ವಚನಗಳ ಓದಿನಿಂದ ಜ್ಞಾನ ಸಂಚಲವಾಗುತ್ತದೆ

0
54

ಶಹಾಪುರ: ಬಸವಾದಿ ಶರಣರ ವಚನಗಳನ್ನು ಓದುವುದರಿಂದ ನಮಗರಿಯದೆ ನಮ್ಮೊಳಗೆ ಜ್ಞಾನ ಸಂಚಲಗೊಳ್ಳುತ್ತದೆ. ಮನಸ್ಸು ಪರಿಶುದ್ಧಗೊಂಡು ಇವನಾರವನೆನ್ನದೆ, ಇವ ನಮ್ಮವ ಇವ ನಮ್ಮವನೆಂದು ಎಲ್ಲರನ್ನು ತಬ್ಬಿಕೊಳ್ಳುವ ಭಾವ ಉಂಟಾಗುತ್ತದೆ ಎಂದು ಸಾಹಿತಿ, ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.

ತಾಲೂಕಿನ ಶಿರವಾಳ ಗ್ರಾಮದಲ್ಲಿ , ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಶಿರವಾಳ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜಂಟಿಯಾಗಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನಕ್ಕಾಗಿ ವಚನಗಳು ಎಂಬ ವಿಷಯದ ಕುರಿತು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಮಕ್ಕಳಿಗೆ ಚಿಕ್ಕಂದಿನಿಂದಲೆ ಒಳ್ಳೆಯ ಸಂಸ್ಕಾರ ನೀಡಬೇಕು. ಶರಣ ವಚನಗಳು ಮಕ್ಕಳ ಮನಸ್ಸನ್ನು ಜಾತಿ, ಮತ, ಪಂಥಗಳನ್ನು ಮೀರುವಂತೆ ಬೆಳೆಸುತ್ತವೆ. ವಚನಗಳ ಓದು ಮನುಷ್ಯನ ಜ್ಞಾನದ ಕ್ಷಿತೀಜವನ್ನು ಎತ್ತರಿಸುತ್ತವೆ. ನಮ್ಮ ಸುತ್ತ ಮುತ್ತ ನಡೆದಿರುವ ಮೌಢ್ಯ ,ಕಂದಾಚಾರ, ಜಾತಿಯತೆಯನ್ನು ಅಳಿಯುವ ಶಕ್ತಿ ವಚನಗಳಿಗೆ ಇದೆ ಎಂದು ವಿಷದ ಪಡಿಸಿದರು.

Contact Your\'s Advertisement; 9902492681

ದೇವಾಲಯದೊಳಗೆ ಇರುವ ಮೂರ್ತಿಗಳಲ್ಲಿ ಜೀವ ಇರಲು ಸಾಧ್ಯವಿಲ್ಲ. ದೇವಾಲಯ ಹಾಗೂ ಮೂರ್ತಿಗಳನ್ನು ಬಳಸಿಕೊಂಡು ಪುರೋಹಿತರು ಜನ ಸಾಮಾನ್ಯರನ್ನು ಭಯದಲ್ಲಿ ಇಟ್ಟಿದ್ದಾರೆ. ನಮ್ಮ ಬದುಕಿನ ದಾರಿ ನಾವೇ ಕಂಡುಕೊಳ್ಳಬೇಕೆ ಹೊರತು ಇನ್ನಾವ ಅಗೋಚರ ಶಕ್ತಿ ನಮ್ಮ ಕೈ ಹಿಡಿದು ಮುನ್ನಡೆಸುವುದಿಲ್ಲ ಎಂದು ಶರಣರ ವಚನಗಳ ಮೂಲಕ ಖಚಿತ ಪಡಿಸಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಿವಣ್ಣ ಇಜೇರಿ, ವಚಗಳಲ್ಲಿ ಅತ್ಯದ್ಭುತವಾದ ಶಕ್ತಿಯಿದೆ. ದಿನ ನಿತ್ಯ ಸೂರ್ಯನೇಮಿ ಕ್ರಮದಂತೆ ವಚನಗಳನ್ನು ಓದುತ್ತ ಹೋಗಬೇಕು. ಮುಂದೊಂದು ದಿನ ಜ್ಞಾನದ ಭಂಡಾರವೆ ನಾವಾಗುತ್ತೇವೆ ಎಂದು ನುಡಿದರು.

ಶಿರವಾಳ ವಲಯದ ಕ.ಸಾ.ಪ.ಅಧ್ಯಕ್ಷ ಮಲ್ಲಣ್ಣ ಹೊಸಮನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ.ಗೌರವ ಕಾರ್ಯದರ್ಶಿ ಮಾರ್ತಂಡಪ್ಪ ಶಿರವಾಳ ಸ್ವಾಗತಿಸಿದರು. ರಾಜೇಶ್ವರಿ ಶಿಕ್ಷಕಿ ಪ್ರಾರ್ಥನೆ ಮಾಡಿದರು. ರೇವಣಸಿದ್ದಪ್ಪ ಸಾಹು ಶಿಕ್ಷಕರು ನಿರೂಪಿಸಿದರು. ರಮೇಶ ಶಿಕ್ಷಕರು ವಂದನಾರ್ಪಣೆ ಗೈದರು.

ವೇದಿಕೆಯ ಮೇಲೆ ತಾ.ಪಂ. ಸದಸ್ಯರಾದ ಶಿರನೆತ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಮ್ಮ ಉಜ್ಜುನಾಯಕ, ಗ್ರಾ.ಪಂ. ಉಪಾಧ್ಯಕ್ಷರಾದ ಭೀಮವ್ವ ಕಂಬದ, ಎಸ.ಡಿ.ಎಂ.ಸಿ. ಅಧ್ಯಕ್ಷರಾದ ದೇವಣ್ಣ ಹೈಯಾಳ ಕೆ, ಭೀಮರಾಯ ಕೋಲ್ಕರ್, ಶಾಲಾ ಮುಖ್ಯ ಗುರುಗಳಾದ ಭೀಮಣ್ಣ ಬೇವಿನಹಳ್ಳಿ, ರುದ್ರಗೌಡ ತಡಿಬಿಡಿ,ಮರೆಪ್ಪ ಭಂಡಾರಿ, ಬಸವರಾಜ ರೋಜಾ, ಶಂಕ್ರಣ್ಣ ದೇಸಾಯಿ, ಎಸ್.ಎಂ.ನದಾಫ್, ಎ.ಎಂ.ಮಥಿನ್, ಮುಂತಾದವರು ಇದ್ದರು.

ಸಭೆಯಲ್ಲಿ ಶಾಲಾ ಶಿಕ್ಷಕ- ಶಿಕ್ಷಕಿಯರು ಮಕ್ಕಳು ಹಾಗೂ ಊರಿನ ಪ್ರಮುಖರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here