ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

0
26

ರಾಯಚೂರು: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಸಲ್ಲಿಸ ಬೇಕು. ನಾಗಮೋಹನದಾಸ್‌ ವರದಿಗಳನ್ನು ಸಂಪುಟಕ್ಕೆ ಸಲ್ಲಿಸಿ ಬಹಿರಂಗಗೊಳಿಸಬೇಕು ಇಲ್ಲದಿದ್ದಲ್ಲಿ ಮುಂಬರುವ ಉಪ ಚುನಾವಣೆ ಬಿಜೆಪಿ ವಿರುದ್ಧ ಮತ ಚಲಾಯಿಸಲಾಗುವುದು ಎಂದು ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿದರು.

ಅವರಿಂದು ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಸರ್ಕಾರವು ಆಡಳಿತಕ್ಕೆ ಬಂದಾಗಿನಿಂದಲೂರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಕಲ್ಯಾಣದ ಕಾರ್ಯಕ್ರಮಗಳೆಲ್ಲವು ನೆನಗುದಿಗೆ ಬಿದ್ದಿವೆ. ಕನಿಷ್ಠ ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಯೋಜನೆಗಳಲ್ಲಿ ನಿಗಧಿಪಡಿಸ ಲಾಗಿದ್ದ ಐದು ಲಕ್ಷ ಮತ್ತು ಮೂರು ಲಕ್ಷ ರೂಪಾಯಿಗಳ ಸಬ್ಸಿಡಿ ರದ್ದುಗೊಳಿಸಿ ಕೇವಲ ಒಂದು ಲಕ್ಷ ಮತ್ತು ಐವತ್ತು ಸಾವಿರಕ್ಕೆ ಸಮಿತಿಗೊಳಿಸಲಾಗಿದೆ ಮತ್ತು ಐರಾವತಿ ಯೋಜನೆಯನ್ನು ಕೈಬಿಡಲಾಗಿದೆ ಎಂದು ಎಂದರು.

ಕೊರೋನಾ ವೈರಸ್ ನಿಂದ ಪ್ರಾಣವನ್ನು ಪಣಕ್ಕಿಟ್ಟು ಹಗಲಿರುಳು ದುಡಿಯುತ್ತಿರುವ ಸಫಾಯಿ ಕರ್ಮಚಾರಿಗಳು ಪೌರ ಕಾರ್ಮಿಕರಿಗೆ ಕಳೆದ 13 ವರ್ಷಗಳಿಂದಲೂ ಯಾವ ಯೋಜನೆಯು ತಲುಪಿಲ್ಲ. ಹೆಸರಿಗೆ ಮಾತ್ರ ಉಪಮುಖ್ಯಮಂತ್ರಿ ಸ್ಥಾನವನ್ನು ಮಾದಿಗ ಸಮುದಾಯಕ್ಕೆ ಕೊಟ್ಟಿದ್ದೇವೆಂದು ಸಮಧಾನಪಡಿಸಿದ್ದು ಬಿಟ್ಟರೆ ಯಾವ ಪ್ರಯೋಜನವು ಆಗಿಲ್ಲ, ಮಾದಿಗ ಸಮುದಾಯಕ್ಕೆ ಸಿಗಬೇಕಾಗಿದ್ದ 2 ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು ಮತ್ತು 06 ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಕೊಡದೇ ವಂಚಿಸಲಾಗಿದೆ ಎಂದು ಖಂಡಿಸಿದರು.

ನ್ಯಾ.ಎ.ಜೆ.ಸದಾಶಿವ ವರದಿಯನ್ನು ಅಂಗೀಕರಿ ಸಬೇಕು. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹಕ್ಕುಗಳನ್ನು ನಿರ್ಲಕ್ಷಿಸಿದರೆ ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಎಸ್ಸಿ, ಎಸ್ಟಿ, ಓಬಿಸಿ, ಮೀಸಲು ವಂಚಿತ ಸಮುದಾಯಗಳು ಸಜ್ಜಾಗಿವೆ ಎಂದು ಹೇಳಿದರು.

ಸಂಸತ್ತಿನಲ್ಲಿ ಸಂವಿಧಾನ ಅನುಚ್ಛೇದ 341(3)ರ ತಿದ್ದುಪಡಿಯಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು, ಕರ್ನಾಟಕದ ಅರಣ್ಯ, ಸರ್ಕಾರಿ, ಆಕ್ರಮ ಗೋಮಾಳ ಜಮೀ ನುಗಳನ್ನು ದಲಿತರಿಗೆ ಹಂಚಿಕೆ ಮಾಡಬೇಕು, ಕರ್ನಾಟಕ ರಾಜ್ಯ ಹೊರಡಿಸಿದ ಭೂ ಸುಧಾರಣ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು, ಕೇಂದ್ರ ಸರ್ಕಾರ ಎಲ್ಲಾ ಸರ್ಕಾರಿ ವಲಯಗಳನ್ನು ಖಾಸ ಗೀಕರಣ ಗೊಳಿಸುವುದನ್ನು ನಿಲ್ಲಿಸಬೇಕು ಎಂದರು.

ದೇವದುರ್ಗ ತಾಲೂಕಿನ ಚಿಕ್ಕಬೂದೂರು ಗ್ರಾಮ ದಲ್ಲಿ 15 ಜನ ಮಾದಿಗ ಸಮುದಾಯದವರ ಮೇಲೆ ದಾಖಲಿಸಿದ ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕು, ಮತ್ತು ಆ ಗ್ರಾಮದಲ್ಲಿ ಮಾದಿಗ ಸಮುದಾಯಕ್ಕೆ ಪೊಲೀಸರು ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹನುಮಂತಪ್ಪ ಮನ್ನಾಪೂರ,ಎಸ್ ಮಾರೆಪ್ಪ, ಜೆಬಿ.ರಾಜು, ಆಂಜಿನಯ್ಯ ಊಟ್ಕೂರು, ಅಬ್ರಾಹಂ, ಉರುಕುಂದಪ್ಪ, ಬೀಮಣ್ಣ, ಶರಣಪ್ಪ, ಪರಶುರಾಮ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here