ಸಮಾಜದ ನೊಂದವರ ನೆರವಿಗೆ ಧಾವಿಸಿ

0
12

ಕಲಬುರಗಿ; ಇಂದು ಪಾಶ್ಚಿಮಾತ್ಯ ಸಂಸ್ಕ್ರತಿಗೆ ಮಾರು ಹೋಗದೆ ಕಾಟಾಚಾರಕ್ಕಾಗಿ ಸಮಾಜ ಸೇವೆ ಮಾಡದೇ ನಿಜವಾದ ಸಾಮಾಜಿಕ ಕಳಕಳಿಯನ್ನು ಯುವಕರು ಹೊಂದಬೇಕಾಗಿದೆ, ಯಾರು ಕಷ್ಟದಲ್ಲಿ ಇರುತ್ತಾರೆಯೋ ಅಂತವರ ನೆರವಿಗೆ ಇಂದಿನ ಯುವ ಸಮುದಾಯ ಮುಂದೆ ಬರಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಭವನದಲ್ಲಿ ನಿಸರ್ಗ ಗ್ರಾಮಿಣ ಅಭಿವೃದ್ಧಿ ಸೇವಾ ಸಂಸ್ಥೆ ಏರ್ಪಡಿಸಿದ ಸಂಸ್ಥೆಯ ದ್ವಿ ದಶಮಾನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರಿಗೆ ನಿಸರ್ಗ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಮಾಜ ಸೇವೆ ಮಾಡುವ ಮನೋಭಾವ ಮತ್ತು ಇಚ್ಚಾಶಕ್ತಿ ಯುವ ಸಮುದಾಯದಲ್ಲಿ ಬೆಳೆಯಬೇಕಾಗಿದೆ. ಇಂತಹ ಕಾರ್ಯಗಳಿಗಾಗಿ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ದಿವ್ಯ ಸಾನಿಧ್ಯ ವಹಿಸಿದ ಖಜೂರಿಯ ಕರುಣೇಶ್ವರ ಮಠದ ಪೂಜ್ಯರಾದ ಮುರುಗೇಂದ್ರ ಶಿವಯೋಗಿಗಳು, ಕನ್ನಡ ನಾಡು ಮತ್ತು ಜಲ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಪ್ರಶಸ್ತಿಗಳಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜೈ ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಸಚಿನ್ ಫರಹತಾಬಾದ ರವರು ಸಂವಿಧಾನದ 371 (ಜೆ) ಕಲಂ ಅನ್ನು ಸರಿಯಾದ ರೀತಿಯಲ್ಲಿ ಪ್ರಯೋಜನಕಾರಿಯಾಗಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಪ್ರಮಾಣೀಕಥನ, ಪ್ರಯತ್ನ ಮತ್ತು ಸಮಯ ಪ್ರಜ್ಞೆಯಿಂದ ಸಾಮಾಜಿಕ ಕಳಕಳಿಯನ್ನು ಹೊಂದಬೇಕಾಗಿದೆ. ಸರಕಾರ ನೀಡುವ ಶಿಫಾರಸ್ಸಿನ ಪ್ರಶಸ್ತಿಗಳಿಗಿಂತ ಸಂಘ ಸಂಸ್ಥೆಗಳು ಕೊಡಮಾಡುವ ಪ್ರಶಸ್ತಿಗಳಲ್ಲಿ ಹೆಚ್ಚಿನ ಮೌಲ್ಯ ಇರುತ್ತದೆ ಎಂದು ಹೇಳಿದರು.

ಪ್ರಗತಿಪರ ಚಿಂತಕ ಮಹಾದೇವ ಧನ್ನಿ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎನ್. ಕಪನೂರ, ಸಂಸ್ಥೆಯ ಕಾರ್ಯದರ್ಶಿ ಧೂಳಪ್ಪ ಧ್ಯಾಮನಕರ್ ಎಂ.ಡಿ. ಸಿದ್ದೀಕಿ, ಇತರರು ಉಪಸ್ಥಿತರಿದ್ದರು.
ಇದೇ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ನಿಸರ್ಗ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಆರಂಭಕ್ಕೆ ಕು. ಆಕಾಂಕ್ಷಾ ಪುರಾಣಿಕ್ ಹಾಗೂ ಹಾಗೂ ಕು. ಅನನ್ಯಾ ಗೋಲ್ಡಸ್ಮಿತ್ ಅವರಿಂದ ಭರತನಾಟ್ಯ ಪ್ರದರ್ಶನ ಮಾಡಲಾಯಿತು.

ವಿವಿಧ ಕಲಾ ತಂಡಗಳಿಂದ ಜಾನಪದ ಸಂಭ್ರಮ, ಸಂಪ್ರದಾಯ ಪದ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಮಹಾಂತೇಶ ನಂದಗಿರಿ, ಹಣಮಂತ ರೇವಣ್ಣೋರು, ದಯಾನಂದ ತಳಕೇರಿ, ರವಿ ಸರಾಫ್, ದೇವರಾಜ, ಸಿದ್ದರಾಮ ರಾಜಮಾನೆ, ಸಂತೋಶ ಹಂಗರಗಿ, ವೆಂಕಟೇಶ ತಿವಾರಿ, ಮಲ್ಲಿಕಾರ್ಜುನ ಲಿಗಾಡೆ, ಪೀರಪ್ಪ ಹಾದಿಮನಿ, ಬಸವರಾಜ ಕಟ್ಟಿಮನಿ, ಶಾಮಸುಂದರ್ ಜೋಶಿ, ಶ್ರೀನಿವಾಸ ಕಾಡಾದಿ, ಧರ್ಮಣ್ಣ ಧನ್ನಿ, ಸಿದ್ದರಾಮ ನಡಿಗೇರಿ, ಕಲ್ಯಾಣಿ ನವರಂಗ್, ನಾಗೇಂದ್ರಪ್ಪ ಮುಡ್ಡಿ ಭಾಗವಹಿಸಿದರು.
ಪ್ರಕಾಶ ಹದನೂರ ನಿರೂಪಿಸಿದರು, ಶಿಕ್ಷಕ ಮುರುಳಿಧರ್ ಟೋಣಪೆರವರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here