ಲಸಿಕಾ ಶಿಬಿರ: 200ಕ್ಕೂ ಹೆಚ್ಚು ಕೊವಿಡ ಲಸಿಕೆ ವಿತರಣೆ

0
77

ಕಲಬುರಗಿ: ಕಮಲಾಪುರ ತಾಲೂಕಿನ ಸುಕ್ಷೇತ್ರ ಸೊಂತದ ಶ್ರೀ ಶಂಕರಲಿಂಗ ಮಹಾರಾಜರ ಆಶ್ರಮದಲ್ಲಿ ಕೊವಿಡ್ ಲಸಿಕಾ ಶಿಬಿರವನ್ನು ಮಾಡಲಾಯಿತು. ಪೂಜ್ಯ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಸೂಮಾರು ೨೦೦ಕ್ಕೂ ಹೆಚ್ಚು ಕೊವಿಡ ಲಸಿಕೆಯನ್ನು ನಿಡಲಾಯಿತು.

ಈ ಕೊವಿಡ ಲಸಿಕೆಯಿಂದ ಹಳ್ಳಿಗಳ ಸಾರ್ವಜನಿಕರಲ್ಲಿ ಭಯ ಭಿತಿ ವಾತಾವರಣ ಸೃಷ್ಟಿ ಆಗಿದ ಹಿನ್ನೆಲೆಯಲ್ಲಿ ಸ್ವತಃ ಪೂಜ್ಯ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರು ಲಸಿಕೆಯನ್ನು ಪಡೆದುಕೊಂಡು ನಂತರ ಎಲ್ಲಾ ಭಕ್ತಾಧಿಗಳಿಗೆ ನಿಡಲು ಆಮಂತ್ರಿಸಿದರು, ಲಸಿಕೆ ಪಡೆಯಲು ದೂರದ ಊರುಗಳಿಂದ ಆಗಮಿಸಿದ ಸಾರ್ವಜನಿಕರಿಗೆ ಮಾಸ್ಕ, ಸ್ಯಾನಿಟೈಜರ, ಹಾಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಯಿತು.

Contact Your\'s Advertisement; 9902492681

ಇದೆ ಸಂಧರ್ಭದಲ್ಲಿ ನಿರೂಪಕರಾದ ಎಸ್.ಎಂ.ಭಕ್ತ ಕುಂಬಾರ ರವರು ಕೂಡ ಕೊವಿಡ ಲಸಿಕೆಯನ್ನು ಪಡೆದುಕೊಂಡರು, ಸಂತೋಷಕುಮಾರ ರಾಯಚೂರಕರ, ಸೊಂತ ಗ್ರಾಂ.ಪಂ.ಅಧ್ಯಕ್ಷ ಉದಯಕುಮಾರ ಪಾಟೀಲ, ಮಾಜಿ ಅಧ್ಯಕ್ಷ ನವರಂಗ ಜಾದವ, ಸದಸ್ಯ ಅಮರನಾಥ ಕೋಟಿ, ಉಮೇಶ ವಕಿಲರು ಇದ್ದರು.

ನಾವು ದಿನ ನಿತ್ಯವು ಹಳ್ಳಿ ಹಳ್ಳಿಗಳಿಗೆ ಹಾಗೂ ಥಾಂಡಗಳಿಗೆ ಹೊಗಿ ಜಗ್ರತಿ ಮಾಡಿದರು ಕೂಡ ಯಾರು ಕೂಡ ಲಸಿಕೆಯನ್ನು ಪಡೆಯಲಿಲ್ಲ ಆದರೆ ಇಂದು ಕೇವಲ ಮೂರು ತಾಸಿನಲ್ಲಿ ಎರಡು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಲಸಿಕೆಯನ್ನು ಪಡೆದದ್ದು ತುಂಬಾ ಸಂತಸ ತಂದಿದೆ ಎಂದು ಡಾ.ಕಿಶ್ವರಜಹಾಂ ಆಡಳಿತ ವೈದ್ಯಾಧಿಕಾರಿ ಸೊಂತ ಪ್ರಾಥಮಿಕ ಆರೋಗ್ಯ ಕೇಂದ್ರ ಸೊಂತ ಇದೆ ವೇಳೆ ಡಾ.ಪ್ರಮೊದ-ಜಿ, ಮನೋಹರ ಕುಂಬಾರ, ಆರೋಗ್ಯ ಸಹಾಯಕಿ ಶ್ರೀಮತಿ ಲಲಿತಾ ಶ್ರೀಮತಿ ರೇಖಾ, ಹಾಗೂ ಆಶಾ ಕಾರ್ಯಕರ್ತೆಯರು ಕೂಡ ಸಾಕ್ಷಿ ಯಾಗಿದ್ದರು. ಆಶ್ರಮದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರು ವೈದ್ಯರಿಗೆ ಹಾಗೂ ಆರೋಗ್ಯ ಸಹಾಯಕರಿಗೆ ಶಾಲು ಹೊದಿಸಿ ಆಶಿರ್ವದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here