ಸರಿಯಾಗಿ ಮಳೆ; ಬೀಜ ಗೊಬ್ಬರ ಪೂರೈಸದೆ ಸರ್ಕಾರ ನಿರ್ಲಕ್ಷ್ಯ: ಡಾ.ಅಜಯ್ ಸಿಂಗ್

0
42

ಜೇವರ್ಗಿ: ಕಲಬುರ್ಗಿ ಜಿಲ್ಲೆ ಸೇರಿದಂತೆ ಜೇವರ್ಗಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಸರಿಯಾಗಿ ಮಳೆ ಸುರಿದ ಪರಿಣಾಮವಾಗಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕೃಷಿ ಅನುಕೂಲಕ್ಕಾಗಿ ಅತಿ ಅವಶ್ಯಕವಾಗಿರುವ ಬೀಜ ಹಾಗೂ ರಸಗೊಬ್ಬರ ಪೂರೈಕೆ ಯಲ್ಲಿ ಸರಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಡಾ ಅಜಯ್ ಸಿಂಗ್ ತಿಳಿಸಿದರು.

ಕಲಬುರ್ಗಿ ಜಿಲ್ಲೆ ಸೇರಿದಂತೆ ಜವರಿ ತಾಲೂಕಿನಲ್ಲಿ ಕೇವಲ 60% ಮಾತ್ರ ರೈತರಿಗೆ ಬೀಜ ಗೊಬ್ಬರ ಪೂರೈಕೆ ಯಾಗಿದ್ದು ದಾಸ್ತಾನು ಹಾಗೂ ಅಲ್ಪಾವಧಿ ಬೆಳೆಗಳಿಗೆ ಸಂಬಂಧಪಟ್ಟಂತೆ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಶಾಸಕ ಅಜಯ್ ಸಿಂಗ್ ತಿಳಿಸಿದರು.

Contact Your\'s Advertisement; 9902492681

ಕಲ್ಬುರ್ಗಿ ಮಾರ್ಗವಾಗಿ ಆಗಮಿಸುವ ರಿಲಯನ್ಸ್ ಪೆಟ್ರೋಲ್ ಪಂಪನಿಂದ ಹಿಡಿದು ಇಲ್ಲಿನ ಅಗ್ನಿಶಾಮಕ ಠಾಣೆಯವರೆಗೂ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಕಾಮಗಾರಿ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.

ಕಾಳಸಂತೆ ಬ್ರೇಕ್ ಹಾಕಲು ಅಧಿಕಾರಿಗಳಿಗೆ ಎಚ್ಚರಿಕೆ ?
ಕೃಷಿ ಪರಿಕರ ಹಾಗೂ ಬೀಜ ಗೊಬ್ಬರ ಸೇರಿದಂತೆ ಇತರ ಅಗತ್ಯ ವಸ್ತುಗಳ ಪೂರೈಕೆಗಾಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರೈತರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಸ್ಪಂದಿಸಬೇಕೆಂದು ತಿಳಿಸಿದರು.

ಕೇವಲ ಶಂಕುಸ್ಥಾಪನೆ ,ಗುದ್ದಲಿ ಪೂಜೆ ,ಉದ್ಘಾಟನೆ ಕಾರ್ಯಗಳಿಗಾಗಿ ಮಾತ್ರ ಪೊಸು ನೀಡುವ ಶಾಸಕರಾಗಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಮಿಂಚಿ ಮಾಯ ! ಬೆಂಗಳೂರಿನತ್ತ ಪ್ರಯಾಣ ಬೆಳೆಸಿ ಮತ್ತೆ ವಾಪಸ್ ಬಂದಾಗ ಮತ್ತೊಂದು ಪ್ರಚಾರಕ್ಕಾಗಿ ಮಾತ್ರ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಉದ್ಯಾನವನ ನಿರ್ಮಾಣ ಮಾಡಬೇಕು ಹಾಗೂ ಶುದ್ಧ ನೀರಿನ ಘಟಕ ಸ್ಥಾಪಿಸಿ ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ನೀರನ್ನು ಪೂರೈಸಬೇಕು ಎಂದು ಬಹುದಿನದ ಸಾರ್ವಜನಿಕರ ಬೇಡಿಕೆಯಾಗಿದೆ .ಇದಕ್ಕೆ ಸ್ಪಂದಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು ಇಪ್ಪತ್ತೈದು ವರ್ಷಗಳಿಂದಲೂ ಇಲ್ಲಿನ ಒಳಚರಂಡಿ ಯುಜಿಡಿ ಯೋಜನೆ ನಿರ್ಮಾಣ ಮಾಡದೆ ಸಾರ್ವಜನಿಕರಿಗೆ ಹಾಗೂ ಪಟ್ಟಣದ ನಾಗರಿಕರಿಗೆ ತೊಂದರೆಯಾಗುತ್ತದೆ ,ಈ ಕುರಿತಂತೆ ಶಾಸಕರು ಮಾತನಾಡುತ್ತಿಲ್ಲ ಎಂದು ಪಟ್ಟಣದ ಸಾರ್ವಜನಿಕರು ದೂರಿದ್ದಾರೆ.

ಪ್ರಚಾರಕ್ಕಾಗಿ ಮಾತ್ರ ಹೇಳಿಕೆಗಳನ್ನು ನೀಡಿ ಕಾರ್ಯರೂಪಕ್ಕೆ ತರುವಲ್ಲಿ ,ಸಾರ್ವಜನಿಕರ ಮನವಿಗೆ ಸ್ಪಂದಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಜೇವರ್ಗಿಯಲ್ಲಿ ಕಾರ್ಯಾಲಯಕ್ಕೆ ಆಗಮಿಸಿ ಸಾರ್ವಜನಿಕ ಮನವಿಗೆ ಸ್ಪಂದಿಸಬೇಕೆಂದು ಸಾಮಾನ್ಯ ಜನರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here