ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾಗಿ ಸುದ್ದಿಗೋಷ್ಠಿ ಬಿಟ್ಟು ಹೊರನಡೆದ ಬಿಜೆಪಿ ಮುಖಂಡರು!

0
589

ಕಲಬುರಗಿ: ಕೇಂದ್ರ ಸರಕಾರ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂದು ಹಲವು ರೈತ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಿದವು, ಬಂದ್ ಕರೆಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಿಪಿಐಎಂ ಸೇರಿದಂತೆ ದೇಶದ ಬಹುತೇಕ ಸಂಘಟನೆಗಳು ಪ್ರಗತಿ ಪರ ಸಂಘಟನೆಗಳು ಬಂಬಲ ವ್ಯಕ್ತಪಡಿಸಿವೆ.

ಆದರೆ ಬಿಜೆಪಿ ನೂತನ ಕಾಯ್ದೆಗೆ ಪರ ಪ್ರಚಾರ ಮಾಡಲು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದವು, ಅದರಂತೆ ಕಲಬುರಗಿ ಜಿಲ್ಲೆಯಲ್ಲೂ ಜೆಲ್ಲೆಯ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ಕರೆದಿದ್ದರು.

Contact Your\'s Advertisement; 9902492681

ಈ ಕುರಿತಂತೆ ಕೃಷಿ ಕಾನೂನುಗಳ ವಿರುದ್ಧ ಹೊರಾಟ ಮಾಡುತ್ತಿರುವುದನ್ನ ಖಂಡಿಸಿ ಮಾತನಾಡಿದಾಗ ಕೃಷಿ ಕಾಯ್ದೆ ಅನುಕೂಲವಿದೆ ಎಂದಷ್ಟೇ ಹೇಳಿದಾಗ ಅದಕ್ಕೆ ಮರುತ್ತರವಾಗಿ ಕೃಷಿ ಮತ್ತು ಎಪಿಎಂಸಿ ಕಾಯ್ದೆಗಳ ಕುರಿತು ತಿದ್ದುಪಡಿಗಳಾಗಿರುವ ನಿಯಮಗಳ ಕುರಿತು ಮಾತನಾಡಿ ಎಂದು ಹೇಳಿದಾಗ ಅದಕ್ಕೆ ಮರುಉತ್ತರಿಸದೇ ಸುಮ್ಮನಾದರು.

ಅದರ ಬದಲಾಗಿ ನೂತನ ಕಾಯ್ದೆಯಲ್ಲಿ ಸಣ್ಣ ರೈತರಿಗಾಗುವ ಪ್ರಯೋಜನೆಗಳಾದ್ರು ಏನು ಎಂದು ಪತ್ರಕರ್ತರೊಬ್ಬರು ಕೇಳಿದಾಗ ಪ್ರಶ್ನೆ ಉತ್ತರಿಸಕ್ಕಾಗದೆ ಕಕ್ಕಾಬಿಕಿಯಾದ ಘಟನೆ ನಡೆಯಿತು.

ಮುಖಂಡರು ನೂತನ ಮಸೂದೆಗಳ ಸರಿಯಾಗಿ ಅಧ್ಯಯನ ಮಾಡದೆ ಸುದ್ದಿಗೋಷ್ಠಿಗೆ ಆಗಮಿಸಿದರೆಂಬಂತೆ ಗೋಷ್ಠಿಯಲ್ಲಿ ಕಂಡಿತು. ಕಾಯ್ದೆಗಳ ಕುರಿತು ಪ್ರಶ್ನೆಗಳನ್ನು ಕೇಳಿದಾಗ
ಉತ್ತರಿಸಲಿಕ್ಕಾಗದೇ ತಡಬಡಿಸಿ ಸುದ್ದಿಗೋಷ್ಠಿಯಿಂದ ಹೊರಹೋದ ಘಟನೆ ನಡೆಯಿತು.

ಗೋಷ್ಠಿಯಲ್ಲಿ ಜಿಲ್ಲೆಯ ಅಧ್ಯಕ್ಷರು ಮತ್ತು ಪಕ್ಷದ ರೈತ ಮೋರ್ಚಾದ ಮುಖಂಡರಿದ್ದರೂ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲವೆಂದು ಬೇಸತ್ತು ಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಎದ್ದು ಹೋದರು.

ಕೃಷಿ ಮಸೂದೆಗಳ ಪರ ಪ್ರಚಾರ ಮಾಡಲು ಕೆಲವೊಂದು ಬಿಜೆಪಿಯ ಐಟಿ ಸೇಲ್ ಬಳಸುವ ಸುಳ್ಳು ಪ್ರಚಾರಗಳ ವಂದತಿಗಳ ಮಾಹಿತಿ  ಇಟ್ಟುಕೊಂಡು ಕೃಷಿ ಮಸೂದೆ ಪರ ಪ್ರಚಾರಕ್ಕಿಳಿಯುತ್ತಿದೆ ಎಂಬ ಮಾತುಗಳು ಆ ಕ್ಷಣದಲ್ಲಿ ಹರದಾಡಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here