ಇಜೇರಿಯಲ್ಲಿ 10 ಲಕ್ಷ ರು ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

0
11

ಜೇವರ್ಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳನ್ನೊಳಗೊಂಡಿರುವ ಜೇವರ್ಗಿ ಮತಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಅಲ್ಲಿನ ಜನ ವಸತಿ ಆಧರಿಸಿ ಹಂತಹಂತವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಘೋಷಿಸಿದ್ದಾರೆ.

ಬುಧವಾರ ಇಜೇರಿ ಗ್ರಾಮದಲ್ಲಿ ತಲೆ ಎತ್ತಿರುವ 10 ಲಕ್ಷ ರು ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನಲ್ಲಿ ಈಗಾಗಲೇ 67 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಈ ಪೈಕಿ 42 ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದವು ನಿರ್ವಹಣೆಯ ಸಮಸ್ಯೆಯಿಂದಾಗಿ ಕೆಲಸ ಮಾಡುತ್ತಿಲ್ಲ. ಇವುಗಳ ನಿರ್ವಹಣೆ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಹೇಳಿದ ಶಾಸಕರು ಬರುವ ದಿನಗಳಲ್ಲಿ ಇದೇ ಮಾದರಿಯ ಶುದ್ಧ ನೀರಿನ ಘಟಕಗಳನ್ನು ಗ್ರಾಮೀಣ ಜನರಿಗೆ ಒದಗಿಸಲಾಗುತ್ತದೆ ಎಂದರು.

Contact Your\'s Advertisement; 9902492681

ಇಜೇರಿಯಲ್ಲಿರುವ ಶುದ್ಧ ನೀರಿನ ಘಟಕ ಎಸ್‍ಡಿಪಿ ಯೋಜನೆಯಲ್ಲಿ ತಲೆ ಎತ್ತಿದ್ದು 5 ರು ಗೆ 20 ಲೀಟರ್ ನೀರು ಲಭ್ಯವಾಗುವಂತೆ ಮಾಡಲಾಗಿದೆ. ಹೀಗೆ ಸಂಗ್ರಹವಾಗುವ ಹಣವನ್ನು ಘಟಕದ ನಿರ್ವಹಣೆಗೆ ಬಳಸಲಾಗುತ್ತಿದೆ ಎಂದು ಶಾಸಕರು ಹೇಳಿದ್ದಾರೆ.

ಪ್ರತಿ ವಯಸ್ಕ ವ್ಯಕ್ತಿಗೆ ನಿತ್ಯ ಎಲ್ಲಾ ಕೆಲಸಗಲಿಗೆ 37 ಲೀಟರ್ ನೀರು ಬೇಕು. ಬರೀ ಕುಡಿಯಲು ಅಂದರೆ 6 ರರಿಂದ 8 ಲೀಟರ್ ಶುದ್ಧ ನೀರು ಬೇಕು. ಇದೇ ಲೆಕ್ಕಾಚಾರದಲ್ಲಿ ಶುದ್ಧ ನೀರಿನ ಘಟಕಗಳನ್ನು ಜನವಸತಿ ಆಧರಿಸಿ ಸ್ಥಾಪನೆ ಮಾಡುವ ಇಚ್ಚೆ ತಮ್ಮದಾಗಿದ್ದು ಇದಕ್ಕಾಗಿ ಬರುವ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ಯೋಜನೆ ರೂಪಿಸಿ ಜೇವರ್ಗಿ ಮತಕ್ಷೇತ್ರದಲ್ಲಿ ಆದ್ಯತೆ ಮೇರೆಗೆ ಜಾರಿಗೆ ತರಲಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

5 ರು ಕಾಯಿನ್ ಹಾಕುವ ಮೂಲಕ ತಾವೇ 20 ಲೀಟರ್ ನೀರನ್ನು ಕ್ಯಾನ್‍ಗೆ ತುಂಬಿಸಿ ಡಾ. ಅಜಯ್ ಸಿಂಗ್ ನೀರಿನ ಘಟಕಕ್ಕೆ ಚಾಲನೆ ನೀಡಿದರು. ಇಜೇರಿ ಜನ ಶುದ್ಧ ನೀರಿನ ಘಟಕ ತಮ್ಮೂರಿಗೆ ಬಂತೆಂದು ಸಂತಸಪಟ್ಟು ಶಾಸಕರಿಗೆ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಡಾ. ಅಜಯ್ ಸಿಂಗ್ ಇಜೇರಿಯ ಅಂಗನವಾಡಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಅಲ್ಲಿರುವ ಕಾರ್ಯಕರ್ತೆಯವರು ಅವರಿಗೆ ಗುಲಾಬಿ ಹೂವಿನಿಂದ ಸ್ವಾಗತ ಕೋರಿ ಅಭಿನಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here