ಕಲಬುರಗಿಯಲ್ಲಿ RSS ಪಥಸಂಚಲನ ಮತ್ತು ಈದ್ ಜುಲೂಸ್ ಇಂದು

0
152

ಕಲಬುರಗಿ: ದಸರಾ ನಿಮಿತ್ತ ರಾಷ್ಟ್ರೀ ಸ್ವಯಂ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಪಥ ಸಂಚಲನ ಹಾಗೂ 12 ರಬಿಲ್ ಅವಲ್ ನಿಮಿತ್ತ ಈದ್ ಎ ಮಿಲಾದ್ ಉನ್ ನಬಿ ಪ್ರಯುಕ್ತ ಕಲಬುರಗಿ ನಗರದಲ್ಲಿ ನಡೆಸಲಾಗುವ ಜುಲೂಸ್ ಗೆ ಜಿಲ್ಲಾ ಪೊಲೀಸ್ ಇಲಾಖೆ ಅವಕಾಶ ಕಲ್ಪಸಿ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದೆ.

ಕಲಬುರಗಿಯಲ್ಲಿ ದಸರಾ ಮತ್ತು ಇಂದು ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮದಿನದ ನಿಮಿತ್ತ 43ನೇ ಈದ್ ಎ ಮಿಲಾದ್ ಉನ್ ನಬಿ ಉತ್ಸವ ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಐತಿಹಾಸಿಕ ಕಲಬುರಗಿ ನಗರದ ಬಡಾವಣೆಗಳು ಶೃಂಗಾರಮಯವಾಗಿ ಅಲಂಕಾರಗೊಂಡಿವೆ. ಈದ್ ಜುಲೂಸ್ ಗಾಗಿ ಬಡಾವಣೆಗಳಲ್ಲಿ ಯುವಕರು ಇಸ್ಲಾಮಿಕ್ ಗುರುತುಗಳಾದ ಮಕ್ಕಾ, ಮದೀನಾ ಸೇರಿದಂತೆ ಪ್ರವಾದಿ ಮೊಹಮ್ಮದ್ (ಸ.ಅ) ಅವರ ನೆನಪ್ಪಿನಲ್ಲಿ ಇಸ್ಲಾಮಿಕ್ ಸ್ತಬ್ಧಗಳ ಕಲಾಕೃತಿಗಳು, ಹಾಗೂ ಸ್ತೂಪಗಳು ತಯಾರಿಸಿ ಜುಲೂಸಿನಲ್ಲಿ ಮೆರವಣಿಗೆ ಮಾಡುವ ಮೂಲಕ ಪ್ರದರ್ಶನ ಮಾಡಲಿದ್ದಾರೆ.

Contact Your\'s Advertisement; 9902492681

ಇಂದು ದಸರಾ ನಿಮಿತ್ತ ಆರ್.ಎಸ್.ಎಸ್ ಹಮ್ಮಿಕೊಂಡಿರುವ ಪಥಸಂಚಲನದ ಮಾರ್ಗ ಬದಲಾವಣೆಗೆ ಪೊಲೀಸರು ಸಂಘದ ಸದಸ್ಯರಿಗೆ ರೂಟ್ ಮ್ಯಾಪ್ ಸಿದ್ಧಪಡಿಸಿ ನೀಡಿಲಾಗಿದೆ ಎಂದು ತಿಳಿದುಬಂದಿದ್ದು, ಈ ಹಿಂದೆ ಸಂಘದ ಪಥಸಂಚಲನ ಮುಸ್ಲಿಂ ಚೌಕ್ ಗಂಜ್ ಮಾರ್ಗವಾಗಿ ಸಾಗಿತ್ತು. ಈ ಬಾರಿ ಬಹುಮನಿ ಕೋಟೆಯಿಂದ ಪ್ರಾರಂಭವಾಗಿ ಲೋಹಾರ್ ಗಲ್ಲಿ, ಕಪಡಾ ಬಜಾರ್, ಟ್ರಾಫೀಕ್ ಪೊಲೀಸ್ ಠಾಣೆ ಮಾರ್ಗವಾಗಿ ರೂಟ್ ಮ್ಯಾಪ್ ಪೊಲೀಸರು ಹಾಕಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪಥಸಂಚಲನದ ಹಿನ್ನೆಯಲ್ಲಿ ಮುಸ್ಲಿಮರಿಗೆ ಈದ್ ಮೆರವಣೆಗೆಯನ್ನು 2 ರಿಂದ 5 ಗಂಟೆ ವರೆಗೆ ನಡೆಸದಿರುವ ಬಗ್ಗೆ ಸೂಚಿಸಲಾಗಿದ್ದು, ಲೋಹಾರ ಗಲ್ಲಿ ಮತ್ತು ಕಪಡಾ ಬಜಾರ್ ಬಡಾವಣೆಗಳಿಂದ ಜುಲೂಸ್ ನಲ್ಲಿ ಪಾಲ್ಗೋಳುವ ಸ್ತಬ್ಧ ಕಲಾಕೃತಿಗಳನ್ನು ಸರಿಯಾದ ಸಮಯಕ್ಕೆ ಮುಸ್ಲಿಂ ಚೌಕ್  ತರುವ ರೀತಿಯಲ್ಲಿ ನೋಡಿಕೊಳ್ಳಿ ಎಂದು ಮಾಜಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ಮನವಿ ಮಾಡಿದ್ದಾರೆ.

ಈದ್ ಮಿಲಾದ್ ಜುಲೂಸ್ ಸಂಜೆ 5 ಗಂಟೆಯ ನಂತರ ಮುಸ್ಲಿಂ ಚೌಕ್ ನಲ್ಲಿ ಖಾಜಾ ಬಂದಾ ನವಾಜ್ ದರ್ಗಾದ ಪಿಠಾಧಿಪತಿಗಳಾದ ಡಾ. ಸೈಯದ್ ಶಾ ಖುಸ್ರೋಹುಸೈನಿ ಅವರು ಜುಲೂಸ್ ಗೆ ಹಸಿರು ನಿಶಾನೆ ತೂರಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಡಾ. ಚುಲಬುಲ್ ತಿಳಿಸಿದ್ದಾರೆ.

ಜುಲೂಸ್ ಮುಸ್ಲಿಂ ಚೌಕ್ ಗಂಜ್, ಸೂಪರ್ ಮಾರ್ಕೆಟ್, ಕಪಡಾ ಬಜಾರ್ ಮಾರ್ಗವಾಗಿ ಹಫ್ತ ಗುಂಬಜ್ ಗೆ ತೆರಳುತ್ತದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಕಲಬುರಗಿ ಸಾಕ್ಷಿಯಾಗದ ರೀತಿಯಲ್ಲಿ ನೋಡಿಕೊಳ್ಳವ ನೀಟಿನಲ್ಲಿ ಎಲ್ಲರೂ ಎಚ್ಚರಿಕೆ ವಹಿಸಬೇಕು. ಪೊಲೀಸರಿಗೆ ಸಹಕಾರ ನೀಡಬೇಕೆಂದು ಮುಸ್ಲಿಮ್ ಸಮುದಾಯದ ಪರವಾಗಿ ಡಾ. ಅಜಗರ್ ಚುಲಬುಲ್ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here