ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಆಲಿಸಿದ ವಾಡಿ ಪಕ್ಷದ ಮುಖಂಡರು

0
43

ವಾಡಿ: ಮನ್ ಕಿ ಬಾತ್’ ನ 107 ನೇ ಸಂಚಿಕೆ ನಮ್ಮಲ್ಲಿ ದೇಶಾಭಿಮಾನದ ಜೊತೆಗೆ ನಮ್ಮ ಜವಬ್ದಾರಿ ಹೆಚ್ಚಿಸಿದೆ ಎಂದು ಸ್ಥಳೀಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಪಟ್ಟಣದ ಬಿಜೆಪಿ ಕಛೇರಿಯಲ್ಲಿನ ಹಮ್ಮಿಕೊಂಡಿದ್ದ ಮನ್ ಕಿ ಬಾತ್ ಕಾರ್ಯಕ್ರಮ ಆಲಿಸಿದ ನಂತರ ಮಾತನಾಡುತ್ತಾ ಮೋದಿ ಅವರು 26/11 ಮುಂಬೈ ಭಯೋತ್ಪಾದಕ ದಾಳಿಯು 15 ವರ್ಷ ಮುಗಿದಿದೆ ಎಂದು ಸಂತ್ರಸ್ತರಿಗೆ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

Contact Your\'s Advertisement; 9902492681

ನವೆಂಬರ್ 26 ರಂದು ಸಂವಿಧಾನ ಸಭೆಯು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ವಾರ್ಷಿಕೋತ್ಸವದ ಬಗ್ಗೆ,ನಾವು ಆರ್ಥಿಕವಾಗಿ ಸಭಲರಾಗಲು ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸಲು ಹೊಸ ಪ್ರಯತ್ನಗಳ ಬಗ್ಗೆ,ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಖರೀದಿಸಲು ಸ್ಥಳೀಯಕ್ಕಾಗಿ ಧ್ವನಿ ಎಂಬ ಘೋಷಣೆ ಇವೆಲ್ಲವೂ ಅವರಿಂದ ಕೇಳಿದ‌ ನಮಗೆ ದೇಶದ ಹೆಮ್ಮೆಯ ಮೂಡಿಸುವುದರ ಜೊತೆಗೆ ನಮ್ಮಲ್ಲಿ ನಮ್ಮ ಪ್ರಧಾನಿ ಅವರು ಇನ್ನಷ್ಟು ದೇಶ ಸೇವೆ ಹಂಬಲ ನಮ್ಮಲ್ಲಿ ಮೂಡಿಸಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ವಿಠಲ ನಾಯಕ, ರಾಮಚಂದ್ರ ರಡ್ಡಿ,ಸಿದ್ದಣ್ಣ ಕಲ್ಲಶೆಟ್ಟಿ, ಗಿರಿಮಲ್ಲಪ್ಪ ಕಟ್ಟೀಮನಿ, ಭೀಮರಾವ ದೊರೆ,ಅರ್ಜುನ ಕಾಳೆಕರ,ಯಮನಪ್ಪ ನವನಳ್ಳಿ, ಕಿಶನ ಜಾಧವ, ಹರಿ ಗಲಾಂಡೆ,ರವೀಂದ್ರ ನಾಯಕ, ರಿಚರ್ಡ್‌ ಮಾರೆಡ್ಡಿ,ಆನಂದ ಇಂಗಳಗಿ, ಅಯ್ಯಣ್ಣ ದಂಡೋತಿ, ಹೀರಾ ನಾಯಕ,ಬಾಬು ಕುಡಿ,ದತ್ತಾ ಖೈರೆ, ಪ್ರೇಮ ರಾಠೊಡ, ವಿಶ್ವರಾಧ್ಯ ತಳವಾರ, ಮನೀಷ್ ವಾಲಿಯ,ಪ್ರಕಾಶ ಪುಜಾರಿ,ಸಂತೋಷ ಪವಾರ,ಜಯಂತ ಪವಾರ,ಕುಮಾರ ಜಾಧವ,ಚಂದ್ರಶೇಖರ ಬೆಣ್ಣೂರಕರ, ಮಲ್ಲಿಕಾರ್ಜುನ ಸಾತಖೇಡ್, ಬನಶಂಕರ‌ ಮೌಸ್ತರ ಮಹಿಳಾ ಮೂರ್ಚಾದ ಯಂಕಮ್ಮ ಗೌಡಗಾಂವ, ಅನ್ನಪೂರ್ಣ ದೊಡ್ಡಮನಿ,ನಿರ್ಮಲ ಇಂಡಿ,ಶರಣಮ್ಮ ಯಾದಗಿರಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here