ಭಾಲ್ಕಿ: ಒಬ್ಬ ರಾಜನಾಗಿ ಮಹಾಪುರಷರ ಮಾದರಿಯಲ್ಲಿ ಜನಸೇವೆ ಮಾಡಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜ ಅವರಿಗೆ ಸಲ್ಲುತ್ತದೆ. ಹಾಗಾಗಿ ರಾಜಮಹಾರಾಜರ ಸಮೂಹದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ವಿಶೇಷ ಎದ್ದು ಕಾಣುತ್ತಾರೆ. ಅವರ ಜಯಂತಿ ಆಚರಿಸುವುದೆಂದರೆ, ಒಬ್ಬ ಮಹಾಪುರಷರ ಜಯಂತಿ ಆಚರಿಸಿದಂತೆ ಎಂದು ಪೂಜ್ಯ ಗುರುಬಸವ ಪಟ್ಟದ್ದೇವರು ನುಡಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನ ಭಾಲ್ಕಿ ಆಶ್ರಯದಲ್ಲಿ ಶ್ರೀ ಶಿವಕುಮಾರ ಕಲಾಸಂಘ ಸಾಣೇಹಳ್ಳಿ ಶಿವಸಂಚಾರ ಕಲಾವಿದರಿಂದ ಜೀವ ಇದ್ದರೆ ಜೀವನ ನಾಟಕ ಪ್ರದರ್ಶನ ಉದ್ಘಾಟನೆ ಸಮಾರಂಭದ ದಿವ್ಯಸನ್ನಿಧಾನವಹಿಸಿ ಪೂಜ್ಯ ಶ್ರೀಗಳು ಒಂದು ನಾಟಕದ ಪ್ರದರ್ಶನ ಒಂದು ತಿಂಗಳು ಪ್ರವಚನಕ್ಕೆ ಸಮವಾಗಿರುತ್ತದೆ ಮತ್ತು ಅಷ್ಟು ಪ್ರಭಾವಿಯಾಗಿರುತ್ತದೆ ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಮೆಗಾ ಉದ್ಯೋಗ ಮೇಳ: 200 ಉದ್ಯೋಗ ಆಕಾಂಕ್ಷಿಗಳಿಗೆ ಒಲಿದ ಉದ್ಯೋಗಗಳು
ಪೂಜ್ಯ ಮಹಾಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಸ್ಥಳೀಯ ಕಿಸಾನ್ ಶಿಕ್ಷಣ ಪ್ರಸಾರಕ ಮಂಡಳಿ ಅಧ್ಯಕ್ಷ ಅನೀಲ ಸಿಂಧೆ ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿದರು. ಸೋಮನಾಥಪ್ಪ ಅಷ್ಟೂರೆ ಅಧ್ಯಕ್ಷತೆ ವಹಿಸಿದ್ದರು. ರಾಜು ಜುಬರೆ ಶಿವಾಜಿ ಮಹಾರಾಜ ಕುರಿತು ಉಪನ್ಯಾಸ ನೀಡಿದರು. ಜನಾರ್ಧನ ಬಿರಾದಾರ ಮತ್ತು ದಯಾನಂದ ಸೂರ್ಯವಂಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಜಾಗತಿಕ ರಾಯಭಾರಿ ಯುನಿವರ್‌ಸಿಟಿ ಆಫ್ ಮೇರಿಲ್ಯಾಂಡ್ ಬಾಲ್ಡಿಮೋರ ಅಮೇರಿಕಾದ ಕೀರ್ತನಾ ದಾದಾರಾವ ಕೋಳೆಕರ ಅವರಿಗೆ ವಿಶೇಷ ಗೌರವ ಸನ್ಮಾನ ಜರುಗಿತು.
ಕಿವಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ
ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಡಾ.ಯುವರಾಜ ಜಾಧವ, ರಾಜಪ್ಪ ಪಾಟೀಲ, ಸೂರ್ಯಕಾಂತ ಸುಂಟೆ, ಶಿವಕುಮಾರ ಕಲ್ಯಾಣೆ, ಬಸವರಾಜ ಪಾಟೀಲ, ದತ್ತು ಹೊನ್ನಾ, ದಿಲೀಪ ಸುಂಟೆ, ಕಿರಣ ಖಂಡ್ರೆ, ಓಂಪ್ರಕಾಶ ರೊಟ್ಟೆ, ಪ್ರತಾಪ ಪಾಟೀಲ, ಪಂಚಶೀಲ ಪಾಟೀಲ, ಬಾಬುರಾವ ಹುಣಜೆ, ದಿಲೀಪ ಜೋಳದಾಪಕೆ ಇದ್ದರು. ವೀರಣ್ಣ ಕುಂಬಾರ ಸ್ವಾಗತಿಸಿದರು. ದಿಲೀಪ ಥಮಕೆ ನಿರೂಪಿಸಿದರು. ಬಾಬು ಬೆಲ್ದಾಳ ವಂದಿಸಿದರು.