ಸರಕಾರದ ಆದೇಶದಂತೆ ತಕ್ಷಣ ವೇತನ ನೀಡಲು ಸಿಐಟಿಯು ಆಗ್ರಹ

0
71

ಹಟ್ಟಿ; ಕೋರಾನಾ ವಾರಿಯರ್ ಎಂದು ಪರಿಗಣಿಸಿ ಮತ್ತು 15 ನೇ ಹಣಕಾಸು ಯೋಜನೆಯಲ್ಲಿ ವೇತನವನ್ನು ಹಾಕುವಂತೆ ಒತ್ತಾಯಿಸಿ ಗೆಜ್ಜಲಗಟ್ಟಾ ಗ್ರಾಪಂ ಮುಂದೆ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘಟನೆ(ಸಿಐಟಿಯು) ಯಿಂದ ಪ್ರತಿಭಟನೆ ಮಾಡಿದರು.

ಪ್ರತಿಭಟನೆ ನಡೆಸಿ ಪಿಡಿಓ ಅಮರಗುಂಡಮ್ಮ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ನ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಮನವಿ‌ ಪತ್ರದಲ್ಲಿ ಕರ್ನಾಟ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಕೋರೊನಾ ವೈರಸ್ ಹರಡಿರುವದರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮೀಣ ಕಾರ್ಯಪಡೆ ರಚಿಸಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಸ್ವೀಪರ್, ವಾಟರಮನ್, ಕಛೇರಿ ಸಹಾಯಕ, ಬಿಲ್‌ಕಲೆಕ್ಟರ್/ಗುಮಾಸ್ತ, ಕಂಪ್ಯೂಟರ್ ಆಪರೇಟರ್ ಇತ್ಯಾದಿ ಸಿಬ್ಬಂದಿ ಪ್ರತಿದಿನ ರಾಜ್ಯದ ೬೦೨೪ ಗ್ರಾಮ ಪಂಚಾಯತಿಗಳಲ್ಲಿ ಕೋರೋನಾ ವಾರಿಯರ್ ಆಗಿ ಕೆಲಸ ಮಾಡುತ್ತಾ ಕೋರೋನಾಕ್ಕೆ ತುತ್ತಾಗಿ ಹಲವರು ಮರಣ ಹೊಂದಿದ್ದಾರೆ. ಆದ್ದರಿಂದ ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ಕೋರೋನಾ ವಾರಿಯರ್ ಎಂದು ಪರಿಗಣಿಸಿ ಮತ್ತು ವಿಮೆಗೆ ಒಳಪಡಿಸಬೇಕು. 15 ನೇ ಹಣಕಾಸು,ಉದ್ಯೋಗ ಖಾತ್ರಿ ಯೋಜನೆ, ಗ್ರಾಮ ಪಂಚಾಯತ ಸ್ವಂತ ಸಂಪನ್ಮೂಲದಿಂದ ಸಿಬ್ಬಂದಿಗಳಿಗೆ ವೇತನ ನೀಡಬೇಕು ಎಂದು ಆಗ್ರಹಿಸಲಾಯಿತು.

Contact Your\'s Advertisement; 9902492681

ಈ ಬಗ್ಗೆ 25-11-2020 ಹಾಗೂ 03-03/2021 ರಂದು ಸರಕಾರ ಆದೇಶ ಮಾಡಿದ್ದರೂ ಈ ಅನುದಾನಗಳಿಂದ ಸಾಕಷ್ಟು ಗ್ರಾಮ ಪಂಚಾಯತಿಗಳಲ್ಲಿ ವೇತನ ಪಾವತಿ ಮಾಡದಿರುವ ಕಾರಣ ಸಿಬ್ಬಂದಿಗಳಿಗೆ 5 ರಿಂದ 8 ತಿಂಗಳು ವೇತನ ಸಿಗದೇ ಜೀವನಕ್ಕೆ ಬಹಳ ತೊಂದರೆಯಾಗಿದೆ. ತಕ್ಷಣ ವೇತನ ನೀಡಬೇಕು ಬಿಲ್‌ಕಲೆಕ್ಟರ್/ಗುಮಾಸ್ತ ಹುದ್ದೆಯಿಂದ ಕಾರ್ಯದರ್ಶಿ ಗ್ರೇಡ್-೨ ಹುದ್ದೆಗೆ ತಡೆಯಿಡಿದಿರುವ ಆದೇಶ ವಾಪಸ್ಸ ಪಡೆದು ಬಡ್ತಿ ನೀಡಬೇಕು ಎಂದು ಆಗ್ರಹಿಸಲಾಯಿತು.

ಕೋರೋನಾಕ್ಕೆ ಒಳಗಾದ ಸಿಬ್ಬಂದಿಗಳಿಗೆ ಔಷಧಿ ವೆಚ್ಚ ಭರಿಸಬೇಕು, ಸುರಕ್ಷಿತ ಕಿಟ್ ನೀಡಬೇಕು. ಕೋರೋನಾ ವಾರಿಯರ್ ಎಂದು ಘೋಷಿಸಿ ವಿಮೆಗೆ ಒಳಪಡಿಸಬೇಕು
15 ನೇ ಹಣಕಾಸು,ಉದ್ಯೋಗ ಖಾತ್ರಿ, ಗ್ರಾಮ ಪಂಚಾಯತಿ ಸ್ವಂತ ಸಂಪನ್ಮೂಲದಿಂದ ಸರಕಾರದ ಆದೇಶದಂತೆ ತಕ್ಷಣ ವೇತನ ಪಾವತಿಸಬೇಕು. ಬಿಲ್ ಕಲೆಕ್ಟರ್/ಗುಮಾಸ್ತ ಸಿಬ್ಬಂದಿಗಳಿಗೆ ಮುಂಬಡ್ತಿ ನೇಮಕಾತಿ ತಡೆಯನ್ನು ವಾಪಸ್ಸ್ ಪಡೆದು ಬಡ್ತಿ ನೀಡಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಪಂಚಾಯತಿ ನೌಕರರ ಸಂಘಟನೆ ಜಿಲ್ಲಾ ಉಪಾಧ್ಯಕ್ಷೆ ಶಂಕ್ರಮ್ಮ, ನೌಕರ ಸಂಘಟನೆಯ ಮುಖಂಡರಾದ ವೆಂಕಟೇಶ ಗೆಜ್ಜಲಗಟ್ಟಾ, ಯಂಕಪ್ಪ ಚಿಕ್ಕನಗನೂರು, ಮಂಜುನಾಥ, ರಮೇಶ ಪೂಜಾರಿ, ಯಮನೂರು, ಹನುಮಂತ, ಶಿವಪ್ಪ, ಗ್ರಾಪಂ ಅಧ್ಯಕ್ಷ ನಾಗಭೂಷಣ, ಸದಸ್ಯ, ಸಂಜೀವಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here