ಪೊಲೀಸ್ ಠಾಣೆಗೂ ವಕ್ಕರಿಸಿದ ಕರೊನಾ-ಸೀಲ್ ಡೌನ್ ಯಾಕಿಲ್ಲ ?

0
107

ಶಹಾಬಾದ:ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಮಧ್ಯೆ ಪೊಲೀಸ್ ಸಿಬ್ಬಂದಿಗಳಿಗೂ ಕರೊನಾ ಆವರಿಸಿದರೂ ಪೊಲೀಸ್ ಠಾಣೆ ಸೀಲ್ ಡೌನ್ ಮಾಡುತ್ತಿಲ್ಲ ಏಕೆ ? ಎಂಬ ಪ್ರಶ್ನೆ ಪೊಲೀಸ್ ಸಿಬ್ಬಂದಿಗಳಲ್ಲಿ ಕಾಡುತ್ತಿದೆ.ಇದರಿಂದ ಆತಂಕ ದುಗುಡಕ್ಕೆ ಕಾರಣವಾಗಿದೆ.

ನಗರದಲ್ಲಿ ಸೋಮವಾರ ಸುಮಾರು 12 ಜನರಿಗೆ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಮೂವ್ವರು ಪೊಲೀಸ್ ಸಿಬ್ಬಂದಿಗಳು. ಅಲ್ಲದೇ ಮಂಗಳವಾರ ಸುಮಾರು 9 ಜನರಿಗೆ ಸೊಂಕು ತಗುಲಿದ್ದು, ಅದರಲ್ಲಿ ಇಬ್ಬರು ಪೊಲೀಸರು ಒಳಗೊಂಡಿದ್ದಾರೆ.ಇದರಿಂದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿರುವುದು ನಿಜ.ಆದರೆ ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿರುವ ಪೊಲೀಸರಿಗೂ ಕರೊನಾ ವೈರಸ್ ಬೆಂಬಿಡದೇ ಕಾಡುತ್ತಿರುವುದರಿಂದ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೂ ಎಲ್ಲಿಲ್ಲದ ಭಯ ಆವರಿಸಿದೆ. ಈ ಹಿಂದೆ ಮಜ್ಜಿದ್ ವೃತ್ತ, ಮಡ್ಡಿಯಲ್ಲಿ ಕರೊನಾ ಪಾಸಿಟಿವ್ ಒಬ್ಬರಿಗೆ ಬಂದ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೆ ಒಂದು ವಾರದಲ್ಲಿ ಪೊಲೀಸ್ ಠಾಣೆಯ ಸುಮಾರು 7 ಸಿಬ್ಬಂದಿಗಳಿಗೆ ಕರೊನಾ ಪಾಸಿಟಿವ್ ಬಂದಿದ್ದರೂ ಸೀಲ್ ಡೌನ್ ಮಾಡುವಲ್ಲಿ ತಾಲೂಕಾಢಳಿತ ಹಾಗೂ ಪೊಲೀಸ್ ಇಲಾಖೆ ಮುಂದಾಗುತ್ತಿಲ್ಲವೇಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

Contact Your\'s Advertisement; 9902492681

ಕಳೆದ ವಾರ ಪೊಲಿಸ್ ಸಿಬ್ಬಂದಿಗೆ ಪಾಸಿಟಿವ್ ಬಂದ ತಕ್ಷಣವೇ ತಹಸೀಲ್ದಾರ ಸುರೇಶ ವರ್ಮಾ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ರಾಪಿಡ್ ಟೆಸ್ಟ ಮಾಡಿದಾಗ ಇಬ್ಬರಿಗೆ ಕರೊನಾ ಇರುವುದು ದೃಢಪಟ್ಟಿತ್ತು.ಆಗ ಪೊಲೀಸ್ ಠಾಣೆಯನ್ನು ಸ್ಯಾನಿಟೈಜರ್ ಮಾಡಿದ್ದಾರೆ ಹೊರತು ಸೀಲ್ ಡೌನ್ ಮಾಡಿರಲಿಲ್ಲ. ಆದರೆ ಮಾಧ್ಯಮದವರಿಗೆ ಸೀಲ್ಡೌನ್ ಮಾಡಿದ್ದೆವೆ ಹೇಳಿದ್ದಾರೆ ಹೊರತು ಮಾಡಿರಲಿಲ್ಲ. ಠಾಣೆಯ ಅಧಿಕಾರಿಗಳಿಗೆ ಕೇಳಿದಾಗ ಸೀಲ್ ಡೌನ್ ಮಾಡುತ್ತೆವೆ ಎಂದವರು ಮಾಡಲಿಲ್ಲ.ಕರೊನಾ ಠಾಣೆಗೆ ವ್ಯಾಪಿಸಿದ್ದರಿಂದ ಪೊಲೀಸ್ ಠಾಣೆಯ ಪಿಐ ಅವರೂ ಹತ್ತು ದಿನಗಳವರೆಗೆ ರಜೆ ಹಾಕಿ ಹೋಗಿದ್ದಾರೆ ಎನ್ನಲಾಗಿದೆ.ಆದರೆ ನಮ್ಮ ಗತಿಯೇನು ಎಂಬ ಪ್ರಶ್ನೆ ಪೊಲೀಸ್ ಸಿಬ್ಬಂದಿಗಳದ್ದಾಗಿದೆ. ಕರೊನಾ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ರಾತ್ರಿ ಹಗಲೆನ್ನದೇ ಕಾರ್ಯನಿರ್ವಹಿಸಿದ್ದೆವೆ. ಎಲ್ಲರ ಜೀವವೂ ಒಂದೇ.ನಮಗೆ ಜೀವವಿಲ್ಲವೇ? ಈಗಲಾದರೂ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿ ನಮ್ಮನ್ನು ಮತ್ತು ನಮ್ಮ ಕುಟುಂಬದವರನ್ನು ಕರೊನಾ ವೈರಸನಿಂದ ರಕ್ಷಣೆ ನೀಡುವಲ್ಲಿ ಸಹಕರಿಸಬೇಕೆಂದು ಸ್ಥಳೀಯ ಪೊಲೀಸರು ತಾಲೂಕಾಢಳಿತವನ್ನು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here