳಿದರು ಹೊಲೆಗಂಡಲ್ಲದೆ ಪಿಂಡದ ನೇಲೆಗ್ರಾಯಶ ಇಲ್ಲ ಎಂದು ಹೇಳುತ್ತಿದ್ದರು, ಎಲ್ಲರ ಹುಟ್ಟಿನ ಗುಣ ಒಂದೇ ರೀತಿಯಾಗಿರುವ ಮನುಷ್ಯ , ಮನುಷ್ಯರಲ್ಲಿ ಜಾತಿಭೇದ ಅಹಂಕಾರ ದ್ವೇಷ ಅಸೂಹೆಗಳನ್ನು ತುಂಬಿಕೊಂಡು ಈ ದಿನ ತುಳುಕಾಡುತ್ತಿದ್ದಾನೆ. ಎಂತಹ ವಿಪರ್ಯಾಸ ಅಲ್ಲವೇ???

-ಮೇನಕಾ ಪಾಟೀಲ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here