ಬೀ ಬೀ ರಜಾ ಕಾಲೇಜಿನಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರ

0
36

ಕಲಬುರಗಿ: ರಾಜ್ಯ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದಂತೆ ಖಾಜಾ ಶಿಕ್ಷಣ ಸಂಸ್ಥೆಯ ಬೀ ಬೀ ರಜಾ ಮಹಿಳಾ ಮಹಾವಿದ್ಯಾಲಯ ಹಾಗೂ ಎನ್.ಎಸ್.ಎಸ್ ಘಟಕದ ವತಿಯಿಂದ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಮತ್ತು 18 ವರ್ಷ ಮೇಲ್ಪಟ ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣದಲ್ಲಿ ಉಚಿತ ಕೋವಿಡ್-19 ಲಸಿಕಾ ಕಾರ್ಯಕ್ರಮ ಜರುಗಿತು.

ಖಾಜಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸೈಯದ್ ಶಾಹ ಖುಸ್ರೋ ಹುಸೈನಿ ಖಾಜಾ ಬಂದಾ ನವಾಜ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳನ್ನು ಕಾರ್ಯಕ್ರಮಕ್ಕೆ ನಿಯೋಜಿಸಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ಬೀ ಬೀ ರಜಾ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜೇಬಾ ಪರ್ವಿನ್ ಅವರ ನೇತೃತ್ವದಲ್ಲಿ ಟಾಸ್ಕರ್ಫರ್ಸನ್  ನೋಡಲ್ ಅಧಿಕಾರಗಳಾದ ಡಾ. ಕನೀಜ್ ಫಾತಿಮಾ ಅಳವಿ, ಡಾ. ಆಸ್ಮಾ ತಬಸ್ಸುಮ್ ಅವರ ಸಹಕಾರದೊಂದಿಗೆ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಖಾಯಂ ಹಾಗೂ ಅರೇಕಾಲಿಕ ಮತ್ತು 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಕೋವಿಡ್-19 ಉಚಿತ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಹತ್ತಿರದ ಕುಟುಂಬಗಳ ಸದಸ್ಯರಿಗೂ ಸಹ ಲಸಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಕೋವಿಡ್ ಮಹಾಮಾರಿ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here