ಮನೆಯ ಕಸಕ್ಕೂ ಮೌಲ್ಯವಿದೆ: ಪಿಡಿಒ ಕಾವೇರಿ

0
30

ವಾಡಿ: ಪ್ರತಿನಿತ್ಯ ಮನೆಯಲ್ಲಿ ಸಂಗ್ರಹವಾಗುವ ಕಸಕ್ಕೂ ಮೌಲ್ಯವಿದೆ. ಅದನ್ನು ಬೇಕಾಬಿಟ್ಟಿ ರಸ್ತೆಗೆ ಎಸೆದು ಪರಿಸರ ಹಾಳು ಮಾಡುವ ಬದಲು ಗ್ರಾಪಂಗೆ ಕೊಟ್ಟರೆ ಸಕ್ಕರೆ ಮತ್ತು ಬೆಲ್ಲ ಪಡೆಯಬಹುದು ಎಂದು ರಾವೂರ ಗ್ರಾಪಂ ಪಿಡಿಒ ಕಾವೇರಿ ರಾಠೋಡ ಹೇಳಿದರು.

ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಲಾಲ ಬಹಾದ್ದೂರ ಶಿಕ್ಷಣ ಸಂಸ್ಥೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ರಾವೂರ ಗ್ರಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನವೀಕರಿಸಬಹುದಾದ ಇಂಧನ, ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆನೀರು ಕೊಯ್ಲು ವಿಷಯ ಕುರಿತ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಪ್ರತಿಯೊಂದು ಗ್ರಾಮದಲ್ಲೀಗ ಮಹಿಳಾ ಸಂಘಗಳು ಹುಟ್ಟಿಕೊಂಡಿದ್ದು ಸ್ವಾಗತಾರ್ಹ. ಸಂಘದಲ್ಲಿ ಹಣ ಹೊಂದಿಸುವ ಕುರಿತು ನಡೆಯುವ ಚರ್ಚೆಯ ಜತೆಗೆ ನೀರಿನ ಸದ್ಬಳಕೆ, ಶುಚಿತ್ವ, ಮನೆಯ ಕಸ ವಿಲೇವಾರಿ, ಶೌಚಾಲಯ ಹೀಗೆ ಮೂಲಭೂತ ಸೌಕರ್ಯಗಳ ಕುರಿತೂ ಚರ್ಚೆ ನಡೆಯಬೇಕು. ಅಂದಾಗ ಮಾತ್ರ ಗ್ರಾಮದ ಅಭಿವೃದ್ಧಿಯಾಗಲು ಸಾಧ್ಯ ಎಂದರು.

Contact Your\'s Advertisement; 9902492681

15 ದಿನದಲ್ಲಿ ನೆರೆಯ ರಾಜ್ಯಗಳಿಂದ ಮರಳಿದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ

ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ದೊಡ್ಡೆ ಮಾತನಾಡಿ, ಮಾನವನ ದುರಾಸೆಗೆ ಅರಣ್ಯ ನಾಶವಾಗುತ್ತಿದೆ. ಗಿಡ ಮರಗಳ ಕೊರತೆಯಿಂದ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಭೂಮಿಯ ತಾಪಮಾನ ಹೆಚ್ಚಾಗುವ ಮೂಲಕ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕರೆಗಳನ್ನು ಉಳಿಸುವ ಮತ್ತು ಮಳೆ ನೀರು ಸಂಗ್ರಹಕ್ಕೂ ಜನತೆ ಮುಂದಾಗಬೇಕು. ಜಲ ಮೂಲಗಳ ರಕ್ಷಣೆಗೆ ಹೆಚ್ಚಿನ ಅಧ್ಯತೆ ನೀಡಬೇಕು. ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ವಿವರಿಸಿದರು.

ಗ್ರಾಪಂ ಅಧ್ಯಕ್ಷೆ ದೇವಕಿ ಮಿನಿಗಿಲೇರ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಹಣಮಂತ ಜಾಧವ, ವೈಷ್ಣವಿ ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಪಾರ್ವತಿ ಕಾರಬಾರಿ ಸೇರಿದಂತೆ ರಾವೂರ ಹಾಗೂ ಲಕ್ಷ್ಮೀಪುರವಾಡಿ ಗ್ರಾಮದ ವಿವಿಧ ಮಹಿಳಾ ಸಂಘಗಳ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಿಯಾಂಕ್ ಖರ್ಗೆಗೆ ಬೈಕ್ ರ್ಯಾಲಿ ಮೂಲಕ ಸನ್ಮಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here