ಗ್ರಾ.ಪಂ ಸಿಬ್ಬಂದಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟಿಸಿ ಮನವಿ

0
44

ಕಲಬುರಗಿ: ಜಿಲ್ಲೆಯ ಹಲವಾರು ಗ್ರಾಮ ಪಂಚಾಯತಿಗಳ ಮುಂದೆ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿರುವ ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಪಂಪ ಆಪರೇಟರ್, ಸಿಪಾಯಿ ಮತ್ತು ಸ್ವಚ್ಚತಾ ಸಿಬ್ಬಂದಿಗಳು ಸೇರಿ ತಮ್ಮ ತಮ್ಮ ಪಂಚಾಯತ ಗಳ ಮುಂದೆ ಹೋರಾಟ ನಡೆಸಲಾಯಿತು.

ಅದರಂತೆ ಕಲಬುರಗಿ ತಾಲ್ಲೂಕಿನ ಕವಲಗಾ ಬಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಾಂತಾಬಾಯಿ ಬಡಗೇರ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಶಿವಾನಂದ ಕೌಲಗಾ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ದೇಶದ ೭೦% ಭಾಗವಾದ ಹಳ್ಳಿಗಳಲ್ಲಿ ಗ್ರಾಮ ಪಂಚಾಯತಿ ಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳನ್ನು ಕರೋನ ವಾರಿಯರ್ಸ ಎಂದು ಪರಿಗಣಿಸಿ ಆಸ್ಪತ್ರೆ ಖರ್ಚು ಮತ್ತು ಮರಣ ಹೊಂದಿದ ಸಿಬ್ಬಂದಿಗಳಿಗೆ ೩೦ ಲಕ್ಷ ಪರಿಹಾರ ಹಣವನ್ನು ಜಿಲ್ಲಾ ಪಂಚಾಯತ/ತಾಲ್ಲೂಕು ಪಂಚಾಯತ ಲಭ್ಯ ಇರುವ ಅನುದಾನ ತೆಗೆದು ಹಾಕಿ ನೇರವಾಗಿ ಸರಕಾರದಿಂದಲೇ ಪರಿಹಾರ ಮೊತ್ತ ಪಾವತಿಸಬೇಕು. ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ೬ ಜನ ಗ್ರಾಮ ಪಂಚಾಯತಿ ನೌಕರರು ಕರೋನ ದಿಂದ ಮರಣ ಹೊಂದಿದ್ದು ಅವರಿಗೆ ಶೀಘ್ರದಲ್ಲಿ ೩೦ಲಕ್ಷ ಪರಿಹಾರ ಒದಗಿಸಬೇಕು,ಬಾಕಿ ವೇತನ ಕೊಡಬೇಕು ಮತ್ತು ಅವರ ಕುಟುಂಬದಲ್ಲಿ ಅನುಕಂಪ ನೇಮಕಾತಿ ಮಾಡಬೇಕು ಎಂದರು.

೧೫ನೇ ಹಣಕಾಸು ಯೋಜನೆಯ ಅನುದಾನ ಈಗಾಗಲೇ ಬಿಡುಗಡೆಯಾದ ಅನುದಾನದಲ್ಲಿ ಸರಕಾರದ ಆದೇಶ ರಂತೆ ವೇತನ ಪಾವತಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ವೇತನ ಪಾವತಿಸಬೇಕು, ಕರವಸೂಲಿಯಲ್ಲಿ ಬಿಲ್ ಕಲೆಕ್ಟರ್ ಮತ್ತು ಸಿಪಾಯಿ ವೇತನ ಪಾವತಿಸಬೇಕು. ಬಿಲ್ ಕಲೆಕ್ಟರ್ / ಗುಮಾಸ್ತ ರಿಂದ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ಗೆ ಈಗಾಗಲೇ ಸರಕಾರದ ನಿರ್ಧಶನದಂತೆ ಬಡ್ತಿ ಕೊಡಬೇಕು. ನಿವೃತ್ತಿ ವೇತನ ಮತ್ತು ಬಾಕಿ ನಿಂತ ವೇತನ ಪಾವತಿಸಬೇಕು ಎಂಬ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾತಾಬಾಯಿ ಬಡಗೇರ ಅವರಿಗೆ ಮನವಿ ಸಲ್ಲಿಸಿಯನ್ನು ಸಲ್ಲಿಸಿಸಿ ಪಿಡಿಓಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಕಳುಹಿಸಲು ಮನವಿ ಮಾಡಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದೇವಿಂದ್ರ ಮಿಜೇಜಿ, ಶರಣಬಸಪ್ಪ ಸಿಪಾಯಿ, ಗುರುಸಿದ್ದಯ್ಯ, ಶರಣು, ಸ್ವಚ್ಚತಾಗಾರರಾದ ಮಲಕಮ್ಮ,ಗಂಗಮ್ಮ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here