ನ್ಯಾಯಾಲಯದ ಮೆಟ್ಟಿಲೇರಿದ ಈ ಮೊಕದ್ದಮೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು

0
280

ನಮಗೆಲ್ಲಾ ಗೋತ್ತಿರುವ ಹಾಗೆ ಆಸ್ತಿ ವಿವಾದ, ವಿಚ್ಛೇದನ ಮತ್ತು ಇತರ ಕೌಟುಂಬಿಕ ವಿವಾದಗಳ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬರುತ್ತಲೇ ಇರುತ್ತವೆ. ಆದರೆ ಈ ಪ್ರಕರಣವು ತುಂಬಾ ವಿಭಿನ್ನವಾಗಿತ್ತು. 70 ವರ್ಷದ ತಮ್ಮನೊಬ್ಬ ತನ್ನ 80 ವರ್ಷದ ಅಣ್ಣನ ಮೇಲೆ ಮೊಕದ್ದಮೆ ಒಂದನ್ನು ಹೂಡಿದ್ದ . ಮೊಕದ್ದಮೆಯು “ನನ್ನ 80 ವರ್ಷದ ಅಣ್ಣನಿಗೆ ಈಗ ವಯಸ್ಸಾಗಿದೆ, ಆದ್ದರಿಂದ ಅವನು ತನ್ನನ್ನು ತಾನೇ ಸರಿಯಾಗಿ ನೋಡಿಕೊಳ್ಳಲು ಸಹ ಸಾಧ್ಯವಿಲ್ಲ, ಹಾಗಿದ್ದಾಗ ಅವನು ನಮ್ಮ 110 ವರ್ಷದ ತಾಯಿಯನ್ನು ಹೇಗೆ ನೋಡಿಕೊಳ್ಳುತ್ತಾನೆ? “ನಾನು ಈಗ ಚೆನ್ನಾಗಿದ್ದೇನೆ, ಹಾಗಾಗಿ ಈಗ ನನಗೆ ತಾಯಿಯ ಸೇವೆ ಮಾಡಲು ಮತ್ತು ತಾಯಿಯನ್ನು ನನ್ನ ಕೈಗೆ ಒಪ್ಪಿಸುವ ಕೆಲಸ ಕೋರ್ಟ್ ಮಾಡಬೇಕು” ಎಂದು ವಾದ ಮಾಡಿದ..

ನ್ಯಾಯಾಧೀಶರು ಅಚ್ಚರಿಯಿಂದ ಪ್ರಕರಣ ಕೈಗೆತ್ತಿಕೊಂಡರು. ನ್ಯಾಯಾಧೀಶರು ಸಹೋದರರಿಬ್ಬರಿಗೂ ಮನವರಿಕೆ ಮಾಡಿ ತಿಂಗಳಲ್ಲಿ 15-15 ದಿನಗಳಂತೆ ತಾಯಿಯನ್ನು ನೋಡಿಕೊಳ್ಳಿ ಎಂದು ಸಲಹೆ ನೀಡಿದರು. 80 ವರ್ಷದ ಅಣ್ಣ ಇದಕ್ಕೆ ಒಪ್ಪಲಿಲ್ಲ, ನನ್ನ ತಾಯಿಯನ್ನು ನನ್ನ ಸ್ವರ್ಗವನ್ನು ನನ್ನಿಂದ ದೂರವಿರಲು ನಾನು ಯಾಕೆ ಬಿಡಬೇಕು? ಎಂದು ಹೇಳಿದ. ಅಮ್ಮ ತನಗೆ ಸಮಸ್ಯೆ ಇದೆ ಎಂದು ಹೇಳಿದರೆ ಅಥವಾ ನಾನು ಅವಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಆಗ ಮಾತ್ರ ನನ್ನ ಅಮ್ಮನನ್ನು ತಮ್ಮನಿಗೆ ನೀಡಿ ಎಂದು ಕೇಳಿಕೊಂಡ. ಕಳೆದ 40 ವರ್ಷಗಳಿಂದ ಅಣ್ಣನೊಬ್ಬನೇ ಏಕಾಂಗಿಯಾಗಿ ಈ ಸೇವೆ ಮಾಡುತ್ತಿದ್ದಾನೆ, ಹಾಗಾದರೆ ನಾನು ನನ್ನ ತಾಯಿಯನ್ನು ನೋಡಿಕೊಳ್ಳುವ ಕರ್ತವ್ಯವನ್ನು ಯಾವಾಗ ಮಾಡಬೇಕು ಎಂದು ತಮ್ಮ ಕೇಳಿದನು?

Contact Your\'s Advertisement; 9902492681

ಸಂಕಷ್ಟಕ್ಕೀಡಾದ ನ್ಯಾಯಾಧೀಶರು ಎಲ್ಲಾ ಪ್ರಯತ್ನಗಳನ್ನು ಮಾಡಿದರು, ಆದರೆ ಯಾವುದೇ ಪರಿಹಾರವಿಲ್ಲ. ಅವರು ಅಂತಿಮವಾಗಿ ತಾಯಿಯ ಅಭಿಪ್ರಾಯಕ್ಕಾಗಿ, ತಾಯಿಯನ್ನು ಕರೆದರು ತಾಯಿ 30 ಕೆಜಿ ತೂಕದ ದುರ್ಬಲ ಜೀವದ ಮಹಿಳೆಯಾಗಿದ್ದು, ಕಷ್ಟಪಟ್ಟು ಗಾಡಿಯಲ್ಲಿ ಬಂದರು. ನೀವು ಯಾರೊಂದಿಗೆ ಇರಬೇಕೆಂದು ಬಯಸುತ್ತೀರಿ ಎಂದು ನ್ಯಾಯಾಧೀಶರು ತಾಯಿಯಲ್ಲಿ ಕೇಳಿದರು.

ಆಗ ಮಕ್ಕಳಿಬ್ಬರೂ ಸಮಾನರು ಎಂದು ತಾಯಿ ದುಃಖದ ಹೃದಯದಿಂದ ಹೇಳಿದಳು. ಒಬ್ಬ ಮಗನ ಪರವಾಗಿ ತೀರ್ಪು ನೀಡುವ ಮೂಲಕ ನಾನು ಇನ್ನೊಬ್ಬನ ಹೃದಯವನ್ನು ನೋಯಿಸಲಾರೆ. ನೀವು ನ್ಯಾಯಾಧೀಶರು, ನಿರ್ಧರಿಸುವುದು ನಿಮ್ಮ ಕೆಲಸ. ನಿಮ್ಮ ನಿರ್ಧಾರ ಏನೇ ಆಗಲಿ ನಾನು ಒಪ್ಪಿಕೊಳ್ಳುತ್ತೇನೆ ಎಂದರು.

ಕೊನೆಯದಾಗಿ ಅಣ್ಣನಿಗೆ ನಿಜವಾಗಿಯೂ ವಯಸ್ಸಾಗಿದೆ, ಬಲಹೀನನಾಗಿದ್ದಾನೆ ಎಂಬ ಕಿರಿಯ ಸಹೋದರನ ಭಾವನೆಗೆ ಕೋರ್ಟ್ ಒಪ್ಪಿಗೆ ನೀಡಿದೆ ಎಂದು ಜಡ್ಜ್ ಭಾರವಾದ ಹೃದಯದಿಂದ ನಿರ್ಧರಿಸಿದರರು. ಆ ಮೂಲಕ ತಾಯಿಯ ಸೇವೆ ಮಾಡುವ ಜವಾಬ್ದಾರಿಯನ್ನು ತಮ್ಮನಿಗೆ ನೀಡಲಾಗಿದೆ ಎಂದು ತೀರ್ಪು ನೀಡಿದರು.

ತೀರ್ಪನ್ನು ಕೇಳಿದ ಅಣ್ಣ ಈ ಮುದುಕ ನ್ಯಾಯಾಧೀಶ ನನ್ನ ಸ್ವರ್ಗವನ್ನು ನನ್ನಿಂದ ಕಿತ್ತುಕೊಂಡಿದ್ದಾನೆ ಎಂದು ಜೋರಾಗಿ ಅಳಲು ತೋಡಿಕೊಂಡರು. ನ್ಯಾಯಾಲಯದಲ್ಲಿದ್ದ ನ್ಯಾಯಾಧೀಶರು ಸೇರಿದಂತೆ ಎಲ್ಲರ ಕಣ್ಣು ಕೂಡ ಒದ್ದೆಯಾಗಿತ್ತು. ದೊಡ್ಡ ಮಗನ ಪ್ರೀತಿಯ ಅಪ್ಪುಗೆಯೊಂದಿಗೆ ತಾಯಿ ಸಣ್ಣ ಮಗನ ಮನೆ ಸೇರಿದಳು.

ಆಶಯ ಇಷ್ಟೇ ಒಡಹುಟ್ಟಿದವರು ವಾದವನ್ನು ಹೊಂದಿದ್ದರೆ, ಅದು ಈ ಮಟ್ಟದಲ್ಲಿರಬೇಕು ಹೆತ್ತತಾಯಿಯನ್ನು ನೀನು ನೀಡಿಕೊ, ನೀನೇ ನೋಡಿಕೊ ಅಂತ ಜಗಳಗಳಾಗಿ ಕೊನೆಗೆ ಅಣ್ಣತಮ್ಮ ಇಬ್ಬರೂ ಸೇರಿ ತಂದೆ ತಾಯಿಯನ್ನು ವೃದ್ಧಾಶ್ರಮದಲ್ಲಿ ಹಾಕುವ ಈ ಕಾಲಘಟ್ಟದಲ್ಲಿ ಇಂತಹ ಕೆಲವು ಮಾದರಿ ಘಟನೆಗಳು ಕೂಡ ನಮ್ಮಲ್ಲಿದೆ ಅನ್ನೋದು ಖುಷಿಯ ವಿಚಾರ.

-ಕೃಪೆ ಫೇಸ್‌ಬುಕ್‌

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here