ಸೊಳ್ಳೆ ನಿರ್ಮೂಲನೆ ಬಗ್ಗೆ ಎಚ್ಚರವಿರಲಿ

0
45

ಅಫಜಲಪೂರ: ತಾಲೂಕಿನ ಗೊಬ್ಬೂರು ವ್ಯಾಪ್ತಿಯ ಗೊಬ್ಬರವಾಡಿ ಸೇವಾಲಾಲ್ ಬಳೆ ಮಹಾರಾಜ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗು, ಚಿಕನ್ ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರ ಬರದಂತೆ ಸೊಳ್ಳೆಗಳ ನಿಯಂತ್ರಣ ಮಾಡಿದಲ್ಲಿ ಇವುಗಳನ್ನು ತಡೆಗಟ್ಟಬಹುದು ಎಂದು ಮಲೇರಿಯಾ ವಿರೋಧಿ ಮಾಸಾ ಚರಣ ಕಾರ್ಯಕ್ರಮದಲ್ಲಿ ಕರೆ ನೀಡಿದರು.

ಮಲೇರಿಯಾ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ 2025 ರೊಳಗೆ ಮಲೇರಿಯಾ ನಿರ್ಮೂಲನೆ ಮಾಡಲು ಎಲ್ಲರೂ ಪಣತೊಡೋಣ. ಮಲೇರಿಯಾ ಮುಕ್ತ ಸಮಾಜ ನಿರ್ಮಿಸೋಣ. ಈ ವರ್ಷದ ಘೋಷ ವಾಕ್ಯಯಂತೆ ಹೆಚ್ಚು ಸಮಾನತೆ ಜಗತ್ತಿಗೆ ಮಲೇರಿಯ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ ಎಂದು ವಿವರಿಸುತ್ತಾ ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ಪರದೆ, ಬೇವಿನ ಸೊಪ್ಪಿನ ಹೊಗೆ, ಸೊಳ್ಳೆಬತ್ತಿ, ಹಾಗೂ ಸೊಳ್ಳೆ, ಬ್ಯಾಟ್, ಇವುಗಳ ಬಳಕೆಯಿಂದ ಸೊಳ್ಳೆಗಳ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಮಾಹಿತಿ ನೀಡಿದರು.

Contact Your\'s Advertisement; 9902492681

ತರುವಾಯ ಕೇಂದ್ರ ಸ್ಥಾನದ ಆರೋಗ್ಯ ನಿರೀಕ್ಷಣಾಧಿಕಾರಿ ಉದಯಕುಮಾರ್ ಮಾತನಾಡಿ ಮಲೇರಿಯಾ ರೋಗ ಸೊಂಕೀತ ವ್ಯಕ್ತಿಗೆ ಕಚ್ಚಿ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಮಲೇರಿಯ ರೋಗ ಹರಡುತ್ತದೆ ಎಂದು ಹಾಗೂ ಅದರ ಲಕ್ಷಣ ಮತ್ತು ಚಿಕಿತ್ಸೆ ರಕ್ತ ಲೇಪನ ಪರೀಕ್ಷೆ ಮಹತ್ವ ಕುರಿತು ಮಾತನಾಡಿದರು.

ತುರುವಾಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೈಯದ್ ಅಸರ್ ಹಾಶ್ಮಿ ಲಾರ್ವ ಸಮೀಕ್ಷೆ ಕುರಿತು ಮಾತನಾಡಿ ತಮ್ಮ ಮನೆಗೆ ಆಶಾ ಕಾರ್ಯಕರ್ತರು ಬಂದಾಗ ಸಹಕರಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರುಗಳು ಸಿಬ್ಬಂದಿ ವರ್ಗ ಹಾಗೂ ಆಶಾ ಕಾರ್ಯಕರ್ತೆ ಕವಿತಾ ವಾಡಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here