ತೈಲ ಬೆಲೆ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ

0
35

ಸುರಪುರ: ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಜನವಿರೋಧಿ ಸರಕಾರವಾಗಿದೆ.ದೇಶದಲ್ಲಿ ಜನರು ಕೋವಿಡ್‌ನಿಂದ ಸಾಯುತ್ತಿರುವಂತ ಸಂದರ್ಭದಲ್ಲಿ ತೈಲ ಬೆಲೆಯನ್ನು ಹೆಚ್ಚಿಸುವ ಮೂಲಕ ಜನವಿರೋಧಿ ಸರಕಾರವಾಗಿ ಮಾರ್ಪಟ್ಟಿದೆ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಾಜಾ ಸಂತೋಷಕುಮಾರ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ಯೂತ್ ಕಾಂಗ್ರೆಸ್ ವತಿಯಿಂದ ನಗರದ ಉಸ್ತಾದ ಪೆಟ್ರೋಲ್ ಬಂಕ್ ಬಳಿಯಲ್ಲಿ ಹಮ್ಮಿಕೊಂಡಿದ್ದ ೧೦೦ ನಾಟ್ ಜೌಟ್ ಮೊದಲನೆ ದಿನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿ, ಕೋರೊನಾದ ಮದ್ಯೆಯು ಜನರ ಅಳಲಿನ ನಡುವೆ ಲಾಭಕೋರತನದಲ್ಲಿ ಮಗ್ನವಾಗಿದೆ. ಪೇಟ್ರೊಲ್ ಮತ್ತು ಡಿಸೇಲ್ ಕಳೆದ ೭೪ ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ಏರಿಕೆಯಾಗಿದೆ. ಕಳೆದ ಎಳು ವರ್ಷಗಳಲ್ಲಿ ಮೋದಿ ಸರಕಾರವು ಪೇಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನ ಏರಿಸಿದೆ.

Contact Your\'s Advertisement; 9902492681

ಇದರಿಂದಾಗಿ ರೈತರ ಮತ್ತು ಜನಸಾಮಾನ್ಯರ ಮೇಲೆ ತೀವ್ರವಾದ ಪರಿಣಾಮಗಳಾಗಿವೆ. ಪೇಟ್ರೋಲ್ ಮತ್ತು ಡೀಸೆಲ್ ಏರಿಕೆಯಿಂದಾಗಿ ಅಗತ್ಯ ಸರಕು ಸಾಗಾಣಿಕೆ ವೆಚ್ಚ ಬೆಲೆ ಏರಿಕೆಯ ರೈತರೂ ಜನಸಾಮಾನ್ಯರೂ ತತ್ತರಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಲಾಕ್ ಡೌನ್‌ನಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ಜನರ ಜೇಬಿಗೆ ಕತ್ತರಿ ಹಾಕಿ ಜನರಿಂದಲೇ ಹಣ ವಸೂಲಿಗೆ ನಿಂತಿರೂವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿಗಳ ನೀತಿಯನ್ನು ಖಂಡಿಸಿ ಸರಕಾರಗಳ ವಿರುದ್ದು ಹರಿಹಾಯ್ದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಜಾ ವಿಜಯಕುಮಾರ ನಾಯಕ, ರಾಜಾ ಶುಶಾಂತ ನಾಯಕ , ಪ್ರವೀಣಕುಮಾರ ಡೊಣ್ಣಿಗೇರಾ, ಪ್ರಶಾಂತ, ನಿಂಗು ಐಕೂರ, ಹಣಮಂತ ಬಿಲ್ಲವ್, ಬಾಷಾ ಮುಲ್ಲಾಮೊಹಲ್ಲ ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here