ಹುಟ್ಟುಹಬ್ಬ ಕೈಬಿಟ್ಟು ಗ್ರಾಮ ವಾಸ್ತವ್ಯಕ್ಕೆ ಮುಂದಾದ ಶಾಸಕ ಡಾ. ಅಜಯ್ ಸಿಂಗ್

0
364

ಕಲಬುರಗಿ: ಅತಿವೃಷ್ಟಿ, ನೆರೆ, ಕೊರೋನಾ, ಲಾಕ್ಡೌನ್… ಎಂದು ಈ ನಾಡಿನ, ಕಲಬುರಗಿ ಜಿಲ್ಲೆಯ, ಅದರಲ್ಲೂ ಜೇವರ್ಗಿ ಮತಕ್ಷೇತ್ರದ ಸಾಮಾನ್ಯ ಜನರೆಲ್ಲರಿಗೂ ವರ್ಷ ಪೂರ್ತಿ ಒಂದಿಲ್ಲೊಂದು ರೀತಿಯಲ್ಲಿನ ಸಂಕಟಗಳು ಕಾಡಿ ತೀವ್ರ ತೊಂದರೆಯಲ್ಲಿಕುವಾಗ ಇದೇ ಜ. 29 ರಂದು ಇರುವ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿರುವ ಜೇವರ್ಗಿ ಶಾಸಕಡಾ. ಅಜಯ್ ಸಿಂಗ್ ಇದಕ್ಕೆ ಬದಲಾಗಿ ತಮ್ಮ ಹುಟ್ಟು ಹಬ್ಬದ ಮುನ್ನಾದಿನ ಜ. 28 ರ ಗುರುವಾರ ಜೇವರ್ಗಿ ತಾಲೂಕಿನ ಜೇರಟಗಿಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ.

ಹಳ್ಳಿ ಊರಲ್ಲಿ ಒಂದು ರಾತ್ರಿ ಮೊಕ್ಕಾಂ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿನ ಜನ ಸಾಮಾನ್ಯರ ಕುಂದು ಕೊರತೆಗಳನ್ನು ಆಲಿಸಲು ತವಕ ತಮ್ಮದೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

Contact Your\'s Advertisement; 9902492681

ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಅವರು ತಮ್ಮ ಈ ಜನಪರ ನಿರ್ಧಾರದ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ಜೇವರ್ಗಿ ತಾಲೂಕು ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಜೇರಟಗಿಗೆ ಆಹ್ವಾನಿಸಿ ಅಲ್ಲೇ ಸಭೆ ನಡೆಸುವ ಮೂಲಕ ಸದರಿ ಗ್ರಾಮದಲ್ಲಿನ ಜನರ ಬೇಕು- ಬೇಡಗಳು, ಅಲ್ಲಿನ ನೆನೆಗುದಿಗೆ ಬಿದ್ದಿರುವ ಜನರ ಕೆಲಸಕಾರ್ಯಗಳೆಲ್ಲವೂ ಬೇಗ ಇತ್ಯರ್ಥವಾಗುವಂತಹ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇಂತಹ ಗ್ರಾಮ ವಾಸ್ತವ್ಯ ಸರಣಿಯನ್ನೇ ತಾಲೂಕಿನಲ್ಲಿ ಆರಂಭಿಸುವ ಚಿಂತನೆ ತಮ್ಮದಂದು, ಜನರೊಂದಿಗೆ ಇಡೀ ದಿನ ಕಳೆಯುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನ ತಮ್ಮದಾಗಿದೆ ಎಂದು ಡಾ. ಸಿಂಗ್ ಹೇಳಿದ್ದಾರೆ.
ಹುಟ್ಟುಹಬ್ಬದ ಕೊಡುಗೆ ರೂಪದಲ್ಲಿ ಆರಂಭವಾಗಲಿರುವ ಜನರ ಕುಂದು ಕೊರತೆಗೆ ಕಿವಿಯಾಗುವ ಗ್ರಾಮ ವಾಸ್ತವ್ಯ ಪ್ರತಿ ತಿಂಗಳು ನಡೆಯಲಿದೆ. ಗ್ರಾಪಂ ಮುಖ್ಯ ಕೇಂದ್ರ ಅಥವಾ ಹೋಬಳಿ ಮಟ್ಟದ ದೊಡ್ಡ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ತಿಂಗಳಿಗೆ ಒಂದು ದಿನ ಮೊಕ್ಕಾಂ ಹೂಡುವ ಮೂಲಕ ಜನರೊಟ್ಟಿಗೆ ಕಾಲ ಕಳೆಯುವ, ಅವರ ಸುಖ- ದುಃಖ ಆಲಿಸಿ ಪರಿಹಾರಕ್ಕೆ ಯತ್ನಿಸುವೆ. ಜನತಾ ಜನಾರ್ಧರ ಸಹಕಾರ ನನ್ನ ಈ ಹೊಸ ಯೋಜನೆಗೆ ಬೇಕು, ಅದಕ್ಕಾಗಿ ಜೇವರ್ಗಿಯ ವಿದಾನಸಭೆ ಕ್ಷೇತ್ರದ ಎಲ್ಲಾ ಜನತೆಗೂ ತಮ್ಮ ಈ ಗ್ರಾಮ ವಾಸ್ತವ್ಯದ ಹೊಸ ಕ್ರಮಕ್ಕೆ ಬಲ- ಬೆಂಬಲ ನೀಡಬೇಕು ಎಂದು ಡಾ. ಅಜಯ್ ಸಿಂಗ್ ಮನವಿ ಮಾಡಿದ್ದಾರೆ.

ಜ. 29 ರ ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನನ್ನ ಮತಕ್ಷೇತ್ರದ ಜನತೆ, ಅಭಿಮಾನಿಗಳು, ಹಿತೈಷಿಗಳಾಗಲಿ, ಕಲಬುರಗಿ ಜಿಲ್ಲೆಯಾದ್ಯಂತ ಇರುವ ನನ್ನ ಹಿತೈಷಿಗಳು, ಅಭಿಮಾನಿಗಳು ಯಾರೂ ಬ್ಯಾನರ್ ಕಟ್ಟುವ, ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸುವುದು ಬೇಡ ಎಂದೂ ಡಾ. ಅಜಯ್ ಸಿಂಗ್ ಮನವಿ ಮಾಡಿದ್ದಾರೆ.

ಅಭಿಮಾನಿ ದೇವರುಗಳು ತಮ್ಮ ಗ್ರಾಮ ವಾಸ್ತವ್ಯ ಪರಿಕಲ್ಪನೆಗೆ ಬೆಂಬಲಿಸಲಿ, ಸಮಾಜದಲ್ಲಿ ಯಾರು ತೊಂದರೆಯಲ್ಲಿರುವರೋ ಅಂತಹವರಿಗೆ ನೆರವಿನ ಹಸ್ತ ಚಾಚುವ ಮೂಲಕ ಜನತಾ ಜನಾರ್ಧನರ ಸೇವೆಗೆ ಎಲ್ಲರೂ ಮುಂದಾಗೋಣ ಎಂದಿರುವ ಡಾ. ಅಜಯ್ ಸಿಂಗ್ ಗ್ರಾಮೀಣ ಭಾಗದ ಸರ್ವತೋಮುಖ ಏಳಿಗೆಯ ಪರ ಇರುವಂತಹ ಸರ್ವೇ ಜನಃ ಸುಖಿನೋ ಭವಂತು… ಎಂಬ ಉಕ್ತಿಯನ್ನು ಹೋಲುವ ಸತ್ಸಂಕಲ್ಪಕ್ಕೆ ನನ್ನ ಹಿತ ಬಯಸುವ ಸಮಾಜದ ಎಲ್ಲಾ ಸ್ತರದ ಜನತೆ ಸಹಕರಿಸಬೇಕು ಎಂದು ಕೋರಿದ್ದಾರೆ.

ಜೇವರ್ಗಿ ಜನರ ದೂರು- ದುಮ್ಮಾನ ಆಲಿಸುವುದರ ಜೊತೆಗೇ ತಾಲೂಕಿನಲ್ಲಿನ ಆಡಳಿತಕ್ಕೆ ಚುರುಕು ಮುಟ್ಟಿಸುವ ಉz್ದÉೀಶವೂ ನನ್ನ ಈ ಗ್ರಾಮ ವಾಸ್ತವ್ಯದ ಹಿಂದಿನ ಉz್ದÉೀಶಗಳಲ್ಲಿ ಒಂದಾಗಿದೆ. ತಾಲೂಕು ಹಂತದ ಅಧಿಕಾರಿಗಳೇ ಹಳ್ಳಿಗೆ ಬಂದಾಗ ಸಮಸ್ಯೆಗಳು ಅವರಿಗೂ ಕಾಣುತ್ತವೆ. ಅಲ್ಲಿ ಜನನಾಯಕರಿದ್ದಲ್ಲಿ ಜನರ ಎಂತಹz್ದÉೀ ಸಮಸ್ಯೆಗೂ ಸ್ಥಳದಲ್ಲೇ ಪರಿಹಾರ ಸಿಗುವ ನಂಬಿಕೆ ನನ್ನದು. ಈ ವಿಚಾರದಲ್ಲಿ ಜೇವರ್ಗಿ ಜನತೆಯ, ಅಧಿಕಾರಿಗಳ ಸಹಕಾರ ಸಹ ನಾನು ನಿರೀಕ್ಷಿಸುತ್ತಿರುವೆ. –ಡಾ. ಅಜಯ್ ಸಿಂಗ್, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ  ಜೇವರ್ಗಿ ಮತಕ್ಷೇತ್ರದ ಶಾಸಕರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here