ವಿಜಯನಗರ: ಸಚಿವ ನಾಗೇಂದ್ರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ: ಪತ್ರೇಶ್ ಹಿರೇಮಠ್

0
39
  • ಕೊಟ್ರೇಶ್.ವೈ

ಹಗರಿಬೊಮ್ಮನಹಳ್ಳಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಭಾಗಿಯಾಗಿರುವ ಬಗ್ಗೆ ಯಾವ ದಾಖಲೆ ಇಲ್ಲದಿದ್ದರೂ ರಾಜ್ಯ ಬಿಜೆಪಿ ನಾಯಕರು ನೈತಿಕತೆ ಹಾಗೂ ಹೊಣೆಗಾರಿಕೆ ಮರೆತು ರಾಜೀನಾಮೆ ಕೇಳುವ ಮೂಲಕ ಸಚಿವ ನಾಗೇಂದ್ರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಕಿಡಿಕಾರಿದ್ದಾರೆ.

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ನಾಗೇಂದ್ರ ಪಾತ್ರ ಈ ಪ್ರಕರಣದಲ್ಲಿ ಇಲ್ಲದೇ ಇರುವುದರಿಂದ ಈಗಾಗಲೇ ಸಿಎಂ ಸಿದ್ಧರಾಮಯ್ಯನವರು ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಸಿಐಡಿಗೆ ವರ್ಗಾಯಿಸಿ ಭ್ರಷ್ಟರ ವಿರುದ್ಧ ಸಮರ ಸಾರಿದ್ದು ತಪ್ಪತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ಪತ್ರೇಶ್ ತಿಳಿಸಿದರು

Contact Your\'s Advertisement; 9902492681

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಚೆಕ್ ಮೂಲಕ ಲಂಚ, ಕೋವಿಡ್ ಖರೀದಿ ಹಗರಣ, ಗುತ್ತಿಗೆದಾರರಿಂದ ಲಂಚ ಸೇರಿ ನೂರಾರು ಹಗರಣ ನಡೆಸಿರುವ ನೈತಿಕತೆ ಇಲ್ಲದ ಬಿಜೆಪಿ ನಾಯಕರು ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ ಬೆಳವಣಿಗೆ ಎಂದ ಪತ್ರೇಶ್ ಬಿಜೆಪಿ ನಾಯಕರು ಇಂತಹ ಅಪಪ್ರಚಾರ ನಿಲ್ಲಿಸಬೇಕೆಂದು ತಾಕೀತು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here