ರೋಗ ನೀರೋಧಕ ಶಕ್ತಿ ವೃದ್ಧಿಸುವ ಮಾತ್ರೆ ವಿತರಣೆ

0
31

ಕಲಬುರಗಿ: ನಗರದ ಮಕ್ಕಾ ಮಸೀದಿ ಸಭಾಂಗಣದಲ್ಲಿ ಜೆಡಿಎಸ್ ಯುವ ಘಟಕ ಹಾಗೂ ಎಚ್‌ಕೆಇ ಸಂಸ್ಥೆ ಮಾಲಕರೆಡ್ಡಿ ಹೋಮಿಯೋಪಥಿ ಆಸ್ಪತ್ರೆ ಸಹಯೋಗದಲ್ಲಿ ಜಿಲ್ಲಾಧ್ಯಕ್ಷ ಮಹಮ್ಮದ ಅಲಿಮೋದ್ದಿನ್ ಇನಾಮದಾರ್ ನೇತೃತ್ವದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಹೊಮಿಯೋಪಥಿ ಮಾತ್ರೆ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.

Contact Your\'s Advertisement; 9902492681

ನಂತರ ಮಾತನಾಡಿದ ಮಹಮ್ಮದ ಅಲಿಮೋದ್ದಿನ್ ಇನಾಮದಾರ್, ಕರೋನಾ ರೋಗಕ್ಕೆ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದೆ ಔಷಧಿಯಾಗಿದ್ದು, ಎಲ್ಲರೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆ ಸೇವಿಸಿ ಕರೋನಾ ಬರದಂತೆ ತಡಯಬೇಕು ಎಂದು ಮನವಿ ಮಾಡಿದರು.

ಮಾಲಕರೆಡ್ಡಿ ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಸಂಪತಕುಮಾರ, ಮೆಡಿಕಲ್ ಸುಪ್ರಿಡೆಂಟ್ ಡಾ.ರಾಜೇಂದ್ರ ಪಾಟೀಲ್, ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಸೈಯದ್ ಜಾಫರ್ ಹುಸೇನ್, ಮಾಜಿ ಪಾಲಿಕೆ ಸದಸ್ಯರಾದ ಇಸ್ಮಾಯಿಲ್ ಫೈಸಲ್, ಮಲ್ಲಕಾರ್ಜುನ ಟೆಂಗಳಿ ಮಕ್ಕಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ರೌಫ್, ಆದ್ನಾನಖಾನ್ ಸಾಬ್, ಇಮ್ರಾನ್ ನ್ಯಾಯವಾದಿ, ಇರ್ಷದ್ ಜೈದಿ, ಅಲಂದರ್ ಜೈದಿ, ಸೈಯದ್ ಅಬೂಬಕರ್, ಸೈಯದ್ ಅಲಿಉಲ್ಲಾ, ಅಸ್ಲಾಂ ಖತೀಬ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here