ಸಮಸ್ಯೆಯನ್ನ ಬಿಚ್ಚು ಮನಸ್ಸಿನಿಂದ ಪೋಲೀಸ್‌ರೊಂದಿಗೆ ಹಂಚಿಕೊಳ್ಳಿ: ಯಶೋಧಾ ಕಟ್ಕೆ

0
107

ಕಲಬುರಗಿ: ವಿದ್ಯಾರ್ಥಿಗಳು ಮೊಬೈಲ್, ವಾಟ್ಸಪ್, ಸಾಮಾಜಿಕ ಜಾಲತಾಣಗಳ ಅನಗತ್ಯ ಬಳಕೆ ಕಡಿಮೆಗೊಳಿಸಿ, ಸುಳ್ಳು ಹೇಳಿಕೆಯ ಸುದ್ದಿ ಮತ್ತು ಕರೆಗಳ ಬಗ್ಗೆ ಜಾಗೃತಿ ಇರಲಿ, ಯುವಜನತೆ ಯಾವುದೇ ಸಮಸ್ಯೆಗಳಿಗೆ ಒಳಗಾಗಿದ್ದರೇ, ಬಿಚ್ಚು ಮನಸ್ಸಿನಿಂದ ಪೋಲೀಸ್ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಿ. ಹಗಲು ರಾತ್ರಿಯೆನ್ನದೇ ನಿಮ್ಮ ಸಹಾಯಕ್ಕೆ ನಾವು ಸದಾ ಸಿದ್ಧರಾಗಿರುತ್ತೇವೆ ನಾವು ಎಂದು ಕಲಬುರಗಿಯ ಕ್ರೈಂ ವಿಭಾಗದ ಪೋಲೀಸ್ ಸಬ್ ಇನ್‌ಸ್ಪೆಕ್ಟರ್ ಯಶೋಧಾ ಕಟ್ಕೆ ಅಭಿಪ್ರಾಯಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಆಂತರಿಕ ದೂರು ಸಮತಿಯ ಅಡಿಯಲ್ಲಿ ಆಯೋಜಿಸಿದ್ದ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ವಿದ್ಯೆಗೆ ಜ್ಞಾನಕ್ಕೆ ಬೆಲೆಯಿದೆ. ನಿಮ್ಮ ಅಭ್ಯಾಸದ ಮೂಲಕ ಆ ಜ್ಞಾನವನ್ನು ಸಂಪಾದಿಸಿಕೊಳ್ಳಿ ಆಗ ನಿವೊಬ್ಬ ಸಾಧಕರಾಗಿ ಹೋರಹೊಮ್ಮುತ್ತಿರಿ ಎಂದರು.
ವಿದ್ಯೆಗೆ ಜ್ಞಾನಕ್ಕೆ ಸಾಧನೆಗೆ ಬಡತನವಿಲ್ಲ. ಹೀಗಾಗಿ ಬಡತನ ಎಂಬ ಕುಂಟುನೇಪದಲ್ಲಿ ನಿಮ್ಮ ಅಮೂಲ್ಯ ಭವಿಷ್ಯ ಹಾಳುಮಾಡಿಕೊಳ್ಳಬೇಡಿ. ಕಠಿಣ ಪರಿಶ್ರಮ ಶ್ರಧೆಯಿಂದ ಅಧ್ಯಯನ ಮಾಡಿ ಹೆತ್ತವರ ಹೆಮ್ಮೆಯ ಮಕ್ಕಳಾಗಿ ಮತ್ತು ಸಮಾಜದಲ್ಲಿ ನಡೆಯುವ ಅಪರಾಧಗಳ ಬಗ್ಗೆ ನಿಮ್ಮ ಕುಟುಂಬದವರಿಗೆ ಮಾಹಿತಿ ನೀಡುವ ಮೂಲಕ ನಿಮ್ಮ ನಿಮ್ಮ ಕುಟುಂಬಗಳನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

Contact Your\'s Advertisement; 9902492681

ರಸ್ತೆ ಅಗಲಿಕರಣದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ: ರಾಜಾ ಪಿಡ್ಡನಾಯಕ ಆರೋಪ

ಡಾ. ನಿರ್ಮಲಾ ಕೆಳಮನಿ ಮಾತನಾಡಿ, ನಮ್ಮ ಹಿಂದಿನ ಕಾಲದ ಪೌರಾಣಿಕ ಕಥೆಯಲ್ಲಿ ಶ್ರೀಕೃಷ್ಣ ಬಾಯಿಯಲ್ಲಿ ಇಡೀ ಬ್ರಹ್ಮಾಂಡ ಕಂಡಿರುವ ಉಲ್ಲಖವಿದೆ. ಆದರೆ ಇಂದು ನಾವು ಪ್ರತಿಯೊಬ್ಬರ ಕೈಯಲ್ಲಿರುವ ಮೋಬೈಲ್ ಸಹಾಯದಿಂದ ಇಡೀ ಬ್ರಹ್ಮಾಂಡವನ್ನು ನೋಡುತ್ತಿದ್ದೇವೆ. ಅನಾವಶ್ಯಕ ಫೋಟೊ, ಸೇಲ್ಪಿಗಳಿಗೆ ಮಾರು ಹೋಗುತ್ತಿರುವ ಸಂಖ್ಯೆ ಹೆಚ್ಚಾಗಿರುತ್ತಿರುವ ಕಾರಣ ಅಂತರಜಾಲ ಅಪರಾಧಗಳು ಹೆಚ್ಚಾಗುತ್ತಿವೆ ಎಂದರು.

ದೃಷ್ಠಿ ಬದಲಾದರೆ ಸೃಷ್ಠಿ ಬದಕಲಾದಿತ್ತು ಎನ್ನುವ ಮಾತಿನಂತೆ ನಮ್ಮ ಯುವಜನತೆಯ ದೃಷ್ಟಿ ಬದಲಾಗಬೇಕು. ಕೇವಲ ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಅನಾವಶ್ಯಕ ಮೊಬೈಲ್ ಬಳಕೆಯತ್ತ ಮನಸ್ಸನ್ನು ಹರಿಬಿಡದೇ, ಅವರ ದೃಷ್ಠಿ ಜಾಗೃತಿಗೊಳ್ಳುವ ಸಾಗಬೇಕಾಗಿರುವದು ಅವಶ್ಯವಾಗಿದೆ ಎಂದರು.

ಭಾರತ್ ಫೈನಾನ್ಸಿಯಲ್ ಇನ್ಕ್ಲೂಷನ್ ಲಿಮಿಟೆಡ್ ಮುಖಾಂತರ ಶುದ್ಧ ಕುಡಿಯುವ ನೀರು

ವಿವಿ ಡೀನ್ ಡಾ. ಲಕ್ಮಿ ಪಾಟೀಲ ಮಾಕಾ ಮಾತನಾಡಿ ಆಂತರಿಕ ದೂರು ಕಮಿಟಿಯ ಸದಸ್ಯರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಕಾರ್ಯಕ್ರಮದ ಮಹತ್ವ ತಿಳಿಸಿದರು. ವಿದ್ಯಾರ್ಥಿನಿ ಐಶ್ವರ್ಯ ಮತ್ತು ಶ್ವೇತಾ ಪ್ರಾರ್ಥನೆ ಗೀತೆ ಹಾಡಿದರು. ಡಾ. ಸ್ವಾತಿ ಕಲಶೆಟ್ಟಿ, ಡಾ. ಸುಜಾತಾ ಮಲ್ಲಾಪೂರೆ, ಪ್ರೊ. ಅಮೃತಾ ಪ್ರೊ. ಜಗದೇವ ಪಾಟೀಲ, ಡಾ. ಸುಮಂಗಲಾ ರೆಡ್ಡಿ, ಡಾ. ಸುನೀತಾ ಬಿ. ಪಾಟೀಲ, ಅನ್ನಪೂರ್ಣಾ ಸಂಗೋಳಗಿ ಹಾಗೂ ಮಹೀಮಾ ವಿದ್ಯಾರ್ಥಿನಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here