`ಅವಧಿ’ ಕಾವ್ಯಯಾನ: ಆಡಂಬರ, ಬಣ್ಣ, ಉಡುಪು ಇಲ್ಲದೆ ಕವಿತೆ ಮೂಡಲಿ : ಜೋಗಿ

0
36

 

ಕಲಬುರಗಿ, ಜು.25- ಆಡಂಬರವಿಲ್ಲದೆ, ಬಣ್ಣವಿಲ್ಲದೇ ಮತ್ತು ತೋರಿಕೆಯ ಉಡುಪಿಗಳಿಲ್ಲದೇ ಕವಿತೆಗಳು ಮೂಡುವಂತಾಗಲಿ. ಅಂತಹ ಕವಿತೆಗಳು ಕಲಬುರಗಿ ನೆಲದಿಂದ ರಚಿಸುವ ಗಟ್ಟಿತನವಿದೆ ಎಂದು ಹಿರಿಯ ಪತ್ರಕತ೵, ಲೇಖಕ ಜೋಗಿ ಆಶಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ಅಂತಜಾ೵ಲ ಮಾಧ್ಯಮ `ಅವಧಿ’ಯ 15 ರ ಸಂಭ್ರಮ ನಿಮಿತ್ತ ಇಡೀ ರಾಜ್ಯದಾದ್ಯಂತ ನಡೆಯಲಿರುವ ಕಾವ್ಯಯಾನವನ್ನು ಕಲಬುರಗಿ ಜಿಲ್ಲೆಯಿಂದಲೇ ಶುರುವಾಗುವಂಥ ಆನ್‍ಲೈನಿನಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿರುವ `ಕ್ಲಬ್‍ಹೌಸ್’ನ `ಅವಧಿ’ ಕವಿತೆ ಹಬ್ಬ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೂಪಕಗಳಿರುವ ಕವಿತೆಗಳು ಹೆಚ್ಚು ಜನರನ್ನು ತಟ್ಟುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಬರೆದದ್ದೆಲ್ಲವೂ ಕವಿತೆಯೆನ್ನುವಂತೆ ಹುಟ್ಟಿಕೊಳ್ಳುತ್ತಿರುವ ಕವಿತೆಗಳಲ್ಲಿ ರೂಪಕಾತ್ಮಕವಾಗಿರುವ ಕವಿತೆಗಳು ಮೂಡಲಿ. ಆ ಮೂಲಕ ರಾಜ್ಯದಾದ್ಯಂತ ನಡೆಯಲಿರುವ ಅವಧಿ ಕಾವ್ಯಯಾನಕ್ಕೆ ಕಲಬುರಗಿ ನೆಲದ ಕವಿತೆಗಳು ಇಂಬು ನೀಡಲಿ ಎಂದು ಹೇಳಿದರು.

ಅವಧಿ ಪ್ರಧಾನ ಸಂಪಾದಕ ಜಿ.ಎನ್.ಮೋಹನ ಅವರು ಪ್ರಾಸ್ತಾವಿಕ ಮಾತನಾಡಿ, ಕಲಬುರಗಿ ಎಂಬುದು ಸಾಂಸ್ಕೃತಿಕವಾಗಿ ಗಟ್ಟಿತನವಿರುವ ನೆಲ. ಇಲ್ಲಿ ಕವಿರಾಜಮಾಗ೵, ಕಾಗಿಣಾ ಸಂಸ್ಕೃತಿ ದಕ್ಕಿಸಿಕೊಂಡಿದ್ದು, ಯುವ ಕವಿಗಳು ಹೊಸ ಆಲೋಚನೆ ಮಾಡುತ್ತಿರುವ ಈ ಸಂದಭ೵ವನ್ನು ಮುಖಾಮುಖಿಯಾಗಿಸಿಕೊಳ್ಳಬೇಕಿದೆ. ಹೀಗಾಗಿ ಅವಧಿಯ ಈ ಯೋಚನೆಯು ಕಲಬುರಗಿ ಕಾವ್ಯಯಾನದಿಂದಲೇ ಆರಂಭಿಸುವ ಆಲೋಚನೆ ಉಂಟಾಗಿದೆ. ಇದನ್ನು ಎಲ್ಲ ಜಿಲ್ಲೆಗಳಲ್ಲೂ ಮುಂದುವರಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ರಂಗಾಯಣ ನಿದೇ೵ಶಕ ಪ್ರಭಾಕರ ಜೋಶಿ ಆಶಯ ನುಡಿಗಳನ್ನಾಡಿದರು.

ಕಾವ್ಯಯಾನದ ಚುಕ್ಕಾಣಿ ಹಿಡಿದಿದ್ದ ಸಂಧ್ಯಾ ಹೊನಗುಂಟಿಕರ್ ಅವರು ಕಾವ್ಯಯಾನವನ್ನು ಸೊಗಸಾಗಿ ನಿರೂಪಿಸಿದರು.

ಕನಾ೵ಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ.ಬಸವರಾಜ ಕೋಡಗುಂಟಿ ಅಧ್ಯಕ್ಷತೆ ವಹಿಸಿ, ತುಂಬಾ ಸೊಗಸಾಗಿ ಮಾತನಾಡಿದರು. ಹಿರಿಯ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಆರಂಭದಲ್ಲಿ ಹಾಡು ಹಾಡಿದರು.

ಕವಿಗಳಾದ ಶಂಕರಯ್ಯ ಘಂಟಿ, ಪ್ರೇಮಾ ಹೂಗಾರ, ವಿಜಯಭಾಸ್ಕರರೆಡ್ಡಿ, ರುಕ್ಮಿಣಿ ನಾಗಣ್ಣವರ್, ಡಿ.ಎಂ. ನದಾಫ್, ಜೋತ್ಸ್ನಾ ಹೇರೂರ್, ಸಂಗಮೇಶ ಸಜ್ಜನ್, ಕಾವ್ಯಶ್ರೀ ಮಹಾಗಾಂವಕರ್, ಸಿದ್ದ ಛಲವಾದಿ, ಭೀಮರಾಯ ಹೇಮನೂರ, ಮೆಹಬೂಬ ಬೀ, ಸೇರಿದಂತೆ ಅನೇಕರು ಕವಿತೆಗಳನ್ನು ವಾಚಿಸಿದರು.

ಹಿರಿಯ ಲೇಖಕರಾದ ಮುರಳೀಧರ ಉಪಾಧ್ಯ ಹಿರಿಯಡ್ಕ, ಜಯಲಕ್ಷ್ಮಿ ಪಾಟೀಲ, ಸಿದ್ದರಾಮ ಹೊನ್ಕಲ್ ಸೇರಿದಂತೆ ಅನೇಕರು ಅನಿಸಿಕೆಗಳನ್ನು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here