ರೇವಗ್ಗಿ (ರಟಕಲ್) ರೇಣುಕಾಚಾರ್ಯರ ಸ್ಪಟಿಕ ಲಿಂಗ ಭಗ್ನ; BJP ಶಾಸಕ ಅವಿನಾಶ್ ಜಾಧವ್ ವಿರುದ್ಧ ಆಕ್ರೋಶ

0
2208

ಕಲಬುರಗಿ: ಕಾಳಗಿ ತಾಲ್ಲೂಕಿನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ರೇವಗ್ಗಿ (ರಟಕಲ್) ಶ್ರೀ ಕ್ಷೇತ್ರದ 51 ಅಡಿ ಜಗದ್ಗುರು ರೇವಣಸಿದ್ದೇಶ್ವರ ಮೂರ್ತಿಯ ಸ್ಪಟಿಕ ಲಿಂಗವನ್ನು ಭಗ್ನವಾಗಿದೆ ಇದು ವೀರಶೈವರಿಗೆ ಅಪಮಾನವಾಗಿದೆ ಎಂದು ಕಾಳಗಿ ತಾಲೂಕು ವೀರಶೈವ ಲಿಂಗಾಯತ ಮುಖಂಡ ರೇವಣಸಿದ್ದಪ್ಪ ಮಾಸ್ಟರ್ ಸಲಗರ ಆಕ್ರೋಶ ಹೋರಹಾಕಿದ್ದಾರೆ.

ಸುದ್ದಿಗಾರರೋಂದಿಗೆ ಮಾತನಾಡಿ, ಜಗದ್ಗುರು ರೇವಣಸಿದ್ದೇಶ್ವರ ಸ್ಪಟಿಕ ಲಿಂಗದ ಕೆಳಗೆ ನೇರವಾಗಿ ಕಾಣುವಂತೆ ಡಾ.ಅವಿನಾಶ್ ಉಮೇಶ್ ಗೋಪಾಲರಾಚ ಜಾಧವ ಎಂದು ಹೆಸರು ಬರೆಸಿದ್ದಾರೆ.

Contact Your\'s Advertisement; 9902492681

ಸರ್ವ ಜನಾಂಗದ ಆರಾಧ್ಯ ದೈವ ರೇವಣಸಿದ್ದೇಶ್ವರ ದರ್ಶನ ಮಾಡಲು ಹೊರಟ ಭಕ್ತರು ಮೊದಲು ಕೆತ್ತಿಸಿರುವ ನಾಮಫಲಕಕ್ಕೆ ತಲೆ ಬಾಗಬೇಕು. ಈ ಸುದ್ದಿ ತಾಲ್ಲೂಕಿನ್ಯಾದ್ಯಂತ ಹರಡಿರುವ ಹಿನ್ನೆಲೆ ಸ್ಪಟಿಕ ಲಿಂಗಕ್ಕೆ ಉಳಿಪೆಟ್ಟಿಂದ ತೆರೆವುಗೊಳಿಸಲು ಮುಂದಾದಗ ಲಿಂಗ ಭಗ್ನವಾಗಿದೆ, ಜಾಧವ ಕುಟುಂಬವು ವೀರಶೈವ ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ ಈ ನೀತಿ ನಿಯಮಗಳನ್ನು ಅನುಸರಿಸಿದ್ದು ಎಷ್ಟರ ಮಟ್ಟಿಗೆ ಸರಿ ಸ್ವಲ್ಪ ಅವಲೋಕನ ಮಾಡಿಕೋಬೇಕು ವೀರಶೈವ ಲಿಂಗಾಯತ ಸಮಾಜದವರು ಎಂದು ಹೇಳಿದರು.

ಇದಲ್ಲದೆ, ಮಂಜುನಾಥ ಎಂಬ ಕಾರ್ಯದರ್ಶಿ ಎಲ್ಲಾ ದೇವಸ್ಥಾನದಲ್ಲಿ ಅಮಾತು ಮಾಡಿಕೊಂಡ ಇತನು ಕೊನೆಗೆ ರೇವಣಸಿದ್ದೇಶ್ವರ ದೇವಸ್ಥಾನ ಉದ್ದಾರ ಮಾಡಕ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡು ಬರುತ್ತಾರೆ, ದೇವಸ್ಥಾನದ ಸಿಬ್ಬಂದಿಗಳು, ಜಾಧವ ಕುಟುಂಬದ ಅಧ್ಯಕ್ಷರು ಸೇರಿ ದೇವಸ್ಥಾನದ ಹಣವೇಲ್ಲವೂ ಲೂಟಿ ಮಾಡುವ ಪ್ರಕಿಯೇ ನಿರ್ಮಾಣವಾಗಿದೆ.

ತಂದೆ ಒಳ್ಳೆಯ ಕೆಲಸ ಮಾಡಿದ್ದಾರೆ, ಮಗ ಒಳ್ಳೆಯ ಕೆಲಸಕ್ಕೆ ಮಸಿಬಡಿಯುತ್ತಿದ್ದಾನೆ, ದೇವಸ್ಥಾನಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ನಾಂದಿ ಹಾಡಿದ್ದಾನೆ, ರಸೀದಿ ಇಲ್ಲದೆ ಸಾಮಾನು ನೀಡುತ್ತಿದ್ದಾರೆ, ವಿವಿಧ ಕೆಲಸಾದಿ ಕೈಂಕರ್ಯಗಳು ಗುತ್ತಿಗೆದಾರ ಪರಸಂಟೇಜ್ ಲೇಕ್ಕದಲ್ಲಿ ನಡೆದೀದೆ ಇದು ಹೀಗೆ ಬಿಟ್ಟರೆ ವೀರಶೈವರ ಸ್ವಾಭಿಮಾನ ಹರಾಜು ಹಾಕುವುದು ಪಕ್ಕಾ ಎಂದು ಭಾವಿಸಬೇಕು..!

ಉಮೇಶ್ ಜಾಧವ, ಅವಿನಾಶ್ ಜಾಧವ್ ಮೂರ್ತಿ ದಾನಿಗಳಾದರೆ ಅಕ್ಕ ಪಕ್ಕ ಹೆಸರಾಕಬೇಕು, ಅಧಿಕಾರ ದುಡ್ಡಿನ ಮದವಿದೆ ಎಂದು ತೋರಿಸುವ ಹಿನ್ನೆಲೆಯಿಂದ ರೇಣುಕಾಚಾರ್ಯರ ಭಕ್ತರು ಮೂರ್ತಿಗೆ ಪುಷ್ಪ ಮಾಲೆ ಹಾಕುವ ಸ್ಥಳದಲ್ಲೆ ಅವರ ಹೆಸರನ್ನು ಬರೆಸಿರುವುದು ಅಕ್ಷರಶಃ ತಪ್ಪು ದಾರಿ ಅನುಸರಿದ್ದಾರೆ. ಅಲ್ಲಿನ ಭಕ್ತರು ಅವರ ಹೆಸರಿನ ಮೇಲೆ ಪುಷ್ಪ ಮಾಲೆ ಹಾಕಬೇಕು ಇದು ಸಮಸ್ತ ವೀರಶೈವರು ಸರ್ವ ಜನಾಂಗದವರಿಗೆ ಅಪಮಾನ ಮಾಡಿದಂತೆ ಸ್ವಾಮಿ! ಪ್ರಜ್ಞಾವಂತರು ನಿಮ್ಮನ್ನೆ ಪ್ರಶ್ನೆ ಮಾಡಿಕೊಳ್ಳಿ, ಭಗ್ನವಾಗಿರುವ ಮೂರ್ತಿಯನ್ನು ಮರಳಿ ಪೂಜೆ ಮಾಡಬೇಕಾದರೆ ಪಂಚಚಾರ್ಯರ ಜಗದ್ಗುರುಗಳ ಸಮ್ಮುಖದಲ್ಲಿ ಪ್ರತಿಮೆ ಶುದ್ದೀಕರಣ ಮಾಡಿ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು.

ಚಿಂಚೋಳಿ ಕ್ಷೇತ್ರದ ಶಾಸಕರಾದ ಡಾ.ಅವಿನಾಶ್ ಜಾದವ್ ಮತ್ತು ಸಂಸದ ಡಾ.ಉಮೇಶ್ ಜಾಧವ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು, ಇಲ್ಲವಾದಲ್ಲಿ ಹೋರಾಟ ಸಮಿತಿ ರಚನೆ ಮಾಡಿ ಶ್ರೀ ರೇವಣಸಿದ್ದೇಶ್ವರ ಗುಡ್ಡದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಲ್ಲಿಕಾರ್ಜುನ ಪಾಟೀಲ ಹುಳಗೇರಾ, ಕಾಳಗಿ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ರಾಮಶೆಟ್ಟಿ ಪಾಟೀಲ, ಶಿವಶರಣಪ್ಪ ಕಮಲಾಪುರ, ಶಿವಕುಮಾರ, ಧರ್ಮರಾಜ ಕಲ್ಲಹಿಪ್ಪರಗಾ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here