ವಿದ್ಯಾರ್ಥಿಗಳು ಮೊಬೈಲ್ ದೂರವಿಟ್ಟು, ಆಟ-ಪಾಠಗಳತ್ತ ಹೆಚ್ಚಿನ ಆಸಕ್ತಿ ವಹಿಸಬೇಕು

0
19

ಆನೇಕಲ್: ಶಾಲಾ ವಿದ್ಯಾರ್ಥಿಗಳು ಮೊಬೈಲ್ ಗಳನ್ನು ದೂರವಿಟ್ಟು, ಆಟ-ಪಾಠಗಳತ್ತ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಸರಕಾರಿ ಅಭಿಯೋಜಕರಾದ ಚಂದ್ರಶೇಖರ್ ಆರ್ ಸಲಹೆ ನೀಡಿದ್ದಾರೆ.

ತಾಲ್ಲೂಕಿನ ದೇವಾಂಗಪೇಟೆ ಸರಕಾರಿ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಮತ್ತು ದೇವಾಂಗಪೇಟೆ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಮೊಬೈಲ್ ಗಳಿಗೆ ಅಂಟಿಕೊಳ್ಳದಂತೆ ಜಾಗ್ರತೆ ವಹಿಸುವುದು ಪೋಷಕರು, ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತಿ ವಿದ್ಯಾರ್ಥಿಯು ಭವಿಷ್ಯದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಕಲಿಯುವ ಮೂಲಕ ಕುಟುಂಬಕ್ಕೆ, ದೇಶಕ್ಕೆ ಆಸರೆ ಆಗಬೇಕು.‌ ಆ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ.

ವಕೀಲ ಪುರುಷೋತ್ತಮ್ ಮಾತನಾಡಿ, ಮಕ್ಕಳು ದುಡಿಯ ಬಾರದು ಶಾಲೆಗೆ ಬಂದು ಅಕ್ಷರ ಕಲಿಯಬೇಕು, ಕೆಲಸ ಮಾಡಿಸಿಕೊಳೋದು ಅಪರಾಧ 25 ಸಾವಿರದ ವರೆಗೂ ದಂಡ ಹಾಕುತ್ತಾರೆ ಹಾಗೆಯೇ ಕೆಲಸ ಮಾಡೋದು ಕೂಡ ಅಪರಾಧ ಎಂದು ಹೇಳಿದರು, ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು , ಹಾಡು ನಾಟಕ ನೃತ್ಯ ಮಾಡಿದರು.

ಶಾಲೆಯ ಶಿಕ್ಷಕರು ನೃತ್ಯ ಮಾಡಿ ಮಕ್ಕಳನ್ನು ರಂಹಜಿಸಿದರು,
ಕಾರ್ಯಕ್ರಮದಲ್ಲಿ, ಶಾಲೆಯ ಶಿಕ್ಷಕರಾದ ಮಂಜುಳಾ, ಸರೋಜಾ, ಮಂಜುನಾಥ, ಪರ್ವೀನ್ ಫಾತಿಮಾ ಆರೋಗ್ಯ ಮೇರಿ, ಅತಿಥಿ ಶಿಕ್ಷಕರು, ವಕೀಲರಾದ ಎಂ. ಎ ಶಿವರಾಜು, ಚಂದ್ರಶೇಖರ್, ಅನುರಾಧಾ ಆರ್ ಮತ್ತು ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here