Tuesday, July 16, 2024
ಮನೆಬಿಸಿ ಬಿಸಿ ಸುದ್ದಿಕಲಬುರಗಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ನಕಲಿ ಅಭ್ಯರ್ಥಿಗಳು

ಕಲಬುರಗಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ನಕಲಿ ಅಭ್ಯರ್ಥಿಗಳು

ಕಲಬುರಗಿ: ಕೊರೊನಾ ಸಂಕಷ್ಟದ ನಡುವೆ ನಡೆಯುತ್ತಿರು ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆಗೆ ಮತ್ತೊಂದು ಶಾಕ್ ನೀಡಿದೆ.

ಪರೀಕ್ಷೆ ಬರೆಯಬೇಕಿದ ಕೆಲವು ವಿದ್ಯಾರ್ಥಿಗಳು ತಮ್ಮ ಬದಲಿಗೆ ಮತ್ತೊಬ್ಬರನ್ನು ಪರೀಕ್ಷೆಗೆ ಕೂರಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಡಿಡಿಪಿಐಗೆ ಶಿಕ್ಷಣ ಇಲಾಖೆ ಉಪ ಆಯುಕ್ತ ನಳೀನ್ ಅತುಲ್ ಪರೀಕ್ಷಾ ಕೇಂದ್ರಕ್ಕೆ ಖುದ್ದು ಭೇಟಿ ನೀಡಿದಾಗ ಏಳು ವಿದ್ಯಾರ್ಥಿಗಳು ತಮ್ಮ ಬದಲು ನಕಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸಿರುವ ವಿಷಯ ಬಹಿರಂಗವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಹಾಗೂ ಪರೀಕ್ಷೆಗೆ ಕುಳಿತ ನಕಲಿ ಅಭ್ಯರ್ಥಿಗಳ ವಿರುದ್ಧವೂ ಎಫ್‍ಐಆರ್ ದಾಖಲಿಸಲು ಆಯುಕ್ತ ನಳೀನ್ ಅತುಲ್ ಸೂಚಿಸಿದ್ದಾರೆ.

ಕಲಬುರಗಿ ತಾಲೂಕಿನ ಕೋಟನೂರ (ಡಿ) ಗ್ರಾಮದ ಸೇಂಟ್ ಮೇರಿ ಪ್ರೌಢ ಶಾಲೆಯ ಕೇಂದ್ರದಲ್ಲಿ ನಾಲ್ವರು ಹಾಗೂ ಕಲಬುರಗಿ ನಗರದ ಜೇವರ್ಗಿ ಕಾಲೊನಿಯ ಸರ್ಕಾರಿ ಪ್ರೌಢ ಶಾಲೆಯ ಕೇಂದ್ರದಲ್ಲಿ ಮೂವರು ಅಭ್ಯರ್ಥಿಗಳು ತಮ್ಮ ಬದಲಿಗೆ ಬೇರೊಬ್ಬರನ್ನು ಕೂರಿಸಿ ಪರೀಕ್ಷೆ ಬರೆಸಿದ್ದಾರೆ ಎನ್ನಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular