ಹಜ್ ಯಾತ್ರೆ – 2023ರ ಪರಿಶೀಲನಾ ಸಭೆ

0
41

ಬೆಂಗಳೂರು: ಕೇಂದ್ರ ಸರ್ಕಾರದ ಸನ್ಮಾನ್ಯ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾದ ಶ್ರೀಮತಿ. ಸ್ಮೃತಿ ಜುಬಿನ್ ಇರಾನಿರವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆಯನ್ನು ನವದೆಹಲಿಯಲ್ಲಿ ಆಯೋಜಿಸಿದ್ದು, ಸದರಿ ಸಭೆಯಲ್ಲಿ ಎಲ್ಲಾ ರಾಜ್ಯ ಹಜ್ ಸಮಿತಿಗಳ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿರುತ್ತಾರೆ.

ಸೌದಿ ಅರೇಬಿಯಾ ಸರ್ಕಾರದ ಅನುಮತಿಯಿಂದಾಗಿ 2022 ಹಜ್ ಯಾತ್ರೆಯೂ ಕೊನೆಯ ಕ್ಷಣದಲ್ಲಿ ಘೋಷಿಸಲಾಗಿದ್ದರೂ, ಹಜ್ ಯಾತ್ರೆಯು ಹಜ್ ಸಮಯದಲ್ಲಿ ಯಾವುದೇ ಸಣ್ಣ / ಪ್ರಮುಖ ಘಟನೆಗಳಿಲ್ಲದೆ ಯಶಸ್ಸಿನೊಂದಿಗೆ ಪೂರ್ಣಗೊಂಡಿರುತ್ತದೆ.
ಕರ್ನಾಟಕ ರಾಜ್ಯದಿಂದ ಹೊರಡುವ ಹಜ್ ಯಾತ್ರಾರ್ಥಿಗಳಿಗೆ, ಮಂಗಳೂರು, ಹೈದರಾಬಾದ್ ಮತ್ತು ಗೋವಾ ಎಂಬಾರ್ಕೇಷನ್ ಪಾಯಿಂಟ್‍ಗಳನ್ನು ಪುನಃಸ್ಥಾಪಿಸಲು ಕರ್ನಾಟಕ ರಾಜ್ಯ ಹಜ್ ಸಮಿತಿಯು ಸಲಹೆಯನ್ನು ನೀಡಿದ್ದು,  ಮಾನ್ಯ ಸಚಿವರು ಈ ಕುರಿತು ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳಲು ಒಪ್ಪಿಕೊಂಡಿದ್ದಾರೆ.

Contact Your\'s Advertisement; 9902492681

ಹಜ್ ಯಾತ್ರೆಯ ವಿಮಾನಗಳ ನಿರ್ಗಮನದ ಸಮಯದಲ್ಲಿ ಒಂದು ಅಥವಾ ಎರಡು ವಿಮಾನಗಳೊಂದಿಗೆ 250-300 ಯಾತ್ರಿಕರ ಸಾಮಥ್ರ್ಯದ ವಿಮಾನಗಳ ಹಂಚಿಕೆಗೆ ಸಲಹೆಯನ್ನು ನೀಡಲಾಗಿದ್ದು, ಸನ್ಮಾನ್ಯ ಸಚಿವರು ಈ ಕುರಿತು ಪರಿಶೀಲಿಸಲು ಒಪ್ಪಿಕೊಂಡಿರುತ್ತಾರೆ.

ಆಯ್ಕೆಯಾದ ಯಾತ್ರಾರ್ಥಿಗಳ ವೀಸಾಗಾಗಿ ಅಂತರರಾಷ್ಟ್ರೀಯ ಪಾಸ್‍ಪೆÇೀರ್ಟ್‍ಗಳನ್ನು ರಾಜ್ಯದಿಂದ  ಮುಂಬೈನ ಭಾರತೀಯ ಹಜ್ ಸಮಿತಿಗೆ ಮತ್ತು ಹಿಂದಕ್ಕೆ ಸಾಗಿಸುವ ಕ್ರಮವನ್ನು ತಪ್ಪಿಸಲು ಅನುವಾಗುವಂತೆ ಆಯಾ ರಾಜ್ಯ ಹಜ್ ಸಮಿತಿಗಳ ಮೂಲಕ ತೀರ್ಥಯಾತ್ರೆಗಾಗಿ ವೀಸಾವನ್ನು (ಅನ್‍ಲೈನ್ ನಲ್ಲಿ ಲಭ್ಯವಿರುವ) ಪಡೆಯಲು ಸಲಹೆಯನ್ನು ಮಾಡಿದ್ದು. ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾನ್ಯ ಸಚಿವರು ಭರವಸೆ ನೀಡಿದರು.

ಹಜ್ – 2022ರ ಸಮಯದಲ್ಲಿ ಹಜ್ ಯಾತ್ರಾರ್ಥಿಗಳಿಗೆ ಸೂಟ್‍ಕೇಸ್‍ಗಳನ್ನು ವಿತರಿಸಿದ ಏಜೆನ್ಸಿಯ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಸನ್ಮಾನ್ಯ ಕೇಂದ್ರ ಸಚಿವರು ಭರವಸೆ ನೀಡುತ್ತಾ, ಮುಂಬರುವ ವರ್ಷದಲ್ಲಿ ಹಜ್ ಯಾತ್ರಾರ್ಥಿಗಳಿಗೆ ಸೂಟ್‍ಕೇಸ್‍ಗಳನ್ನು ವಿತರಿಸಲಾಗುವುದಿಲ್ಲ ಎಂದು ತಿಳಿಸಿದರು.

ಹಜ್ 2022 ರ ಸಮಯದಲ್ಲಿ ಯಾತ್ರಾರ್ಥಿಗಳಿಗೆ ವಿತರಿಸಲಾದ ಮೊಬೈಲ್ ಸಿಮ್ ಕಾರ್ಡ್‍ಗಳು ಅನೇಕ ಸಮಸ್ಯೆಗಳನ್ನು ಹೊಂದಿದ್ದವು ಎಂದು ಮಾನ್ಯ ಸಚಿವರು ಅಭಿಪ್ರಾಯಿಸಿದ್ದು, ಮತ್ತು ಅದ್ದರಿಂದ ಅಂತರರಾಷ್ಟ್ರೀಯ ರೋಮಿಂಗ್ ಸೌಲಭ್ಯವನ್ನು ಹೊಂದಿರುವ ಭಾರತದ ಯಾವುದೇ ಕಂಪನಿಯ ಮೊಬೈಲ್ ಸಿಮ್ ಕಾರ್ಡ್‍ಗಳನ್ನು ಸಂಪರ್ಕಿಸಿ, ಆಯ್ಕೆಯಾದ ಹಜ್ ಯಾತ್ರಾರ್ಥಿಗಳಿಗೆ ಅದನ್ನು ವಿತರಿಸಬಹುದು ಎಂದು ಅಭಿಪ್ರಾಯ ಪಟ್ಟರು.

ಮಕ್ಕಾ ಮತ್ತು ಮದೀನಾ ನಗರಗಳಲ್ಲಿ ಹಜ್ ಯಾತ್ರಾರ್ಥಿಗಳಿಗೆ ನೀಡಲಾಗುವ ವಸತಿ ಸೌಕರ್ಯದ ಆಯ್ಕೆ ಮತ್ತು ಹಂಚಿಕೆಯ ವಿಷಯದಲ್ಲಿ ರಾಜ್ಯ ಹಜ್ ಸಮಿತಿಗಳ ಪಾತ್ರವಿರುತ್ತದೆ. ಸನ್ಮಾನ್ಯ ಸಚಿವರು ಸೌದಿ ಅರೇಬಿಯಾದಲ್ಲಿ ಯಾತ್ರಾರ್ಥಿಗಳು ತಂಗಿರುವ ಸಮಯದಲ್ಲಿ ಆಹಾರ ಪೂರೈಸುವ ಕಾರ್ಯಕ್ರಮವನ್ನು ರೂಪಿಸಬೇಕೆಂದು ತಿಳಿಸಿದರು.

ಹಜ್ ಯಾತ್ರಾರ್ಥಿಗಳಿಗೆ ವಿದೇಶಿ ವಿನಿಮಯದ ಮೊತ್ತವನ್ನು ನೀಡುವ ಬಗ್ಗೆ ಮಾನ್ಯ ಸಚಿವರು ಚರ್ಚಿಸುತ್ತಾ, ಹಜ್ ಯಾತ್ರಿಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಅಗತ್ಯವಾದ ವಿದೇಶಿ ಕರೆನ್ಸಿಯನ್ನು ಭಾರತದಲ್ಲಿ ಸಂಗ್ರಹಿಸಬಹುದು ಎಂದು ಅಭಿಪ್ರಾಯಿಸುತ್ತಾ, ಈ ವಿಷಯದ ಕುರಿತು ಪರಿಶೀಲಿಸಲಾಗುವುದು, ಆಯ್ಕೆಯಾದ ಯಾತ್ರಾರ್ಥಿಗಳಿಗೆ ರಾಜ್ಯವಾರು ಲಸಿಕೆಯನ್ನು ವಿತರಿಸುವ ವಿಷಯದ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಬಹಳಷ್ಟು ರಾಜ್ಯ ಹಜ್ ಸಮಿತಿಗಳು ಹಜ್ ಯಾತ್ರೆಯ ಸಮಯದಲ್ಲಿ ಯಾತ್ರಿಕರ ಸೇವೆಗಾಗಿ ನಿಯೋಜಿಸುವ ಖಾದೀಮುಲ್ ಹುಜ್ಜಾಜ್‍ಗಳಲ್ಲಿ ಪುನರಾವರ್ತಿತರ ಬದಲಿಗೆ ಕಡ್ಡಾಯವಾಗಿ ತರಬೇತಿಗೆ ಒಳಪಟ್ಟ ಹೊಸಬರನ್ನು ನಿಯೋಜಿಸುವ ಕುರಿತು ಹಾಗೂ ರಾಜ್ಯ ಹಜ್ ಸಮಿತಿ ಸದಸ್ಯರನ್ನೊಳಗೊಂಡಂತೆ ಖಾಸಗಿ ವ್ಯಕ್ತಿಗಳನ್ನು ನಿಯೋಜಿಸುವ ಕುರಿತು ಸಲಹೆಯನ್ನು ನೀಡಿದ್ದು, ಮಾನ್ಯ ಸಚಿವರು ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು.

ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ ಹಾಗೂ ಬೆಂಗಳೂರಿನ ಹಜ್ ಭವನದ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುದಾನ ನೀಡಬೇಕೆಂದು ಸಲಹೆ ಮಾಡಿದಾಗ, ಮಾನ್ಯ ಸಚಿವರು ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು..

ಸನ್ಮಾನ್ಯ ಸಚಿವರು ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರು ಮತ್ತು ಸಮಿತಿಯ ಎಲ್ಲಾ ಸದಸ್ಯರು, ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಹಾಗೂ ರಾಜ್ಯ ಹಜ್ ಸಮಿತಿಯ ಇತರ ಅಧಿಕಾರಿಗಳನ್ನು, ಹಜ್ ಸೀಸನ್ ಹಾಗೂ ಹಜ್ ಕ್ಯಾಂಪ್‍ನ್ನು ಯಶಸ್ವಿಯಾಗಿ ಆಯೋಜಿಸಿ  ನಿರ್ವಹಿಸಿರುವ ಕುರಿತು ಅಭಿನಂದಿಸಿದರು.

ಹಜ್ – 2023 ಗಾಗಿ ಉದ್ದೇಶಿತ ಅರ್ಜಿದಾರರಿಂದ ಹಜ್ ಅರ್ಜಿ ದಾಖಲಿಸುವ ಪ್ರಕ್ರಿಯೆಯು, 2022ರ ನವೆಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದ್ದು ಮತ್ತು ಅದಕ್ಕಾಗಿ ದರಗಳು ಕಡಿಮೆಯಾಗುವ ಸಾಧ್ಯತೆಯಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಕ್ಕಾ ಮತ್ತು ಮದೀನಾದಲ್ಲಿ ಹಜ್ ಯಾತ್ರಾರ್ಥಿಗಳಿಗೆ ಸೌಲಭ್ಯಗಳು ಉತ್ತಮವಾಗಿರುತ್ತವೆ ಎಂದು ತಿಳಿಸಿದರು.

ಬೆಂಗಳೂರಿನ ಹಜ್ ಭವನವು 2 ರಿಂದ 3 ಹಾಲ್‍ಗಳನ್ನು ಹಾಗೂ ಸಾಕಷ್ಟು ಕೊಠಡಿಗಳನ್ನು ಹೊಂದಿದ್ದು. ಸೆಮಿನಾರ್‍ಗಳು, ಸಮ್ಮೇಳನಗಳು ಹಾಗೂ ಇನ್ನೀತರೇ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಹಜ್ ಸಮಿತಿಯ ಸದಸ್ಯರುಗಳಾದ ಡಾ. ಮೊಹಮ್ಮದ್ ಕಬೀರ್ ಅಹ್ಮದ್, ಮೊಯಿನುದ್ದೀನ್ ಮತ್ತು ಚಾಂದ್ ಪಾಷಾ ಅವರೊಂದಿಗೆ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರಾದ ರೌಫುದ್ದೀನ್ ಕಚೇರಿವಾಲೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here