ರಾಷ್ಟ್ರೀಯ ಹೆದ್ದಾರಿ ತಡೆದು ಬಿಆರ್ ಪಾಟೀಲ್ ನೇತೃತ್ವದಲ್ಲಿ ರೈತರಿಗೆ ಬೆಂಬಲ

0
22

ಕಲಬುರಗಿ: ರೈತರ ಹೋರಾಟವು ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಂಯುಕ್ತ ಹೋರಾಟ – ಕರ್ನಾಟಕದ ಕರೆಯ ಮೇರೆಗೆ ಕಲಬುರಗಿಯಲ್ಲಿನ ನಂದೂರ ಗ್ರಾಮದ (ಕಲಬುರಗಿ – ದೇವಸುಗೂರ, ರಾಷ್ಟ್ರೀಯ ಹೆದ್ದಾರಿ ೧೫೦) ’ರಾಷ್ಟ್ರೀಯ ಹೆದ್ದಾರಿ ಬಂದ್’ನ್ನು ಯಶಸ್ವಿಯಾಗಿ ನಡೆಸಿ ಪ್ರತಿಭಟನೆಯನ್ನು ನಡೆಸಲಾಯಿತು.

ಕರಾಳ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಘೋಷಣೆ ದೇಶದ ರೈತರ ಚಾರಿತ್ರಿಕ ಹೋರಾಟಕ್ಕೆ ಸಂದ ಭಾರಿ ದೊಡ್ಡ ವಿಜಯವಾಗಿದೆ. ಈ ಹೋರಾಟಕ್ಕೆ ಕಾರಣೀಭೂತರಾದ ಮಳೆ, ಚಳಿ, ಬಿಸಿಲು, ಬೆದರಿಕೆಗಳನ್ನು ಲೆಕ್ಕಿಸದೇ ದೆಹಲಿಯ ಗಡಿಗಳಲ್ಲಿ ಸತತ ಒಂದು ವರ್ಷದಿಂದ ಹೋರಾಟ ನಡೆಸಿದ ಲಕ್ಷಾಂತರ ರೈತರು ಹಾಗೂ ಇದರ ಭಾಗವಾಗಿ ದೇಶಾದ್ಯಂತ ವ್ಯಾಪಕ ಹೋರಾಟ ನಡೆಸಿದ ರೈತರು, ದಲಿತರು, ಕಾರ್ಮಿಕರನ್ನು ಸಂಯುಕ್ತ ಹೋರಾಟ – ಕರ್ನಾಟಕ (ಕಲಬುರಗಿ) ಯು ಅಭಿನಂದಿಸುತ್ತದೆ.

Contact Your\'s Advertisement; 9902492681

ಕರಾಳ ಮೂರು ಕೃಷಿ ಕಾಯ್ದೆಗಳ ವಾಪಸ್ಸಾತಿಗಾಗಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು ರಚನೆಯ ಬಗ್ಗೆ ಹಾಗೂ ವಿದ್ಯುತ್ ಕ್ಷೇತ್ರದ ಸಂಪೂರ್ಣ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುವ ವಿದ್ಯುತ್ ಮಸೂದೆ ೨೦೨೦ ರ ವಾಪಸಾತಿಯ ಬಗ್ಗೆ ಮೌನ ವಹಿಸಿದ್ದಾರೆ. ಈ ಬೇಡಿಕೆಗಳನ್ನು ಸಹ ಈಡೇರಿಸಬೇಕೆಂದು ಸಂಯುಕ್ತ ಹೋರಾಟ – ಕರ್ನಾಟಕ (ಕಲಬುರಗಿ) ಯು ಆಗ್ರಹಿಸುತ್ತದೆ.

ಬಿಜೆಪಿ ರಾಜ್ಯ ಸರ್ಕಾರವೂ ಮೋದಿಯವರ ದಾರಿಯಲ್ಲಿ ಹೆಜ್ಜೆ ಹಾಕಬೇಕು :  ರೈತರ ಒಂದು ವರ್ಷದ ಸತತ ಹೋರಾಟದ ಕಾರಣದಿಂದ ತಮ್ಮ ತಪ್ಪಿನ ಅರಿವಾಗಿ ಕರಾಳ ಕೃಷಿ ಕಾಯ್ದೆ ವಾಪಸ್ಸು ಪಡೆಯುವುದಾಗಿ ಮೋದಿಯವರು ಘೋಷಣೆ ಮಾಡಿದ್ದಾರೆ. ಆದರೆ ಅದೇ ಬಿಜೆಪಿಯ ಕರ್ನಾಟಕ ರಾಜ್ಯ ಸರ್ಕಾರವು ಈ ಕಾಯ್ದೆಯ ಮುಖ್ಯ ಅಂಶಗಳಾದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳನ್ನು ತಂದು ಭಾರಿ ವೇಗವಾಗಿ ಜಾರಿ ಮಾಡುತ್ತಿದೆ.

ಮೋದಿಯವರು ಕೃಷಿ ಕಆಯ್ದೆಗಳ ವಾಪಸಾತಿಯ ಬಗ್ಗೆ ಮಾಡಿರುವ ಘೋಷಣೆ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಪ್ರಧಾನಿ ನರೇಂದ್ರ ಮೋದಿಯವರ ಹಾದಿಯಲ್ಲಿ ಹೆಜ್ಜೆ ಹಾಕಿ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳ ತಿದ್ದುಪಡಿಗಳನ್ನು ಕೂಡಲೇ ರದ್ದು ಮಾಡಬೇಕೆಂದು ಸಂಯುಕ್ತ ಹೋರಾಟ – ಕರ್ನಾಟಕ (ಕಲಬುರಗಿ) ಯು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ರಾಜ್ಯದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಂಯುಕ್ತ ಹೋರಾಟ – ಕರ್ನಾಟಕ (ಕಲಬುರಗಿ) ಯು ಎಚ್ಚರಿಕೆ ನೀಡುತ್ತದೆ.

ಹೋರಾಟ ಮುಂದುವರೆಯುತ್ತದೆ :  ಕೇಂದ್ರದಲ್ಲಿ ಕನಿಷ್ಠ ಬೆಂಬಲ ಬೆಲೆ ಖಾತರಿಯ ಕಾನೂನು, ವಿದ್ಯುತ್ ಮಸೂದೆ ೨೦೨೦ ರ ವಾಪಸಾತಿ ಹಾಗೂ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗಳ ವಾಪಸಾತಿ, ಕಾರ್ಮಿಕ ಸಂಹಿತೆ ರದ್ಧತಿ, ಸಾರ್ವಜನಿಕ ಉದ್ಯಮಗಳ ಖಾಸಗೀಕರಣಕ್ಕೆ ತಡೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಿಯಂತ್ರಣ, ಸತತ ಮಳೆಯಿಂದ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ, ಹಾಲಿನ ದರ ಇಳಿಕೆಯ ವಿರುದ್ಧ ಮತ್ತಿತರ ಬೇಡಿಕೆಗಳನ್ನು ಈಡೇರಿಸುವ ತನಕ ರಾಜ್ಯದಲ್ಲಿ ಹಾಗೂ ಕಲಬುರಗಿ ಜಿಲ್ಲೆಯಾದ್ಯಂತ ಹೋರಾಟವನ್ನು ಮುಂದುವರೆಸಲು ಸಂಯುಕ್ತ ಹೋರಾಟ – ಕರ್ನಾಟಕ (ಕಲಬುರಗಿ) ನಿರ್ಧರಿಸಿದೆ.

ಈ ಪ್ರತಿಭಟನೆಯ ನೇತೃತ್ವವನ್ನು ಐಕ್ಯ ಹೋರಾಟ ಸಮಿತಿಯ ರಾಜ್ಯ ನಾಯಕರಾದ ಶ್ರೀ ಬಿ. ಆರ್. ಪಾಟೀಲ್ ರವರು ಹಾಗೂ ಆರ್. ಕೆ. ಎಸ್. ನ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಹೆಚ್. ವ್ಹಿ. ದಿವಾಕರ್ ರವರು ವಹಿಸಿದ್ದರು.

ಈ ಸಂದರ್ಭದಲ್ಲಿ ಕೆ.ಪಿ.ಆರ್.ಎಸ್. ನ ಜಿಲ್ಲಾ ಅಧ್ಯಕ್ಷರಾದ ಕಾ. ಶರಣಬಸ್ಸಪ್ಪ ಮಮಶೆಟ್ಟಿ, ಎ.ಐ.ಕೆ.ಎಸ್. ಜಿಲ್ಲಾ ಅಧ್ಯಕ್ಷರಾದ ಕಾ. ಮೌಲಾ ಮುಲ್ಲಾ, ಕಾರ್ಯದರ್ಶಿಗಳಾದ ಕಾ. ಭೀಮಾಶಂಕರ್ ಮಾಡ್ಯಾಳ್, ಆರ್.ಕೆ.ಎಸ್. ನ ಜಿಲ್ಲಾ ಕಾರ್ಯದರ್ಶಿಗಳಾದ ಕಾ. ಮಹೇಶ್ ಎಸ್. ಬಿ., ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ಗೌರವ ಅಧ್ಯಕ್ಷರಾದ ಶ್ರೀ ಉಮಾಪತಿ ಮಾಲೀಪಾಟೀಲ್, ಜಿಲ್ಲಾ ಅಧ್ಯಕ್ಷರಾದ ಶ್ರೀ ನಾಗೇಂದ್ರಪ್ಪ ತಂಭೆ, ಕಾರ್ಯದರ್ಶಿಗಳಾದ ಶ್ರೀ ರಮೇಶ್ ರಾಗಿ, ಕೋಡಿಹಳ್ಳಿ ಚಂದ್ರಶೇಖರ್ ಬಣದ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಲ್ಲಣ್ಣಗೌಡ, ಡಿ.ಎಸ್.ಎಸ್ (ಅಂಬೇಡ್ಕರ್‌ವಾದಿ) ಸಂಘಟನೆಯ ರಾಜ್ಯ ಸಂಚಾಲಕರಾದ ಶ್ರೀ ಎಸ್. ಆರ್. ಕೊಲ್ಲೂರು, ಐಕ್ಯ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀ ಶೌಕತ್ ಅಲಿ ಅಲೂರ, ಡಿ. ಎಸ್. ಎಸ್. (ಮಾವಳ್ಳಿ ಶಂಕರ್ ಬಣ) ದ ಜಿಲ್ಲಾ ಸಂಚಾಲಕರಾದ ಶ್ರೀ ಅರ್ಜುನ ಗೊಬ್ಬೂರು ರವರನ್ನು ಒಳಗೊಂಡು ನೂರಾರು ಜನ ರೈತ ಮುಖಂಡರು, ರೈತರು, ಗ್ರಾಮಸ್ಥರು ಈ ಚಳುವಳಿಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here