ಅಗಲಿದ ಕವಿ ಡಾ: ಸಿದ್ದಲಿಂಗಯ್ಯಗೆ ದಲಿತ ಸಂಘರ್ಷ ಸಮಿತಿ ಶ್ರದ್ಧಾಂಜಲಿ

0
24

ಸುರಪುರ: ಶುಕ್ರವಾರ ನಿಧನರಾದ ದಲಿತ ಕವಿ ಡಾ: ಸಿದ್ದಲಿಂಗಯ್ಯನವರಿಗೆ ನಗರದ ಗೌತಮ ಬುದ್ಧ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ರಾಜ್ಯದಲ್ಲಿಯ ದಲಿತ ಸಂಘರ್ಷ ಸಮಿತಿಗಳ ಹೋರಾಟಕ್ಕೆ ಶಕ್ತಿ ತುಂಬಿದವರು ಎಂದರೆ ಡಾ: ಸಿದ್ದಲಿಂಗಯ್ಯನವರು.ಮಾವಳ್ಳಿ ಶಂಕರ ಡಿ.ಜಿ.ಸಾಗರ ಅರ್ಜುನ ಭದ್ರೆ ಜಯಣ್ಣ ಎಲ್ಲರ ಜೊತೆಗೂಡಿ ದಲಿತ ಹೋರಾಟದ ಮುಂಚುಣಿಯಲ್ಲಿ ನಿಂತವರು ಕವಿ ಡಾ: ಸಿದ್ದಲಿಂಗಯ್ಯನವರು.ಮಹಿಳೆಯರ ಶೋಷಣೆ ವಿರುದ್ಧ ಹೋರಾಟವನ್ನು ನಡೆಸಿದವರು ಅಲ್ಲದೆ ಇಂದು ಮಹಿಳೆಯರು ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸುವಂತಹ ಶಕ್ತಿಯನ್ನು ತುಂಬಿದವರು ಸಿದ್ದಲಿಂಗಯ್ಯನವರು.ಅಂತಹ ಮಹಾನ್ ಹೋರಾಟಗಾರನ ನಿಧನ ನಾಡಿಗೆ ಬಹುದೊಡ್ಡ ನಷ್ಟವುಂಟಾಗಿದೆ ಎಂದರು.

Contact Your\'s Advertisement; 9902492681

ತೈಲ ಬೆಲೆ ಏರಿಕೆಯಿಂದ ದೇಶದ ಜನರು ತತ್ತರಿಸಿದ್ದಾರೆ: ಆರ್.ವಿ.ನಾಯಕ

ಇದೇ ಸಂದರ್ಭದಲ್ಲಿ ಮತ್ತೋರ್ವ ಮುಖಂಡ ಮಾಜಿ ನಗರಸಭೆ ಅಧ್ಯಕ್ಷ ಚಂದ್ರಶೇಖರ ಹಸನಾಪುರ ಮಾತನಾಡಿ, ಕವಿ ಡಾ: ಸಿದ್ದಲಿಂಗಯ್ಯನವರು ಕೆಳ ವರ್ಗದ ಜನರ ಏಳಿಗೆಗೆ ಶ್ರಮಿಸಿದ ಮಹಾನ್ ಚೇತನರು.ಅವರು ಬಿಜೆಪಿ ಪಕ್ಷದಲ್ಲಿದ್ದು ವಿಧಾನಪರಿಷತ್ ಸದಸ್ಯರಾಗಿದ್ದಾಗ ದಲಿತ ಸಮುದಾಯಕ್ಕೆ ಸಂಬಂಧಿಸಿದ ಹೋರಾಟಕ್ಕೆ ಬೆಂಬಲಿಸಿ ಹೊರಗೆ ಬಂದಂತಹ ವ್ಯಕ್ತಿ.ಅಂತಹ ಒಬ್ಬ ಮಹಾನ್ ಹೋರಾಟಗಾರನನ್ನು ಕಳೆದುಕೊಂಡು ರಾಜ್ಯದಲ್ಲಿನ ದಲಿತರ ಶಕ್ತಿ ಕಡಿಮೆಯಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

ಸಭೆಯ ಆರಂಭದಲ್ಲಿ ಕವಿ ಡಾ:ಸಿದ್ದಲಿಂಗಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಆತ್ಮಕ್ಕೆ ಶಾಂತಿ ಕೋರಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕುರಕುಂದಿ ಮಾನಯ್ಯ ಬಿಜಾಸಪುರ ರಾಮಣ್ಣ ಶೆಳ್ಳಗಿ ಮಾಳಪ್ಪ ಕಿರದಹಳ್ಳಿ ಹಣಮಂತ ಕುಂಬಾರಪೇಟೆ ಬುದ್ಧಿವಂತ ನಾಗರಾಳ ಜೆಟ್ಟೆಪ್ಪ ನಾಗರಾಳ ಧರ್ಮರಾಜ ಬಡಿಗೇರ ಯಂಕಪ್ಪ ದೇವಿಕೇರಿ ಮರಿಲಿಂಗ ದೇವಿಕೇರಿ ಮಲ್ಲೇಶ ಶೆಳ್ಳಗಿ ಮಹೇಶ ಯಾದಗಿರಿ ಬಾಗಪ್ಪ ದೇವಿಕೇರ ಮಲ್ಲಪ್ಪ ಬಡಿಗೇರ ಬಸಪ್ಪ ಅಗಸ್ತಾಳ ಅಪ್ಪಣ್ಣ ಗಾಯಕವಾಡ ನ್ಯಾಯವಾದಿ ರವಿ ನಾಯಕ ಗ್ರಾ.ಪಂ ಸದಸ್ಯ ರೇವಣಸಿದ್ದ ಮಾಲಗತ್ತಿ ಧರ್ಮಣ್ಣ ಹೊಸ್ಮನಿ ಖಾಜಾ ಹುಸೇನ ಗುಡಗುಂಟಿ ಹಣಮಂತ ತೆಕರಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here